newsics.com | ನ್ಯೂಸಿಕ್ಸ್
ಗೋಕರ್ಣ(ಉತ್ತರ ಕನ್ನಡ): ಗೋಕರ್ಣ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದೆ.
ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಗುಡ್ಡದ ಕಲ್ಲು ಮಣ್ಣು ರಸ್ತೆಯಲ್ಲಿ ತುಂಬಿಕೊಂಡಿದ್ದು ಗಿಡಮರಗಳು ಬುಡ ಸಮೇತ ರಸ್ತೆಗೆ ಒರಗಿವೆ.
ಗುಡ್ಡ ಕುಸಿತವಾದ ಸ್ಥಳದಲ್ಲಿ ಜಲಪಾತದಂತೆ ನೀರು ಹರಿಯುತ್ತಿದ್ದು ಇನ್ನಷ್ಟು ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇದೆ.
ಗುಡ್ಡದ ಕಲ್ಲು ಮಣ್ಣುಗಳು ರಸ್ತೆಯಲ್ಲಿ ತುಂಬಿದ್ದರಿಂದ ತದಡಿಯಿಂದ ಗೋಕರ್ಣ, ಅಂಕೋಲಾ ಕಡೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
Yash Neel ‘ಮಹಾವತಾರ್’ ವರ್ಲ್ಡ್‌ಗೆ ಯಶ್ ಎಂಟ್ರಿ? ಪ್ರಶಾಂತ್ ನೀಲ್ ಜತೆಗಿನ ಆ ಫೋಟೋ ವೈರಲ್