Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4 ಪದಕ: ಅವನಿಗೆ ಚಿನ್ನ, ಮನೀಶ್‌ಗೆ ಬೆಳ್ಳಿ, ಮೋನಾ, ಪ್ರೀತಿಗೆ ಕಂಚು
ದೇಶಪ್ರಮುಖವಿದೇಶ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4 ಪದಕ: ಅವನಿಗೆ ಚಿನ್ನ, ಮನೀಶ್‌ಗೆ ಬೆಳ್ಳಿ, ಮೋನಾ, ಪ್ರೀತಿಗೆ ಕಂಚು

Share
2 Min Read
SHARE

newsics.com

ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನ ಭಾರತದ ಕ್ರೀಡಾಳುಗಳು ಪದಕಗಳ ಭರ್ಜರಿ ಬೇಟೆ ಶುರು ಮಾಡಿದ್ದಾರೆ. ಒಂದೇ ದಿನ ನಾಲ್ಕು ಪದಕ ಬಾಚಿಕೊಂಡಿದ್ದಾರೆ.

ಮಹಿಳಾ 10 ಮೀ. ಏರ್ ರೈಲ್ಸ್ ಸ್ಟಾಂಡಿಂಗ್ ಎಸ್‌ಎಚ್1 ಫೈನಲ್‌ನಲ್ಲಿ ಅವನಿ ಲೇಖಾರಾ ಚಿನ್ನ ಗೆದ್ದರೆ, ಮತ್ತೊಬ್ಬ ಆಟಗಾರ್ತಿ ಮೋನಾ ಅಗರ್ವಾಲ್ ಕಂಚು ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ ವಿಭಾಗದ 10 ಮೀ. ಏರ್‌ಪಿಸ್ತೂಲ್ ಎಸ್‌ಎಚ್1 ಫೈನಲ್‌ನಲ್ಲಿ ಮನೀಶ್ ಅಗರ್ವಾಲ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ.

ಮಹಿಳಾ ವಿಭಾಗದ 100 ಮೀ. ಟಿ35 ವಿಭಾಗದಲ್ಲಿ ಪ್ರೀತಿ ಪಾಲ್ ಕಂಚು ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಭಾರತದ ಚಿನ್ನದ ಹುಡುಗಿ ಎಂದೇ ಖ್ಯಾತರಾಗಿರುವ ಅವನಿ ಲೇಖಾರಾ ಅವರು 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸಾಧನೆಯನ್ನೇ ಇಲ್ಲೂ ಪ್ರದರ್ಶಿಸಿದ್ದಾರೆ.

ಅಲ್ಲಿಯೂ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರಾ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ. ಸತತವಾಗಿ ಎರಡು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜತೆಗೆ ಮೂರು ಪದಕ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.

ಈ ಪ್ಯಾರಾಲಿಂಪಿಕ್ಸ್‌ನಲ್ಲಿ ಅವನಿ ಲೇಖಾರಾ 249.7 ಅಂಕಗಳೊಂದಿಗೆ ಗೆದ್ದು ಹೊಸ ದಾಖಲೆಯನ್ನೇ ಬರೆದರು. ಹಿಂದಿನ ದಾಖಲೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ 249.6 ಅಂಕಗಳಾಗಿತ್ತು.

ಪ್ಯಾರಾಲಿಂಪಿಕ್ಸ್‌ನ 2ನೇ ದಿನದ ಪಂದ್ಯಾವಳಿಯಲ್ಲಿ ಶೂಟಿಂಗ್‌ನಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿತು. ಈ ವಿಭಾಗದಲ್ಲೇ ಭಾರತ ಮೂರು ಪದಕ, ಅಂದರೆ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಿಯೊಬ್ಬರು ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಮಹಿಳೆಯರ 100 ಮೀ. ವಿಭಾಗದಲ್ಲಿ ಪ್ರೀತಿ ಪಲ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ ನಡೆಯಲಿರುವ 200 ಮೀ. ಟಿ35 ವಿಭಾಗದಲ್ಲಿಯೂ ಪ್ರೀತಿ ಪಲ್ ಸ್ಪರ್ಧಿಸಲಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಅವನಿ ಲೇಖಾರಾ, ಮೋನಾ ಅಗರ್ವಾಲ್, ಪ್ರೀತಿ ಪಲ್ ಮತ್ತು ಮನೀಶ್ ನರ್ವಾಲ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಚಿನ್ನ ಗೆಲ್ಲುವ ಮೂಲಕ ಅವನಿ ಲೇಖಾರಾ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಮೂರು ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆ ಮೋದಿ, ಬೈಡನ್ ಚರ್ಚೆ

ಅಂಕೋಲಾ ಬಳಿ ಟ್ಯಾಂಕರ್ ಉರುಳಿ ಆ್ಯಸಿಡ್ ಸೋರಿಕೆ, ದಟ್ಟ ಹೊಗೆ, ಹೆಚ್ಚಿದ ಆತಂಕ

ಹುಡುಗನ ಸ್ಪರ್ಶವಾದಾಗ ಹುಡುಗಿ ಹೀಗೆಲ್ಲ ಯೋಚಿಸ್ತಾಳೆ!

ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?

TAGGED:4 medals for India in Paralympics: Gold for AvaniBronze for MonaPreetiSilver for Manish
Share This Article
Facebook Twitter Copy Link Print
Previous Article 8 ಜನರ ಮುದ್ದಿನ ಮಡದಿ: ಈಕೆಯ ಕರಾಳ ಮುಖವಾಡ ಬಯಲು!
Next Article ಕೆಎಸ್ಆರ್‌ಟಿಸಿಗೆ ಅವಾರ್ಡ್‌ಗಳ ಸುರಿಮಳೆ: ಸೆಪ್ಟೆಂಬರ್ 21ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?