newsics.com | ನ್ಯೂಸಿಕ್ಸ್
ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಭಾರತದ ದೇಸೀ ತಂತ್ರಜ್ಞಾನ ನಿರ್ಮಿತ ಪ್ರಪ್ರಥಮ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 17) ಹಸಿರು ನಿಶಾನೆ ತೋರಿಸಿದ್ದಾರೆ.
ಈ ರೈಲಿನಲ್ಲಿ ಬಳಸಲಾಗಿರುವ ಸ್ವಚ್ಛ ಇಂಧನ ತಂತ್ರಜ್ಞಾನವೇ ಇದರ ಪ್ರಮುಖ ಆಕರ್ಷಣೆಯಾಗಿದ್ದರೂ, ಇದರ ಅಗ್ಗದ ಟಿಕೆಟ್ ದರವು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ರೈಲಿನ ಆರಂಭಿಕ ಪ್ರಯಾಣ ದರ ಕೇವಲ 5 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, ಗರಿಷ್ಠ ದರ 25 ರೂಪಾಯಿಗಳಾಗಿರಲಿದೆ. ಈ ಹೈಡ್ರೋಜನ್ ರೈಲು ಪ್ರಯಾಣಿಕರಿಗೆ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ. ವಿಶೇಷವೆಂದರೆ, ಇದರ ಆರಂಭಿಕ ದರವು ಹಲವು ರೈಲು ನಿಲ್ದಾಣಗಳಲ್ಲಿ ನೀಡಲಾಗುವ ಪ್ಲಾಟ್ಫಾರ್ಮ್ ಟಿಕೆಟ್ ದರಕ್ಕಿಂತಲೂ ಕಡಿಮೆಯಾಗಿದೆ.
10 ಬೋಗಿಗಳ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿದ್ದು, ಸುಮಾರು 90 ಕಿಲೋಮೀಟರ್ ದೂರವನ್ನು ತಲುಪಲು ಸುಮಾರು ಎರಡು ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿ ಒಟ್ಟು 11 ತಂಗುದಾಣಗಳಿದ್ದು, ಪ್ರತಿದಿನ ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಸಂಪೂರ್ಣವಾಗಿ ದೇಶೀಯ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನವನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಂಪ್ರದಾಯಿಕ ವಿದ್ಯುತ್ ಲೈನ್ಗಳ ಹಂಗಿಲ್ಲದೆ ಈ ರೈಲು ಚಲಿಸಲಿದೆ.
ನೀರನ್ನಷ್ಟೇ ಹೊರಸೂಸುವ ರೈಲು!…
ಇಂಧನವಾಗಿ ಡೀಸೆಲ್ ಬಳಸುವ ಹಾಗೂ ಕಾರ್ಬನ್ ಹೊರಸೂಸುವ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ಈ ಹೈಡ್ರೋಜನ್ ಚಾಲಿತ ರೈಲು ಭಿನ್ನವಾಗಿದ್ದು, ಕೇವಲ ನೀರಾವಿಯನ್ನು ಮಾತ್ರ ಹೊರಹಾಕುತ್ತದೆ. ಹೀಗಾಗಿ ಇದು ಸಂಪೂರ್ಣವಾಗಿ ಶೂನ್ಯ-ಉದ್ವಾರದ (Zero-emission) ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ.
ರೈಲಿನ ಸಂಚಾರಕ್ಕೆ ಅಗತ್ಯವಿರುವ ಗ್ರೀನ್ ಹೈಡ್ರೋಜನ್ ಅನ್ನು ಜಿಂದ್ನಲ್ಲಿಯೇ ಸ್ಥಾಪಿಸಲಾದ ಸುಸಜ್ಜಿತ ಘಟಕದಿಂದ ಪೂರೈಸಲಾಗುತ್ತದೆ.
ಸುರಕ್ಷಿತ ಸಂಚಾರಕ್ಕಾಗಿ ಈ ಯೋಜನೆಯಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಜರ್ಮನಿ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಸೇರಿದಂತೆ ಕೆಲವೇ ಕೆಲವು ದೇಶಗಳಲ್ಲಿ ಹೈಡ್ರೋಜನ್ ರೈಲುಗಳನ್ನು ಬಳಸಲಾಗುತ್ತಿದೆ ಅಥವಾ ಪರೀಕ್ಷಿಸಲಾಗುತ್ತಿದೆ. ಈ ಉದ್ಘಾಟನೆಯೊಂದಿಗೆ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನವನ್ನು ಬಳಸುತ್ತಿರುವ ವಿಶ್ವದ ಬೆರಳೆಣಿಕೆಯ ಪ್ರಮುಖ ದೇಶಗಳ ಸಾಲಿಗೆ ಭಾರತವೂ ಸೇರಿದೆ.
ಹೈಡ್ರೋಜನ್ ಟ್ರೈನ್ಗೆ ಮೋದಿ ಚಾಲನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಪ್ರಥಮ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹರಿಯಾಣದ ಜಿಂದ್ನಿಂದ ಸೋನಿಪತ್ ಮಾರ್ಗದಲ್ಲಿ ಈ ಹೈಡ್ರೋಜನ್ ರೈಲು ತನ್ನ ಮೊದಲ ಸಂಚಾರವನ್ನು ಆರಂಭಿಸಿದೆ.
#WATCH | Jind, Haryana: Prime Minister Narendra Modi flags off the country's first hydrogen-powered train from Jind to Sonipat
(Video source: DD) pic.twitter.com/kMQv2nBhOZ
— ANI (@ANI) July 17, 2026
Server down ನಾಡಕಚೇರಿ ವೆಬ್ಸೈಟ್ ಸರ್ವರ್ ಡೌನ್: ಜಾತಿ, ಆದಾಯ ಪತ್ರ ಸಿಗದೆ ಜನರ ಪರದಾಟ