newsics.com
ಬಿಹಾರ: ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಆಸ್ಪತ್ರೆಗೆ ಬಂದಾಗ ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದಿದ್ದರು. ನಾಡಿ ಮಿಡಿತವನ್ನೂ ನೋಡದೆ ವೈದ್ಯರು ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಚರ್ನಲ್ಲಿ ಕುಳಿತು ನಾನು ಸತ್ತಿಲ್ಲಪ್ಪ ಬದುಕಿದ್ದೇನೆ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.
ಆತ ಎಚ್ಚರಗೊಂಡಿದ್ದು, ಬಳಿಕ ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾತ್ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್ ಹೇಳಿದ್ದಾರೆ.
ಅವರಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.