Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ
ಅನಾವರಣಪ್ರಮುಖ

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್
ನವರಾತ್ರಿಯ ಎರಡನೇ ದಿನ ದೇವಿಯ ಆರಾಧನೆ ಸ್ವರೂಪ ಬ್ರಹ್ಮಚಾರಿಣಿ. ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ (ಬಿದಿಗೆ) ತಿಥಿಯಂದು ಬ್ರಹ್ಮಚಾರಿಣಿ ಸ್ವರೂಪಳಾದ ದುರ್ಗಾ ಆರಾಧನೆಯನ್ನು ಮಾಡಬೇಕು. ರಂಗೋಲಿಯಲ್ಲಿ ಅಷ್ಟ ದಳ ವನ್ನು ಬಿಡಿಸಿ, ಕಲಶ ಸ್ಥಾಪನೆ ಮಾಡಿ, ಆ ಕಲಶದಲ್ಲಿ ಈ ಕೆಳಗಿನ ಶ್ಲೋಕದೊಂದಿಗೆ ಬ್ರಹ್ಮಚಾರಿಣಿ ದೇವಿಯನ್ನು ಧ್ಯಾನಿಸಬೇಕು.

ಹಂಸಾರೂಢಾಂ ಶುಕ್ಲ ವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ
ಚತುರ್ಭುಜಾಂ ಸೃಕ್ಸ್ರುವೌ ಚ ಕಮಂಡಲ್ವಕ್ಷಮಾಲಿಕಾಂ
ಬಿಭ್ರಿತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾನೃಪ

ಬ್ರಹ್ಮಚಾರಿಣಿ ದೇವಿಯ ಸ್ವರೂಪದಲ್ಲಿ ಆ ತಾಯಿ ಹಂಸವಾಹಿನಿಯಾಗಿ, ಬಿಳಿಯ ಬಣ್ಣದಲ್ಲಿ ಶೋಭಿಸುತ್ತಾ, ಬಿಳಿಯ ಬಣ್ಣದ ಹೂವಿನ ಮಾಲೆಗಳಿಂದ ಅಲಂಕೃತಳಾಗಿರುತ್ತಾಳೆ. ನಾಲ್ಕು ತೋಳುಗಳಲ್ಲಿ ಯಜ್ಞಕ್ಕೆ ಅವಶ್ಯವಾದ ಸೃಕ್ ಹಾಗೂ ಸೃವ, ಮತ್ತೊಂದರಲ್ಲಿ ಕಮಂಡಲ ಹಿಡಿದರೆ, ಇನ್ನೊಂದರಲ್ಲಿ ಜಪಮಾಲೆ ಇರುತ್ತದೆ. ಆದ್ದರಿಂದ ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ ಬಿಳಿಯ ಬಣ್ಣದ ಹೂವುಗಳನ್ನು ಬಳಸುವುದು ಶ್ರೇಷ್ಠ.

ಈ ದೇವಿಯು ತನ್ನ ಪೂರ್ವ ಜನ್ಮದಲ್ಲಿ ಪರ್ವತ ರಾಜನ ಮನೆಯಲ್ಲಿ ಹುಟ್ಟಿರುತ್ತಾಳೆ. ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಒಂದು ಸಾವಿರ ವರ್ಷಗಳ ಕಾಲ ದೇವಿಯು ಹಣ್ಣು- ಎಲೆಗಳನ್ನು ತಿಂದು ಜೀವಿಸುತ್ತಾಳೆ. ಆ ನಂತರ ಒಂದು ಸಾವಿರ ವರ್ಷ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನು ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ಸಾವಿರಾರು ವರ್ಷ ಆಹಾರವನ್ನೂ ಸೇವಿಸದೆ ತಪಸ್ಸು ಮಾಡಿದ ದೇವಿಯು ಎಲೆಗಳನ್ನು ಸಹ ಸೇವಿಸುವುದನ್ನು ನಿಲ್ಲಿಸಿದ್ದರಿಂದ ಆ ತಾಯಿಗೆ ಅಪರ್ಣಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಎಲ್ಲ ದೇವತೆಗಳ ಶಕ್ತಿ ಸಮೀಕರಣದಿಂದ ಪ್ರಕಟಗೊಂಡ ಸ್ತ್ರೀ ಸ್ವರೂಪ ದಿವ್ಯ ಚೈತನ್ಯಕ್ಕೆ ಪರಮೇಶ್ವರ ತನ್ನ ಕೈಯಲ್ಲಿ ಇದ್ದ ತ್ರಿಶೂಲ ಕೊಟ್ಟರೆ, ಮಹಾವಿಷ್ಣು ತನ್ನ ಆಯುಧವಾದ ಚಕ್ರವನ್ನು ನೀಡುತ್ತಾನೆ. ವರುಣ ಶಂಖವನ್ನು ಕೊಡುತ್ತಾನೆ. ಅಗ್ನಿಯು ಈಟಿಯಂತೆ ಇರುವ ಆಯುಧವನ್ನು ಕೊಡುತ್ತಾನೆ. ವಾಯು ಬಿಲ್ಲನ್ನು ಹಾಗೂ ಎರಡು ಬತ್ತಳಿಕೆ ತುಂಬ ಬಾಣಗಳನ್ನು ನೀಡುತ್ತಾನೆ. ದೇವತೆಗಳ ಒಡೆಯ ಇಂದ್ರ ತನ್ನ ವಜ್ರಾಯುಧ ಹಾಗೂ ತನ್ನ ಬಳಿ ಇರುವ ಐರಾವತದ ಕುತ್ತಿಗೆಯಲ್ಲಿ ಇದ್ದ ಗಂಟೆ ಜಪಮಾಲೆ ಹಾಗೂ ಅಭಿಮಂತ್ರಿತ ಜಲ ತುಂಬಿದ ಕಮಂಡಲ ನೀಡುತ್ತಾನೆ. ಸೂರ್ಯ ತನ್ನ ಕಿರಣಗಳನ್ನು ನೀಡಿದರೆ, ಕಾಲನು ಖಡ್ಗವನ್ನು ಕೊಡುತ್ತಾನೆ. ಕ್ಷೀರ ಸಾಗರವು ಆಭರಣಗಳನ್ನು ಕೊಟ್ಟರೆ, ವಿಶ್ವಕರ್ಮನು ಕೊಡಲಿಯನ್ನು ನೀಡುತ್ತಾನೆ.

ಹಿಮವಂತ ಪರ್ವತವು ವಾಹನವಾಗಿ ಸಿಂಹವನ್ನು, ಕುಬೇರ, ಸರ್ಪರಾಜ ಇತ್ಯಾದಿ ದೇವತೆಗಳು ನಾನಾ ವಿಧವಾದ ಆಭರಣಗಳನ್ನು, ಆಯುಧಗಳನ್ನು ನೀಡಿದರು. ಹೀಗೆ ಎಲ್ಲ ದೇವತೆಗಳ ಶಕ್ತಿಗಳಿಂದ ಆವಿರ್ಭವಿಸಿದ ಆ ದೇವತೆ ಸಿಂಹಾರೂಢಳಾಗಿ ಸರ್ವಾಭರಣ ಭೂಷಿತಳಾಗಿ ಸಕಲ ಶಸ್ತ್ರಾಸ್ತ್ರಗಳಿಂದ ಕೂಡಿ, ಜೋರಾಗಿ ನುಗ್ಗುತ್ತಾ ಭೀಕರವಾಗಿ ಗರ್ಜಿಸಲು ಪ್ರಾರಂಭಿಸುತ್ತಾಳೆ. ಆ ಭಯಂಕರವಾದ ಶಬ್ದಕ್ಕೆ ಸಕಲ ಲೋಕಗಳೂ ಕಂಪಿಸುತ್ತವೆ. ಸಪ್ತ ಸಾಗರಗಳೂ ನಡುಗುತ್ತವೆ. ಪರ್ವತಗಳು ಬಿರುಕು ಬಿಡುತ್ತವೆ. ಆ ದೇವಜಾತೆ ಸಿಂಹವಾಹಿನಿಗೆ ದೇವತೆಗಳೆಲ್ಲಾ ಜಯಘೊಷ ಕೂಗುತ್ತಾರೆ. ಹೀಗೆ ಆವಿರ್ಭವಿಸುವ ದೇವಿಯನ್ನು ನಾವು ಕಲಶದಲ್ಲಿ ಆವಾಹನೆ ಮಾಡಿ, ಶ್ರದ್ಧೆಯಿಂದ ಪೂಜಿಸಬೇಕು. ಪೂಜೆಯಲ್ಲಿ ಸುಗಂಧಭರಿತ ಶ್ವೇತ ಪುಷ್ಪಗಳಿಗೆ ಆದ್ಯತೆ. ಈ ಸ್ವರೂಪದಲ್ಲಿ ಆ ಭಗವತಿಯ ಆರಾಧನೆಯಿಂದ ಸಿಗುವ ಪ್ರಮುಖವಾದ ಫಲ ಎಂದರೆ, ಅಶಕ್ತರು ಸಶಕ್ತರಾಗುತ್ತಾರೆ. ಯಾರ ಸಹಾಯವೂ ದೊರೆಯದೆ ಜೀವನದಲ್ಲಿ ಕಷ್ಟ ಪಡುತ್ತ ಇರುವವರಿಗೆ ಈ ದೇವಜಾತಾ ಸ್ವರೂಪಿಣಿಯ ಆರಾಧನೆಯಿಂದ ಅನಿರೀಕ್ಷಿತ ಸಹಾಯಗಳು ಲಭಿಸುತ್ತವೆ. ಇನ್ನು ಬೆಳಗ್ಗೆ ಪೂಜೆಯ ನಂತರ ಸಂಧ್ಯಾ ಸಮಯದಲ್ಲಿ ಮುತ್ತೈದೆಯರಿಗೆ ಅರಿಶಿನ- ಕುಂಕುಮವನ್ನು ಅಥವಾ ಬಾಗಿನವನ್ನು ಕೊಡುವುದರಿಂದ ಪೂರ್ಣಫಲ ಸಿಗುತ್ತದೆ.

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Dasara Special | Second Brahmacharini: Navratri is the second day
Share This Article
Facebook Twitter Copy Link Print
Previous Article ಸೀರೆಯಲ್ಲೂ ಹಾಟ್‌ ಆಗಿ ಮಿಂಚಿದ ಜ್ಯೋತಿ ರೈ! ಫೋಟೋ ವೈರಲ್
Next Article ಶುಭೋದಯ‌… ಪಂಚಾಂಗ- ರಾಶಿ ಭವಿಷ್ಯ, 04-10-2024, ಶುಕ್ರವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?