newsics.comಮುಂಬೈ : ಐಶ್ವರ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೇ ಹೋದರೂ ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತಿದ್ದಾರೆ. ಮಾಜಿ ವಿಶ್ವ ಸುಂದರಿಯೊಬ್ಬಳು, ಹೀಗೆ ಬಟ್ಟೆ ಧರಿಸಿಕೊಂಡು ಓಡಾಡುವುದರಿಂದ ಭಾರತೀಯ ಸಂಪ್ರದಾಯ ಎಂದೆಲ್ಲಾ ನೆಟ್ಟಿಗರು ಕೊಂಡಾಡುತ್ತಲೇ ಇದ್ದಾರೆ. ಆದರೆ ಇದರ ಹಿಂದಿರುವ ಉದ್ದೇಶವೇ ಬೇರೆ ಎನ್ನಲಾಗಿದೆ.ಡಯೆಟ್ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವ ಕಾರಣ, ಕಟ್ಟುನಿಟ್ಟಾದ ಆಹಾರಕ್ರಮ ಅನುಸರಿಸುತ್ತಿಲ್ಲ ಎಂದು ಹೇಳಲಾಗಿದೆ. ಅರೆಬರೆ ಡ್ರೆಸ್ ಹಾಕಿದರೆ ಅವರ ಮೈಮಾಟವೆಲ್ಲಾ ಕಾಣಿಸುವ ಹಿನ್ನೆಲೆಯಲ್ಲಿ, ಬಾಡಿ ಶೇಮಿಂಗ್ ಅನುಭವಿಸಬೇಕಾಗುತ್ತದೆ ಎಂದು ಮೈತುಂಬಾ ಬಟ್ಟೆ ಧರಿಸುತ್ತಾರೆ ಎನ್ನುವುದು ಇವರ ವಾದ.ಈ ಪೋಸ್ಟ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರಿಂದ ಹಾಗೂ ಕಮೆಂಟ್ಸ್ ಸುರಿಮಳೆಯಾಗುತ್ತಿದ್ದರಿಂದ ಅದನ್ನು ಕೂಡಲೇ ಡಿಲೀಟ್ ಮಾಡಲಾಗಿದೆ. ಆದರೆ ಇದರಲ್ಲಿ ಐಶ್ವರ್ಯ ರೈಗೆ ಆಪ್ತರು ಎನಿಸಿಕೊಂಡಿರುವವರು ಕೂಡ ಕಮೆಂಟ್ ಹಾಕಿರುವುದು ಗಮನ ಸೆಳೆದಿದೆ.