newsics.com
ಲೈಂಗಿಕತೆ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು ಅನೇಕ ಸರಳ ವಿಧಾನಗಳಿವೆ. ಅದರಲ್ಲಿ ಯೋಗಾಸನ ಹಾಗೂ ವ್ಯಾಯಾಮ ಕೂಡ ಒಂದು ಅಂಶವಾಗಿದೆ.
ಕೆಗಲ್ ವ್ಯಾಯಾಮ ಮಾಡುವುದರಿಂದ ಪ್ರಾಸ್ಟೇಟ್ ಆರೋಗ್ಯ ಸುಧಾರಣೆಯಾಗುತ್ತದೆ ಇದರಿಂದ ನಿಮ್ಮ ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗಿದೆ. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ.
ಪುಷ್-ಅಪ್ ಮಾಡುವುದರಿಂದ ಹೃದಯ ಬಲಗೊಳ್ಳುತ್ತದೆ. ಲೈಂಗಿಕ ಸಮಯದಲ್ಲಿ ಇದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಪ್ರತಿದಿನ ಸಾಧ್ಯವಾದಷ್ಟು ಪುಷ್ ಅಪ್ಸ್ ಮಾಡುವುದು ಉತ್ತಮ.
ಸ್ಕ್ವಾಟ್‌ಗಳು ಪೆಲ್ವಿಕ್ ಸ್ನಾಯುಗಳನ್ನು ಮಾತ್ರವಲ್ಲ, ಕಾಲಿನ ಸ್ನಾಯುಗಳನ್ನೂ ಸಹ ಬಲಪಡಿಸುತ್ತವೆ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಲೈಂಗಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಈ ವ್ಯಾಯಾಮವು ದೇಹದ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಲೈಂಗಿಕ ಶಕ್ತಿ, ದೇಹದ ನಿಯಂತ್ರಣಗಳನ್ನು ಸುಧಾರಿಸುತ್ತದೆ.
ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಸಮತೋಲನಗೊಳ್ಳುತ್ತದೆ. ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.