newsics.com
ಬಿಗ್ ಬಾಸ್ ಸರಣಿಯಲ್ಲಿ ಸುದೀಪ್ ಬರೋಬ್ಬರಿ 10 ವರ್ಷ ಪೂರೈಸಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ವರೆಗೂ ಮಾತ್ರ ಅಗ್ರಿಮೆಂಟ್ ಮಾಡಿಕೊಂಡಿದ್ರು ಎಂಬ ಮಾತು ಕೇಳಿ ಬರ್ತಿದೆ. ಅಷ್ಟೇ ಅಲ್ಲದೇ ಈಗ 11 ನೇ ಸೀಸನ್ ಬೋನಸ್ಸಾ ಅನ್ನುವ ಮಾತು ಕೇಳಿ ಬರ್ತಿದೆ.
ಬಿಗ್ ಬಾಸ್ ಹೋಸ್ಟ್ ಸುದೀಪ್ ಕೇವಲ 10 ಸೀಸನ್ ಮಾತ್ರ ಮಾಡ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅಗ್ರಿಮೆಂಟ್ ಅಲ್ಲಿವರೆಗೆ ಮಾತ್ರ ಆಗಿತ್ತು ಅನ್ನೋದು ಆಗಲೇ ಕೇಳಿ ಬಂದಿತ್ತು. ಅದೇ ಕಾರಣಕ್ಕೇನೆ ಬಿಗ್ ಬಾಸ್ ಸೀಸನ್-11 ಮಾಡ್ತಾರಾ ಮಾಡಲ್ವಾ ಅನ್ನೋ ಪ್ರಶ್ನೆ ಕೂಡ ಇತ್ತು. ಆದ್ರೆ ಸದ್ಯ ಬಿಗ್ ಬಾಸ್ ಸೀಸನ್ 11 ಬೋನಸ್ ಅನ್ನೋ ಅರ್ಥದಲ್ಲಿಯೇ ಸುದ್ದಿಗಳು ಕೇಳಿ ಬರುತ್ತಿವೆ. ಈ ಒಂದು ಸೀಸನ್ ಆದ್ಮೇಲೆ ಸುದೀಪ್ ಜಾಗಕ್ಕೆ ಬೇರೆ ಹೋಸ್ಟ್ ಬರ್ತಾರೆ ಅನ್ನುವ ಅನುಮಾನ ಕೂಡ ಶುರು ಆಗಿದೆ.
ವಾರದ ಎರಡು ದಿನ ಮಾತ್ರ ಕಿಚ್ಚ ಸುದೀಪ್ ದೊಡ್ಮನೆಗೆ ಬರ್ತಿದ್ದರು. ತಮ್ಮ ಪಂಚಾಯತಿ ಮಡಿ ಹೊರಟು ಹೋಗುತ್ತಿದ್ದರು. ಆದರೂ, ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ಏನೂ ಅಲ್ಲ ಅನ್ನುವ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಏನೂ ಹೊರ ಬಂದಿಲ್ಲ.