newsics.com | ನ್ಯೂಸಿಕ್ಸ್
ಗಾನಕೋಗಿಲೆ ಎಸ್ ಜಾನಕಿ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಭಾರತೀಯರ ಹೃದಯ ಗೆದ್ದವರು. ಆದರೆ, ಕಳೆದ ಕೆಲವು ಸಮಯದಿಂದ ಅವರು ಹೈದರಾಬಾದ್ನ ತಮ್ಮ ಭವ್ಯ ಬಂಗಲೆಯನ್ನ ಬಿಟ್ಟು, ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ದೊಡ್ಡ ಬಂಗಲೆ, ಹಣದ ಸೌಲಭ್ಯವಿದ್ದರೂ ಜಾನಕಿ ಅವರು ಬಾಡಿಗೆ ಮನೆಯಲ್ಲಿ ಯಾಕಿದ್ದರು? ಅನ್ನೋ ಪ್ರಶ್ನೆಗೆ ಇದೀಗ ಅವರ ಕೇರ್ಟೇಕರ್ಗಳಾದ ಪವನ್ ಮತ್ತು ನವೀನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇರ್ಟೇಕರ್ ಪವನ್, “ಅವರ ಮೊಮ್ಮಗಳಿಗೂ ಜಾನಕಿಯಮ್ಮ ಮೈಸೂರಿನಲ್ಲಿರೋದೇ ಸೇಫ್ ಅಂತ ಚೆನ್ನಾಗಿ ಗೊತ್ತಿತ್ತು. ಯಾಕೆಂದರೆ, ಸತತವಾಗಿ ಅವರ ಮೊಮ್ಮಗಳು ಅಪ್ಸರಾ ಏಳೆಂಟು ತಿಂಗಳಿನಿಂದಲೂ ಮೈಸೂರಿಗೆ ಬಂದು ಹೋಗೋದೆಲ್ಲವನ್ನೂ ಮಾಡ್ತಾ ಇದ್ದಳು. ನಾವೆಲ್ಲಾ ಇಲ್ಲಿ ಅಮ್ಮನನ್ನ ಹೇಗೆ ನೋಡಿಕೊಳ್ತಿದ್ದೇವೆ? ಎಷ್ಟು ಸೇಫ್ ಆಗಿ ಅವರನ್ನ ಹ್ಯಾಂಡಲ್ ಮಾಡ್ತಿದ್ದೇವೆ? ಡಾಕ್ಟರ್ ಸಪೋರ್ಟ್ ಎಲ್ಲಾ ಹೇಗಿದೆ? ಅನ್ನೋದು ಅಪ್ಸರಾಗೆ ಒಂದು ಐಡಿಯಾ ಇತ್ತು” ಎಂದಿದ್ದಾರೆ.
ಈಗ ಬಾಡಿಗೆ ಮನೆ ವಿಷ್ಯ, ಏನೂ ಇಲ್ಲ ಬಾಡಿಗೆ ಮನೆಯಲ್ಲಿದ್ದಾರೆ ಅಂತ ಹೇಳೋದು ತುಂಬಾ ಮೂರ್ಖತನ. ಆ ರೀತಿ ಯಾರು ಮಾತಾಡ್ತಿದ್ದಾರೋ ಅವರು ಮೂರ್ಖರು, ದಡ್ಡರು. ಜಾನಕಿ ಅಮ್ಮ ಅವರದ್ದು ಹೈದರಾಬಾದ್ನಲ್ಲೂ ಸೂಪರ್ ಆಗಿರುವ ಬಂಗಲೇ ಇದೆ. ಅಲ್ಲಿ ಎಲ್ಲಾ ತರಹದ ಫೆಸಿಲಿಟಿ ಇದೆ. ಅವರ ಮನೆ ಸುತ್ತ, ವಿಲ್ಲಾ ಸುತ್ತ ಐದೈದು ಸೆಕ್ಯೂರಿಟಿಗಳಿರ್ತಾರೆ. ಮಧ್ಯರಾತ್ರಿಯಲ್ಲಿ ಕೂಗಿದ್ರು ಓಡಿ ಬರ್ತಾರೆ. ಅಷ್ಟು ಟೈಟ್ ಸೆಕ್ಯೂರಿಟಿ ಇದೆ ಅವರ ಹೈದರಾಬಾದ್ ಬಂಗಲೆಗೆ. ಅಮ್ಮನ ಬಳಿ ಸಾಕಷ್ಟು ಹಣ ಇತ್ತು.
ಅಣ್ಣ (ಮುರಳಿಕೃಷ್ಣ, ಎಸ್ ಜಾನಕಿ ಅವರ ಮಗ) ಮೂರು ಮೂರು ಕಾರು ಇಟ್ಟುಕೊಂಡಿದ್ರು. ಅಮ್ಮನಿಗೆ ಏನೂ ಕುಂದುಕೊರತೆ ಬಾರದೇ ಇರುವ ರೀತಿ ಅಣ್ಣ, ಅಮ್ಮನನ್ನ ನೋಡಿಕೊಂಡಿದ್ರು. ಎಲ್ಲದರಲ್ಲೂ ಸಮೃದ್ಧವಾಗಿದ್ದರು” ಎಂದಿದ್ದಾರೆ ಕೇರ್ಟೇಕರ್ ಪವನ್.
ಹಾಗಾದರೆ, ಭವ್ಯ ಬಂಗಲೆಯನ್ನು ಬಿಟ್ಟು ಜಾನಕಿಯಮ್ಮ ಮೈಸೂರಿನಲ್ಲಿ ಕಾಲ ಕಳೆಯಲು ಮುಖ್ಯ ಕಾರಣವೇನು ಎಂಬ ರಹಸ್ಯವನ್ನೂ ಅವರು ಬಿಚ್ಚಿಟ್ಟಿದ್ದಾರೆ. “ಅಮ್ಮ ಮೈಸೂರನ್ನ ಯಾಕೆ ಇಷ್ಟಪಡ್ತಿದ್ರು ಅಂತಂದರೆ, ಮುರಳಿ ಅಣ್ಣನಿಗೆ ಈ ಕ್ರೆಡಿಟ್ ಹೋಗಬೇಕು. ಮುರಳಿ ಅಣ್ಣ ತುಂಬಾ ಸ್ಪಿರಿಚ್ಯೂವಲ್ ಆಗಿದ್ರು. ಅವರಿಗೆ ದೇವಸ್ಥಾನಗಳಿಗೆ ಹೆಚ್ಚು ಹೋಗುವ ಹಾಬಿ ಇತ್ತು. ಮೈಸೂರು ಅಂತಂದರೆ, ಅದೇನೋ ಪ್ರಶಾಂತತೆ ಅವರಿಗೆ. ಏನೋ ಒಂಥರಾ ಖುಷಿ ಮತ್ತು ಆನಂದ” ಎಂದಿದ್ದಾರೆ ಕೇರ್ ಟೇಕರ್ ಪವನ್ ಮತ್ತು ನವೀನ್.
ಗಾನಕೋಗಿಲೆ ಎಸ್ ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಆಂಧ್ರ ಪ್ರದೇಶದವರಾದ ಇವರು, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನೆಲೆಸಿದ್ದರು. ತಮ್ಮ ಕೊನೆಯ ದಿನಗಳನ್ನ ಮೈಸೂರಿನಲ್ಲೇ ಕಳೆದರು.