newsics.com
ಬೆಂಗಳೂರು : ವೈವಾಹಿಕ ಸಂಬಂಧಗಳು ಮುರಿದು ಬೀಳುತ್ತಿರುವುದನ್ನು ಅಥವಾ ಪತಿ ಪತ್ನಿ ನಡುವೆ ಸಂಬಂಧಗಳು ಮುರಿದು ಬೀಳುತ್ತಿರುವುದನ್ನು ಹೆಚ್ಚಾಗಿ ನೋಡಬಹುದು. ಆಚಾರ್ಯ ಚಾಣಕ್ಯರು ಸುಂದರ ಸಂಸಾರಕ್ಕಾಗಿ, ಸುಖಮಯ ದಾಂಪತ್ಯಕ್ಕಾಗಿ ಈ ಟಿಪ್ಸ್ ಗಳನ್ನು ನೀಡಿದ್ದಾರೆ.
ಪರಸ್ಪರ ಹೊಂದಾಣಿಕೆ ಇಲ್ಲದ ಸಂಬಂಧದಲ್ಲಿ ಬೇಗನೆ ಬಿರುಕು ಮೂಡುತ್ತದೆ. ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ನಿಮ್ಮ ಸಂಗಾತಿಯನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಮೇಲೆ ಅವರನ್ನು ಪ್ರೀತಿಸಿ ಏನು ಪ್ರಯೋಜನ.? ಆದ್ದರಿಂದ ನಿಮ್ಮ ಸಂಬಂಧವನ್ನು ಬಲವಾದ ಹೊಂದಾಣಿಕೆಯ ಮೇಲೆ ನಿರ್ಮಿಸಿಕೊಳ್ಳಿ ಎಂದು ಚಾಣಕ್ಯರು ಹೇಳಿದ್ದಾರೆ.
ವ್ಯಕ್ತಿಯು ಅಹಂಕಾರದ ಸ್ವಭಾವವನ್ನು ಹೊಂದಿರುತ್ತಾನೆ. ಇಂತಹ ಸ್ವಭಾವವನ್ನು ಬಿಟ್ಟು ಬಿಡುವುದು ಉತ್ತಮ. ಇದರಿಂದ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಕ್ರಮೇಣ ಸಂಬಂಧವು ಸುಧಾರಣೆಯನ್ನು ಕಾಣುತ್ತದೆ.
ಪ್ರೀತಿ ಇಲ್ಲದೆ ಯಾವುದೂ ಸಾಧ್ಯವಿಲ್ಲ. ಪ್ರೀತಿಯು ಸಂಬಂಧದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಪ್ರೀತಿ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಸಂಬಂಧವನ್ನು ದೀರ್ಘಗೊಳಿಸುತ್ತದೆ.