newsics.com
ಮುಂಬೈ : ಕೌನ್ ಬನೆಗಾ ಕರೋಡ್ಪತಿ ಈಗ 16ನೇ ಸಿಸನ್ಗೆ ಕಾಲಿಟ್ಟಿದೆ. 16ನೇ ಸೀಸನ್ನಲ್ಲಿ ಮೊದಲ ಬಾರಿಗೆ ಚಂದೇರ್ ಪ್ರಕಾಶ್ ಅನ್ನುವವರು ಒಂದು ಕೋಟಿ ರೂಪಾಯಿ ಗೆದಿದ್ದಾರೆ.
ಐಎಎಸ್ ಅಧಿಕಾರಿಯಾಗುವ ಆಕಾಂಕ್ಷಿ, ಜಮ್ಮು ಕಾಶ್ಮೀರ ಮೂಲದ ಚಂದೇರ್ಗೆ 7 ಕೋಟಿ ರೂಪಾಯಿ ಪ್ರಶ್ನೆಯನ್ನು ಕೇಳಲಾಗಿತ್ತು. ಬಿಗ್ ಬಿ ಕೇಳಿದ ಪ್ರಶ್ನೆ 1587ರಲ್ಲಿ ಉತ್ತರ ಅಮೆರಿಕಾದಲ್ಲಿ ಬ್ರಿಟಿಷ್ ಪೋಷಕರಿಗೆ ಹುಟ್ಟಿದ ಮೊದಲ ಮಗು ಯಾವುದು ಅಂತ ಇತ್ತು ಅದಕ್ಕೆ ಆಯ್ಕೆಗಳಾಗಿ A ) ವರ್ಜಿನಿಯಾ ಡೇರ್, B ) ವರ್ಜಿನಿಯಾ ಹಾಲ್ C) ವರ್ಜಿನಿಯಾ ಕಫೆಯ್ ಮತ್ತು D) ವರ್ಜಿನಿಯಾ ಸಿಂಕ್ ಎಂದು ನೀಡಲಾಗಿತ್ತು.
ಇದ್ದ ಲೈಫ್ಲೈನ್ ಕೂಡ ಖಾಲಿಯಾಗಿ ಹೋಗಿದ್ದವು. ಹೀಗಾಗಿ ಕೊನೆಗೆ ನಾನು ಕ್ವಿಟ್ ಮಾಡುವುದಾಗಿ ಚಂದೇರ್ ಹೇಳಿದ್ರು. 7 ಕೋಟಿ ಗೆಲ್ಲುವ ಜಾಕ್ಪಾಟ್ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಸ್ಪಷ್ಟ ಇರದ ಕಾರಣ 7 ಕೋಟಿ ರೂಪಾಯಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.
ದುರಾದೃಷ್ಟವಶಾತ್ ಚಂದೇರ್ ತಮ್ಮ ಆಟವನ್ನು ಕ್ವಿಟ್ ಮಾಡಿ 1 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡರು.