newsics.com | ನ್ಯೂಸಿಕ್ಸ್
ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಜುಲೈ 11ರ ಮುಂಜಾನೆ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ರಾಜ್ ನಗರ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಾಲ್ ಒಂದರ ಬೇಸ್ಮೆಂಟ್ನಲ್ಲಿ 7 ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ.
ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.
ತಿಂಡಿಯ ಆಸೆ ತೋರಿಸಿ ಅಪಹರಣ
ಮೃತ ಬಾಲಕಿಯು ಬಿಹಾರ ಮೂಲದ ವಲಸೆ ಕಾರ್ಮಿಕರ ಮಗಳಾಗಿದ್ದು, ಅವಳ ಪೋಷಕರು ಈ ಮಾಲ್ ನಿರ್ಮಾಣ ಸ್ಥಳದ ಸಮೀಪದಲ್ಲೇ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದರು. ಜುಲೈ 10ರ ಶುಕ್ರವಾರ ಸಂಜೆ ಸುಮಾರು 7:30ರ ಸುಮಾರಿಗೆ ಮಗು ಕಾಣೆಯಾಗಿತ್ತು. ಆರೋಪಿಗಳು ಮಗುವಿಗೆ ಕುರುಕಲು ತಿಂಡಿ ಹಾಗೂ ಜ್ಯೂಸ್ ಕೊಡಿಸುವ ಆಸೆ ತೋರಿಸಿ ಕರೆದೊಯ್ದಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತಡರಾತ್ರಿ 1:00 ಗಂಟೆಯ ಸುಮಾರಿಗೆ ಮಾಲ್ನ ಎರಡನೇ ಬೇಸ್ಮೆಂಟ್ನಲ್ಲಿ ರಕ್ತದ ಮಡುವಿನಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಪೋಕ್ಸೋ ಪ್ರಕರಣ ದಾಖಲು
ಮಗುವಿನ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಅಥವಾ ಮೇಲಿಂದ ಕೆಳಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಗುವಿನ ದೇಹದ ಹಲವು ಭಾಗಗಳಲ್ಲಿ ಮೂಳೆ ಮುರಿತಗಳಾಗಿದ್ದವು.
ಘಟನಾ ಸ್ಥಳಕ್ಕೆ ನಂದಗ್ರಾಮ್ ಪೊಲೀಸರು, ಫೋರೆನ್ಸಿಕ್ ತಂಡ ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ವರ ವಶ, ತನಿಖೆ ಚುರುಕು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 4 ರಿಂದ 5 ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆಯಿಂದಾಗಿ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿರ್ಮಾಣ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Misbehave with female students ಖಾಸಗಿ ಬಸ್ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ ನೀಡಿದ ಕಂಡಕ್ಟರ್ ಬಂಧನ
Brain Chip ಪಾರ್ಶ್ವವಾಯುಪೀಡಿತನ ಮೆದುಳಿಗೆ ಚಿಪ್; ಆಲೋಚನೆಗಳ ಮೂಲಕವೇ ಕಂಪ್ಯೂಟರ್ ನಿಯಂತ್ರಿಸಿ ಇತಿಹಾಸ ಸೃಷ್ಟಿ!
Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!