newsics.com
ಟೆಲ್ ಅವೀವ್: ಏಕಕಾಲದಲ್ಲಿ ಹೆಜ್ಬೊಲ್ಲಾ ಸೇರಿದಂತೆ ಹಲವು ಶತ್ರು ಪಾಳಯಗಳೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಮತ್ತೊಂದು ಮಹತ್ವದ ಮುನ್ನಡೆ ಪಡೆದಿದ್ದು, ಇಬ್ಬರು ಹಮಾಸ್ ನಾಯಕರನ್ನು ಇಸ್ರೇಲ್ ವಾಯುಸೇನೆ ಹೊಡೆದುರುಳಿಸಿದೆ.
ಇಸ್ರೇಲ್ ಸೇನೆ ಮತ್ತು ISA (Israel Security Agency) ಜಂಟಿ ಕಾರ್ಯಾಚರಣೆ ನಡೆಸಿ ಲೆಬನಾನ್‌ನಲ್ಲಿನ ಹಮಾಸ್‌ನ ಮಿಲಿಟರಿ ವಿಭಾಗದ ಇಬ್ಬರು ಹಿರಿಯ ಭಯೋತ್ಪಾದಕರನ್ನು ಹತ್ಯೆಗೈದಿದೆ.
ಮೃತ ಹಮಾಸ್ ಉಗ್ರ ನಾಯಕರನ್ನು ಮುಹಮ್ಮದ್ ಹುಸೇನ್ ಅಲಿ ಅಲ್ ಮತ್ತು ಮಹಮೂದ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಲೆಬನಾನ್‌ನಲ್ಲಿ ಹಮಾಸ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
https://x.com/IDF/status/1842548523100709038?t=q4mro6–G26aPr7jlaYGVg&s=19