newsics.com
ಬೆಂಗಳೂರು : ಮುಡಾ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿದ್ದು ರಾಜಕೀಯ ತೀರ್ಪು ಎಂದು ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬಿಜೆಪಿ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಕಿಡಿಕಾರಿದೆ. ಅಲ್ಲದೇ ಈ ಬಗ್ಗೆ ಕಾನೂನು ಹೋರಾಟಕ್ಕೆ ಟಿಜೆ ಅಬ್ರಹಾಂ ನಿರ್ಧರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಪ್ರಕರಣದ ದೂರುದಾರರಲ್ಲೊಬ್ಬರಾದ, ಹಿರಿಯ ವಕೀಲ ಟಿಜೆ ಅಬ್ರಹಾಂ , ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಎಂದರೆ ಹುಡುಗಾಟನಾ. ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ? ನಾಲಿಗೆ ಬಿಗಿಯಿಲ್ಲದೆ ಮಾತನಾಡಿದ್ದು ಸರಿಯಲ್ಲ. ಈ ತೀರ್ಪನ್ನು ಪೊಲಿಟಿಕಲ್ ಆದೇಶ ಎಂದು ಹೇಳುತ್ತಾರೆ. ನ್ಯಾಯಾಧೀಶರನ್ನು ರಾಜಕಾರಣಿಗಳ ಲೆವೆಲ್ಲಿಗೆ ಇಳಿಸುತ್ತೀರಾ? ನ್ಯಾಯಾಲಯ ದ ಬಗ್ಗೆ ಭಯ ಭಕ್ತಿ ಬೇಡ್ವಾ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.