newsics.com
ಉತ್ತರಪ್ರದೇಶ : ರೊಟ್ಟಿ ಮಾಡುತ್ತಿರುವ ವಿಡಿಯೋದಲ್ಲಿ ಉಗಿಯುತ್ತಿರುವುದು ವೈರಲ್ ಆಗುತ್ತಿದ್ದಂತೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಆ ವ್ಯಕ್ತಿ ರೊಟ್ಟಿ ಮಾಡುತ್ತಿರುವ ವಿಡಿಯೋದಲ್ಲಿ ಉಗಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕಾರ್ನಲ್ಲಿ ಕುಳಿತ ಒಬ್ಬ ವ್ಯಕ್ತಿ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ಈಗ ವೈರಲ್ ಆಗಿದ್ದು ಶೆಹ್ಜಾದ್ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉತ್ತಪ್ರದೇಶದ ಭಗ್ಪತ್ ಜಿಲ್ಲೆಯಲ್ಲಿ ನರೇಶ್ ಚಿಕನ್ ಕಾರ್ನರ್ ಎನ್ನುವ ಹೋಟೆಲ್ನ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಸದ್ಯ ಈ ವಿಡಿಯೋ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿದ್ದು. ಪೊಲೀಸರು ಶಹ್ಜಾದ್ನನ್ನು ಬಂಧಿಸಿದ್ದಾರೆ.
https://twitter.com/GagandeepNews/status/1839290885726765278