Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ
ಕರ್ನಾಟಕಪ್ರಮುಖ

Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯು ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, ಜುಲೈ 28, 2026ರ ಬೆಳಿಗ್ಗೆ 8 ಗಂಟೆಯವರೆಗೆ ರಾಜ್ಯದ ವಿವಿಧ ಭಾಗಗಳ ಹವಾಮಾನ ವರದಿಯನ್ನು ಪ್ರಕಟಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುವ ಮುನ್ಸೂಚನೆ ಇದ್ದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಬಿಸಿಲು ಹಾಗೂ ಮೋಡಕವಿದ ವಾತಾವರಣ ಮುಂದುವರಿಯಲಿದೆ.

 

ವಿವಿಧ ಪ್ರದೇಶಗಳ ಹವಾಮಾನ ವರದಿಯ ವಿವರ

  • ಕರಾವಳಿ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ನಡುವೆ ಬಿಡುವಿನ ಅವಧಿ ಹೆಚ್ಚಿರಲಿದ್ದು, ಮುಂದಿನ 10 ದಿನಗಳ ಕಾಲ ದಿನದ ಸರಾಸರಿ ಮಳೆಯ ಪ್ರಮಾಣ 20 ರಿಂದ 30 ಮಿ.ಮೀ ಇರಲಿದೆ. ಸದ್ಯಕ್ಕೆ ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳು ಕಡಿಮೆ ಇವೆ.
  • ಮಲೆನಾಡು ಜಿಲ್ಲೆಗಳು: ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಕರಾವಳಿಗೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಮಳೆಯ ತೀವ್ರತೆ ಸ್ವಲ್ಪ ಹೆಚ್ಚಿರಬಹುದು. ಮುಂಬರುವ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯಲಿದ್ದರೂ, ದಿನ ಕಳೆದಂತೆ ಮಳೆಯ ಅಬ್ಬರ ಕ್ರಮೇಣ ತಗ್ಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡು: ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ತುಂತುರು ಮಳೆ ಬೀಳಬಹುದು. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡಕವಿದ ವಾತಾವರಣ ಮುಂದುವರಿಯಲಿದೆ.
  • ದಕ್ಷಿಣ ಒಳನಾಡು: ಬೆಂಗಳೂರು ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಬಿಸಿಲು ಮತ್ತು ಮೋಡದ ವಾತಾವರಣವಿರಲಿದ್ದು, ಆಗಸ್ಟ್ 2ರಿಂದ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ: ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದ್ದ ಮುಂಗಾರು, ಪ್ರಸ್ತುತ ಪಶ್ಚಿಮ ಬಂಗಾಳ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಈ ವಾಯುಭಾರ ಕುಸಿತವು ಜಾರ್ಖಂಡ್ ಹಾಗೂ ಮಧ್ಯಪ್ರದೇಶದ ಮೂಲಕ ಸಾಗುವ ಸಾಧ್ಯತೆಗಳಿವೆ.

Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

TAGGED:#Rain Alert #IMD Report #Karnataka #News #Newsics
Share This Article
Facebook Twitter Copy Link Print
Previous Article Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ
Next Article Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ

Popular Posts

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

Parliament Speec ಪ್ರಹ್ಲಾದ್ ಜೋಶಿ ನೇಮಕದ ವಿರುದ್ಧ ಪ್ರಿಯಾಂಕಾ ವಾದ್ರಾ ಕಿಡಿ; ಲೋಕಸಭೆಯಲ್ಲಿ ಕ್ಷಮೆಯಾಚನೆಗೆ ಕೇಂದ್ರ ಸಚಿವರ ಪಟ್ಟು

1 Min Read

Health Tips ಕಾಫಿ ಸೇವನೆಯಿಂದ ತಲೆನೋವು ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಕೆಫೀನ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

1 Min Read

Rain Alert ವರುಣ ಆರ್ಭಟ; ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್ ಘೋಷಣೆ

1 Min Read

You Might Also Like

ದೇಶಪ್ರಮುಖ

Paytm Payments ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೈಕೋರ್ಟ್ ಶಾಕ್; ಸಂಪೂರ್ಣ ಬಂದ್‌ಗೆ ಆದೇಶ ಹೊರಡಿಸಿದ ಆರ್‌ಬಿಐ

1 Min Read
ಪ್ರಮುಖSports

Ryan ten Doeschate ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡಾಸ್ಚೇಟ್ ರಾಜೀನಾಮೆ; ಬಿಸಿಐ ಆಫರ್ ತಿರಸ್ಕರಿಸಿದ ಮಾಜಿ ಆಟಗಾರ

1 Min Read
ಪ್ರಮುಖಆರೋಗ್ಯ

Health Tips ವ್ಯಾಯಾಮದ ವೇಳೆ ಸ್ನಾಯು ಸೆಳೆತಕ್ಕೆ ಬಾಳೆಹಣ್ಣು ರಾಮಬಾಣವೇ? ವೈದ್ಯರು ಹೇಳುವುದೇನು ಇಲ್ಲಿದೆ ಮಾಹಿತಿ

1 Min Read
ಪ್ರಮುಖವಿದೇಶ

Talc Powder ಕ್ಯಾನ್ಸರ್ ವಿವಾದಕ್ಕೆ ಬ್ರೇಕ್; ಜಾನ್ಸನ್ ಅಂಡ್ ಜಾನ್ಸನ್‌ನಿಂದ ಬರೋಬ್ಬರಿ 46,000 ಕೋಟಿ ರೂ. ಪರಿಹಾರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?