newsics.com
ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 11 ಇಂದಿನಿಂದ ಶುರುವಾಗಿದೆ. ಪ್ರತಿ ಸೀಸನ್‌ನಲ್ಲೂ ಹೈಲೈಟ್ ಎಂದರೆ ಕಿಚ್ಚ ಸುದೀಪ್ ನಯಾ ಹೇರ್ ಸ್ಟೈಲ್ ಮತ್ತು ಸ್ಟೈಲೀಶ್ ಉಡುಗೆ.
ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಸುದೀಪ್ ಅವರಿಗಾಗಿ ಕೆಲಸ ಮಾಡುತ್ತಾರಂತೆ. ಯಾವ ರೀತಿ ಕಾಸ್ಟ್ಯೂಮ್ ಇರಲಿದೆ ಅನ್ನೋದು ಎಷ್ಟೋ ಬಾರಿ ಕಿಚ್ಚನಿಗೆ ಗೊತ್ತಿರುವುದಿಲ್ಲ ಎಂಬುದು ವಿಶೇಷ. ಈ ಬಗ್ಗೆ ಇತ್ತೀಚೆಗೆ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಹೊಸ ಲುಕ್ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚನ ನಯಾ ಖದರ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಿಚ್ಚ ಧರಿಸೋ ಒಂದೊಂದು ಕಾಸ್ಟ್ಯೂಮ್ ಲಕ್ಷಾಂತರ ರೂ. ಇರಲಿದೆ.
ಕಿಚ್ಚ ಸುದೀಪ್ ಅವರು ಪೆಸ್ಟಲ್ ಬೇಜ್ ಕಲರ್ನ ಇಂಡೋ ಕೊರಿಯೋ ಸೂಟ್ ಧರಿಸಿದ್ದಾರೆ. ಈ ಕಾಸ್ಟ್ಯೂಮ್ಗೆ ಜಪಾನಿಸ್ ಮೆಟಿರಿಯಲ್ ಯೂಸ್ ಮಾಡಿದ್ದಾರೆ. ಇದರ ಜೊತೆಗೆ ಇನ್ನರ್ ಜಾಕೆಟ್ ಹೈ ನೆಕ್ ಸ್ಲೀವ್ ಸ್ಟೈಲ್ನಲ್ಲಿ ವಿನ್ಯಾಸ ಮಾಡಲಾಗಿದೆ. ಅಲ್ಲದೇ ಶರ್ಟ್ ಕೂಡ ಹೈ ನೆಕ್ ಸ್ವೀವ್ ಡಿಸೈನ್ ಹೊಂದಿದೆ. ಕಿಚ್ಚ ಸುದೀಪ್ ಪ್ಲೇಟಡ್ ಹೈ ರಿಸೆ ವೈಡ್ ಲೆಗ್ ಪಾಂಟ್ಸ್ ಅನ್ನು ಧರಿಸಿಕೊಂಡಿದ್ದಾರೆ. ಈ ಕಾಸ್ಟೂಮ್ಗೆ 30 ಸಾವಿರ ಮಣಿಗಳನ್ನು ಬಳಸಲಾಗಿದೆ
ಬರೋಬ್ಬರಿ 6.5 ಕೆಜಿ ತೂಕವನ್ನು ಹೊಂದಿದೆ. ಈ ಕಾಸ್ಟ್ಯೂಮ್ ರೆಡಿ ಮಾಡಲು ಡಿಸೈನರ್ಗಳು 10ಕ್ಕೂ ಹೆಚ್ಚು ದಿನ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಬಾಟಲ್ ಪೈಪ್ ಸ್ಟುಡಿಯೋದ ಸಿಗ್ನೆಚರ್ ಸ್ಟೈಲ್ ಇದಾಗಿದೆ. ಈ ಕಾಸ್ಟ್ಯೂಮ್ ಅನ್ನು ರೆಡಿ ಮಾಡಿದ್ದು ಡಿಸೈನರ್ ಭರತ್ ಸಾಗರ್ ಅವರ ಮೂಲಕ ವಿನ್ಯಾಸ ಆಗಿದೆ.
IIFA 2024: ಅನಿಮಲ್ ಅತ್ಯುತ್ತಮ ಸಿನಿಮಾ, ಶಾರುಕ್ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ
ಚುನಾವಣಾ ಭಾಷಣ ವೇಳೆ ಕುಸಿದುಬಿದ್ದ ಮಲ್ಲಿಕಾರ್ಜುನ ಖರ್ಗೆ, ಆಸ್ಪತ್ರೆಗೆ ದಾಖಲು, ವಿಡಿಯೋ ನೋಡಿ