newsics.com| ನ್ಯೂಸಿಕ್ಸ್
ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ‘ಕೆಜಿಎಫ್’ (KGF) ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆಯಾ?
ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ರಹಸ್ಯ ಮೀಟಿಂಗ್ ಮಾಡಿದ್ದಾರಾ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಬಿಸಿಬಿಸಿ ಸುದ್ದಿ ಇಡೀ ಇಂಡಸ್ಟ್ರಿಯ ನಿದ್ದೆಗೆಡಿಸಿದೆ!
ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಭಾರತದ ಅತಿ ದೊಡ್ಡ ಅನಿಮೇಷನ್ ಮತ್ತು ಪೌರಾಣಿಕ ಸರಣಿ ‘ಮಹಾವತಾರ್ ಸಿನಿಮಾಟಿಕ್ ಯೂನಿವರ್ಸ್’ (Mahavatar Cinematic Universe) ಗೆ ರಾಕಿ ಭಾಯ್ ಯಶ್ ಧ್ವನಿ ನೀಡಲಿದ್ದಾರೆ ಅಥವಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಗಾಂಧಿನಗರದಿಂದ ಬಾಲಿವುಡ್ವರೆಗೆ ತಲುಪಿದೆ.
ಏನಿದು ಮಹಾವತಾರ್ ಯೂನಿವರ್ಸ್?
ಚಿತ್ರರಂಗದಲ್ಲಿ ಸದ್ಯ ಗರಿಷ್ಠ ಮಟ್ಟದ ಹೈಪ್ ಸೃಷ್ಟಿಸಿರುವುದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಮಹಾವತಾರ್ ನರಸಿಂಹ’. ಇದು ಕೇವಲ ಒಂದು ಸಿನಿಮಾಗೆ ಸೀಮಿತವಾಗಿಲ್ಲ. 2027 ರಲ್ಲಿ ‘ಮಹಾವತಾರ್ ಪರಶುರಾಮ’, 2029 ರಲ್ಲಿ ‘ಮಹಾವತಾರ್ ರಘುನಂದನ್’ (ಶ್ರೀರಾಮ) ಹೀಗೆ 2037 ರವರೆಗೆ ಬ್ಯಾಕ್ ಟು ಬ್ಯಾಕ್ ಪೌರಾಣಿಕ ಸಾಹಸದ ಸರಣಿ ಸಿನಿಮಾಗಳು ತೆರೆಗೆ ಬರಲಿವೆ ಎಂದು ವರದಿಯಾಗಿದೆ.
ಬೆಂಕಿ ಹಚ್ಚಿದ ಆ ಫೋಟೋ ಲೀಕ್!
ಇತ್ತೀಚೆಗೆ ಪ್ರಶಾಂತ್ ನೀಲ್ ಹಾಗೂ ಯಶ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವೊಂದು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು, ‘ಮಹಾವತಾರ್’ ಸರಣಿಯ ಮುಂಬರುವ ಭಾಗಗಳಿಗೆ ಪ್ರಶಾಂತ್ ನೀಲ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಲಿದ್ದಾರೆ ಮತ್ತು ಯಶ್ ಈ ಯೂನಿವರ್ಸ್ನ ಪ್ರಮುಖ ಶಕ್ತಿಯಾಗಲಿದ್ದಾರೆ ಎಂಬ ಚರ್ಚೆ ಟ್ವಿಟರ್ (X) ನಲ್ಲಿ ಟ್ರೆಂಡ್ ಆಗ್ತಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿರುವ ಈ ಮಹಾ ಪ್ರಾಜೆಕ್ಟ್ಗೆ ಈ ಇಬ್ಬರು ದಿಗ್ಗಜರು ಸಾಥ್ ನೀಡಿದರೆ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಧೂಳೀಪಟವಾಗುವುದರಲ್ಲಿ ಸಂಶಯವಿಲ್ಲ.
ಟ್ವಿಟರ್ನಲ್ಲಿ ಫ್ಯಾನ್ಸ್ ರೇಪ್ಸ್!
ಈ ಸುದ್ದಿ ಹೊರಬೀಳುತ್ತಿದ್ದಂತೆ ಯಶ್ ಅಭಿಮಾನಿಗಳು ಇಂಟರ್ನೆಟ್ ತುಂಬೆಲ್ಲಾ ಮೀಮ್ಸ್ ಮತ್ತು ಥಿಯರಿಗಳನ್ನು ಹರಿಬಿಡುತ್ತಿದ್ದಾರೆ. “ರಾಕಿ ಭಾಯ್ ನರಸಿಂಹನ ಅವತಾರಕ್ಕೆ ಧ್ವನಿ ನೀಡಿದರೆ ಥಿಯೇಟರ್ಗಳು ನಡುಗುವುದು ಗ್ಯಾರಂಟಿ” ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ, ಈ ಮೆಗಾ ಅಪ್ಡೇಟ್ ಕುರಿತು ಹೊಂಬಾಳೆ ಫಿಲ್ಮ್ಸ್ ಆಗಲಿ ಅಥವಾ ಯಶ್-ಪ್ರಶಾಂತ್ ನೀಲ್ ತಂಡ ಅಧಿಕೃತವಾಗಿ ಏನನ್ನೂ ಹೇಳಿಲ್ಲ.