newsics.com
ಆಂಧ್ರಪ್ರದೇಶ : ಕಳ್ಳನನ್ನು ಹಿಡಿಯಲು ಚೇಸ್ ಮಾಡುವ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆ ಸೇರಿದ ಪೊಲೀಸ್ ವಾಹನ ಅಪಘಾತಕ್ಕೀಡಾದ ಘಟನೆ ಆಂಧ್ರ ಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ.
ಕಳ್ಳನ ಜಾಡು ಹಿಡಿದು ಆಂಧ್ರ ಪ್ರದೇಶಕ್ಕೆ ಹೊರಟಿದ್ದ ಮಧುಗಿರಿ ಪೊಲೀಸರು. ಕಳ್ಳನನ್ನು ಸೆರೆಹಿಡಿಯುವ ದಾವಂತದಲ್ಲಿ ವೇಗವಾಗಿ ಹೊರಟಿದ್ದ ಪೊಲೀಸ್ ವಾಹನ. ಈ ವೇಳೆ ಕಾರಿನ ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ. ಇನ್ನೇನು ಖದೀಮ ಸಿಕ್ಕೇ ಬಿಟ್ಟ ಎನ್ನುವಷ್ಟರಲ್ಲಿ ನಡೆದಿರುವ ಭೀಕರ ಅಪಘಾತ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೈ, ತಲೆ ಭಾಗಗಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಧರ್ಮವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ವಾಹನದಲ್ಲಿ ಮಧುಗಿರಿ ಪೊಲೀಸ್ ಠಾಣೆಯ ಪ್ರಕಾಶ್,ಮುದ್ದರಾಜು ಹಾಗೂ ರಮೇಶ್ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.