newsics. com
ಬೆಂಗಳೂರು : ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ ತುಪ್ಪವೂ ಶುದ್ಧವಿಲ್ವಾ ಅನ್ನೋ ಸಂಶಯಗಳು ತಲೆ ಎತ್ತಿವೆ.
ತುಪ್ಪವನ್ನು ಮನೆಗೆ ತಂದಿದ್ದು ಅದರ ಪರಿಶುದ್ಧತೆ ಬಗ್ಗೆ ಅನುಮಾನ ಇದ್ದಿದ್ದೇ ಆದಲ್ಲಿ, ನೀವು ಒಂದು ಪರೀಕ್ಷೆಯನ್ನು ಮಾಡಬಹುದು.
ಒಂದು ಸ್ಪೂನ್ ಆ ತುಪ್ಪವನ್ನು ತೆಗೆದುಕೊಂಡು. ಒಂದು ತಣ್ಣೀರಿನ ಗ್ಲಾಸಿನಲ್ಲಿ ಅದನ್ನು ಹಾಕಬೇಕು. ಪರಿಶುದ್ಧ ತುಪ್ಪವಾದ್ರೆ ಮಜ್ಜಿಗೆಯ ಮೇಲೆ ಬೆಣ್ಣೆ ತೇಲಿದಂತೆ ತೇಲುತ್ತದೆ. ಇಲ್ಲವಾದಲ್ಲಿ ಅದು ಕೂಡ ನೀರಿನೊಂದಿಗೆ ಬೆರೆತು ನೀರಿನಲ್ಲಿ ಹರಡಿಕೊಳ್ಳುತ್ತದೆ. ಈ ಎಲ್ಲಾ ಗುಣಲಕ್ಷಣಗಳ ಮೂಲಕ ಹಾಗೂ ಪರೀಕ್ಷೆಯ ಮೂಲಕ ಕಂಡು ಹಿಡಿಯಬಹುದು.
ಪ್ಯೂರ್ ತುಪ್ಪ ಹೆಚ್ಚು ಹರಳು ಹರಳಾಗಿರುತ್ತದೆ. ತುಪ್ಪ ಹರಳುಗಟ್ಟಿರುವುದನ್ನು ನೋಡಿದರೆನೇ ಗೊತ್ತಾಗುತ್ತದೆ ಅದರ ಪರಿಶುದ್ಧತೆ. ಇನ್ನೂ ಶುದ್ಧ ತುಪ್ಪದ ಘಮದಲ್ಲಿ ಬೆಣ್ಣೆಯ ಘಮದ ಒಂದು ಸಾಮ್ಯತೆ ಇರುತ್ತದೆ.