newsics.com
ಕಣ್ಣು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡುತ್ತಿದೆ. ಆದರೆ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಹೀಗೆ ಗಮನಕೊಟ್ಟಲ್ಲಿ ಮಾತ್ರ ಹೆಚ್ಚಿನ ದಿನ ನೀವು ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ತೊಂದರೆ ಆಗುತ್ತದೆ. ಹಾಗಾಗಿ ನೀವು ನಿಮ್ಮ ಕಣ್ಣಿನ ದೃಷ್ಟಿ ಸುಧಾರಿಸಿಕೊಳ್ಳಲು ಈ ರೀತಿ ಮಾಡಿ..
ಕಣ್ಣಿನ ವ್ಯಾಯಾಮ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಕಣ್ಣಿಗೆ ತುಂಬಾ ಆಯಾಸವಾದಾಗ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ದುರ್ಬಲ ಕಣ್ಣಿನ ಸ್ನಾಯುಗಳಿಗೆ ಶಕ್ತಿಯನ್ನು ನೀಡಬೇಕು. ಈ ರೀತಿ ವ್ಯಾಯಾಮ ಮಾಡಿದರೆ ನಿಮ್ಮ ಕಣ್ಣಿನ ದೃಷ್ಟಿ ಶಾರ್ಪ್ಆಗುವಂತೆ ಮಾಡಬಹುದು. ವ್ಯಾಯಾಮ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ವ್ಯಾಯಾಮ ಮಾಡಿದಾಗ ಮಾತ್ರ ಕಣ್ಣಿಗೆ ನಿರಾಳವಾಗುತ್ತದೆ. ದೂರದ ವಸ್ತುಗಳನ್ನು ನೋಡುವುದು, ಕಣ್ಣನ್ನು ಕಿರಿದಾಗಿಸಿ ನೋಡುವುದು ಮತ್ತು ಪ್ರದಕ್ಷಿಣಕಾರವಾಗಿ ಕಣ್ಣನ್ನು ತಿರುಗಿಸುವುದು. 8ರ ಅಂಕಿಯಲ್ಲಿ ಕಣ್ಣಿನ ನೋಟ ಇವೆಲ್ಲವೂ ಸಹ ಕಣ್ಣಿನಲ್ಲಿ ಮಾಡಬಹುದಾದ ವ್ಯಾಯಾಮವಾಗಿದೆ.
ದೈನಂದಿನ ಜೀವನ ಕ್ರಮದಲ್ಲಿ ಮುಖ್ಯವಾದ ಬದಲಾವಣೆ ಎಂದರೆ ಕಣ್ಣುಗಳಿಗೂ ಆಮ್ಲಜನಕ ಸಿಗುವಂತೆ ಮಾಡಬೇಕು. ಹೆಚ್ಚಿಗೆ ನೀರು ಕುಡಿಯಬೇಕು. ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ರಕ್ತದ ಒತ್ತಡವನ್ನು ನಿರ್ವಹಿಸುವ ವ್ಯಾಯಾಮ ಮಾಡಬೇಕು. ಆಹಾರದಲ್ಲಿ ಬದಲಾವಣೆ ಮಾಡಬೇಕು. ಇವುಗಳೆಲ್ಲವೂ ನಿಮ್ಮ ದೃಷ್ಟಿಯನ್ನು ಕಾಪಾಡಲು ಸಹಾಯ ಮಾಡುತ್ತದೆ. ತರಕಾರಿ, ಹಸಿರು ಸೊಪ್ಪು, ಕ್ಯಾರೇಟ್, ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನಿ.
ನೀವು ಕೆಲಸ ಮಾಡುತ್ತಿದ್ದರೆ ಯಾವಾಗಲೂ ಸ್ಕ್ರೀನ್ ನೋಡುತ್ತಾ ಇರಬೇಡಿ. ಅದರ ಬದಲಾಗಿ ಬೇರೆ ಬೇರೆ ಕಡೆ ಆಗಾಗ ನೋಡಿ. ಒಂದು ಸ್ವಲ್ಪ ಸಮಯ ಹೊರಗಡೆ ಎದ್ದು ಹೋಗಿ ಬನ್ನಿ.