newsics.com
ಬೆಂಗಳೂರು: ರಾಜ್ಯದಲ್ಲಿ ವಿವಾಹ ನೋಂದಣಿ ಇನ್ನಷ್ಟು ಸುಲಭವಾಗಲಿದೆ.
ಈವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿ ಮಾಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿದೆ.
ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
https://kaveri.karnataka.gov.in ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ತೆರೆದು ಕಾವೇರಿ ಪೋರ್ಟಲ್‌ಗೆ ಲಾಗಿನ್ ಆಗಿ, ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಬಹುದು.
1) ಮೊದಲು https://kaveri.karnataka.gov.in ಭೇಟಿ ನೀಡಿ ಮತ್ತು ಬಳಕೆದಾರರ ಖಾತೆ ತೆರೆಯಿರಿ.
2) ಕಾವೇರಿ ಪೋರ್ಟಲ್‌ಗೆ ಲಾಗಿನ್ ಆಗಿ ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ.
3) ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ
4) ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆ, ಆನ್ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ
5) ಕಾವೇರಿ ಪೋರ್ಟಲ್ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ https://kaveri.karnataka.gov.in ಅಥವಾ 080 68265316 ಸಂಪರ್ಕಿಸಬಹುದುಎಂದು ಪ್ರಕಟಣೆ ತಿಳಿಸಿದೆ.