newsics.com
ನವದೆಹಲಿ : ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಇರಾನ್ನ ಪ್ಯಾರಾ ಅಥ್ಲೀಟ್ ಸಡೆಗ್ ಬೀಟ್ ಸಯಾಹ್, ಪ್ಯಾರಾ ನಿಯಮಗಳಿಗೆ ವಿರುದ್ಧವಾದ ಕೆಲಸ ಮಾಡಿ ಚಿನ್ನದ ಪದಕ ಮಾತ್ರವಲ್ಲ, ಇಡೀ ಕ್ರೀಡಾಕೂಟದಿಂದಲೇ ಅನರ್ಹಗೊಂಡರು.
ಪ್ಯಾರಾಲಿಂಪಿಕ್ನ ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯ ಫೈನಲ್ನಲ್ಲಿ ಇರಾನ್ನ ಸಡೆಗ್ ಬೀಟ್ ಸಯಾಹ್ ತನ್ನ ಐದನೇ ಪ್ರಯತ್ನದಲ್ಲಿ 47.64 ಮೀಟರ್ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದಲ್ಲದೆ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿ ನಿಯಮಗಳನ್ನು ಮರೆತ ಸಡೆಗ್ ಬೀಟ್, ವಿವಾದಾತ್ಮಕ ಧ್ವಜ ಹಿಡಿದು ಸಂಭ್ರಮಿಸಿದರು.
ಸಡೆಗ್ ಹಿಡಿದಿದ್ದ ಧ್ವಜ ಕಪ್ಪು ಬಣ್ಣದಲ್ಲಿದ್ದು, ಅದರ ಮೇಲೆ ಕೆಂಪು ಬಣ್ಣದಲ್ಲಿ ಅರೇಬಿಕ್ ಸಂದೇಶಗಳನ್ನು ಬರೆಯಲಾಗಿತ್ತು. ಇದನ್ನು ಗಮನಿಸಿದ ಪ್ಯಾರಾಲಿಂಪಿಕ್ ನಿಯಂತ್ರಣ ಸಮಿತಿ, ನೀತಿ ಸಂಹಿತೆ ಮತ್ತು ನೀತಿಸಂಹಿತೆಯೊಂದಿಗೆ ವ್ಯವಹರಿಸುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಿಯಮಗಳು ಮತ್ತು ನಿಬಂಧನೆಗಳ ನಿಯಮ 8.1 ರ ಅಡಿಯಲ್ಲಿ ಚಿನ್ನ ಗೆದ್ದಿದ್ದ ಸಡೆಗ್ ಬೀಟ್ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸುವ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.