newsics.com
ಬಳ್ಳಾರಿ: ರೇಣುಕಾಸ್ವಾಮಿ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಲಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ಫುಲ್ ಟೆನ್ಷನ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಬೆಳಗಿನ ಉಪಹಾರ ಸೇವಿಸದೇ ಟೆನ್ಷನ್ನಲ್ಲಿ ಕುಳಿತಿದ್ದಾರಂತೆ. ಜೈಲು ಸಿಬ್ಬಂದಿಯಿಂದ ಜಾಮೀನು ಅರ್ಜಿಯ ತೀರ್ಪು ಯಾವಾಗ ಬರುತ್ತೆ ಎಂದು ಕೇಳಿದ್ದಾರೆ.
ಟೆನ್ಷನ್ನಲ್ಲಿರುವ ದರ್ಶನ್, ಜೈಲು ಅಧಿಕಾರಿಗಳ ಬಳಿ ಖಾಸಗಿ ಚಾನೆಲ್ ಗೆ ಬೇಡಿಕೆ ಇಟ್ಟಿದ್ದಾರೆ. ಜಾಮೀನು ಅರ್ಜಿಯ ತೀರ್ಪಿನ ಮಾಹಿತಿ ತಿಳಿಯಲು ಖಾಸಗಿ ಕನ್ನಡ ಚಾನೆಲ್ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.