Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ
ಕರ್ನಾಟಕದೇಶಪ್ರಮುಖಮನರಂಜನೆ

Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

Share
2 Min Read
SHARE

newsics.com | ನ್ಯೂಸಿಕ್ಸ್

‘ಕಲರ್ಸ್’ ಖ್ಯಾತಿಯ ನಟಿ ಸ್ವಾತಿ ರೆಡ್ಡಿ ಅವರು ‘ಮಂತ್ ಆಫ್ ಮಧು’ ಚಿತ್ರದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಹಿಂದೆ ಪೈಲಟ್ ವಿಕಾಸ್ ವಾಸು ಅವರಿಂದ ಡಿವೋರ್ಸ್​ ಪಡೆದಿದ್ದ ಸ್ವಾತಿ, ಇದೀಗ ತಮ್ಮದೇ ಸಿನಿಮಾ ನಿರ್ದೇಶಕರ ಕೈಹಿಡಿದಿದ್ದಾರೆ.

ಕಾಲಿವುಡ್​ ಮತ್ತು ಟಾಲಿವುಡ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಸ್ವಾತಿ, ಅವರು ಸದ್ದಿಲ್ಲದೇ 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ‘ಕಲರ್ಸ್’ ಎನ್ನುವ ಟಿವಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸ್ವಾತಿ ‘ಕಲರ್ಸ್​​ ಸ್ವಾತಿ ರೆಡ್ಡಿ’ (Swathi Reddy) ಎಂದೇ ಫೇಮಸ್​​ ಆಗಿರುವ ನಟಿ ಸ್ವಾತಿ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಡನೆ ಮದುವೆಯಾಗಿದ್ದಾರೆ. ಇದರ ಫೋಟೋಗಳು ಈಗ ವೈರಲ್​ ಆಗುತ್ತಿವೆ.

ತಮಿಳಿನ ಸೂಪರ್ ಹಿಟ್ ‘ಸುಬ್ರಹ್ಮಣ್ಯಪುರಂ’ ಸಿನಿಮಾದ ನಟಿಯಾಗಿ ದೊಡ್ಡ ಜನಪ್ರಿಯತೆ ಗಳಿಸಿದ ಸ್ವಾತಿ ರೆಡ್ಡಿ (Swathi Reddy) ತಮ್ಮದೇ ಸಿನಿಮಾ ‘ಮಂತ್ ಆಫ್ ಮಧು’ ಸಿನಿಮಾದ ನಿರ್ದೇಶಕರಾಗಿದ್ದ ಶ್ರೀಕಾಂತ್ ನಾಗೋಟಿ ಅವರ ಕೈಹಿಡಿದ್ದಾರೆ. ಎಂಬಿಎ ಪದವಿ ಗಳಿಸಿ, ಕಾರ್ಪೋರೇಟ್​ ವಲಯದಲ್ಲಿ ಕೆಲಸ ಮಾಡಿ, ನಿರ್ದೇಶಕರಾಗುವ ನಿಟ್ಟಿನಲ್ಲಿ ಕೆಲಸ ಬಿಟ್ಟು ಬಂದಿದ್ದ ಶ್ರೀಕಾಂತ್​ ಅವರೀಗ ಸ್ವಾತಿ ಅವರ ಪತಿಯಾಗಿದ್ದಾರೆ. ಸ್ವಾತಿ ರೆಡ್ಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಚಿತ್ರಗಳನ್ನು ಪೋಸ್ಟ್ ಮಾಡಿ, ”ಮದುವೆಯಾಗಿದೆ” ಎಂಬ ಒಂದೇ ಪದದ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

ಹಲವು ವರ್ಷ ಸಿನಿಮಾದಿಂದ ವಿರಾಮ ಪಡೆದಿದ್ದ ಸ್ವಾತಿ ಅವರು, 2023ರಲ್ಲಿ ಬಿಡುಗಡೆಯಾದ ಭಾವನಾತ್ಮಕ ಚಿತ್ರ ‘ಮಂತ್ ಆಫ್ ಮಧು’ ಮೂಲಕ ಮತ್ತೆ ಪ್ರವೇಶ ಮಾಡಿದ್ದರು. ಇದರ ನಿರ್ದೇಶನ ಮಾಡಿದವರು ಶ್ರೀಕಾಂತ್ ನಾಗೋಟಿ. ಈ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಅದು ಪ್ರೀತಿಗೆ ತಿರುಗಿ ಈಗ ಮದುವೆ ಆಗಿದೆ ಎಂದು ತಿಳಿದುಬಂದಿದೆ.

ಸ್ವಾತಿ ಅವರು, 2018 ರಲ್ಲಿ ಅವರು ಮಲಯಾಳಂ ಮೂಲದ ಪೈಲೆಟ್ ಆಗಿದ್ದ ವಿಕಾಸ್ ವಾಸು ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಅವರು ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. 2022 ರಲ್ಲಿ ವಿಕಾಸ್ ಅವರಿಂದ ವಿಚ್ಛೇದನ ಪಡೆದಿದ್ದರು. ಸಾಮಾಜಿಕ ಜಾಲತಾಣಗಳಿಂದ ಪತಿಯೊಂದಿಗಿನ ಫೋಟೋಗಳನ್ನು ತೆಗೆದುಹಾಕಿದ್ದರಿಂದ ವಿಷಯ ಬೆಳಕಿಗೆ ಬಂದಿತ್ತು.

ಬಳಿಕ ತೆಲುಗಿನ ‘ಡೇಂಜರ್’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸ್ವಾತಿಗೆ ಅವರು ನಟಿಸಿದ ಎರಡನೇ ಸಿನಿಮಾ ‘ಆಡುವಾರಿ ಮಾಟಲಕು ಅರ್ಥಾಲೆ ವೇರುಲೆ’ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಕ್ಕಿತು. ಆ ಸಿನಿಮಾನಲ್ಲಿ ಸ್ವಾತಿ, ನಾಯಕಿ ತ್ರಿಷಾ ಅವರ ಸಹೋದರಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ನಾಯಕಿಗಿಂತಲೂ ಹೆಚ್ಚು ಮಿಂಚಿದರು.

ತೆಲುಗು ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಸ್ವಾತಿ ತಮ್ಮದೇ ಛಾಪು ಮೂಡಿಸಿದ್ದಾರೆ. ವಿಶೇಷವಾಗಿ ‘ಸುಬ್ರಮಣ್ಯಪುರಂ’ ಚಿತ್ರದ ನೈಜ ಅಭಿನಯಕ್ಕೆ ಅವರು ಅಪಾರ ಮೆಚ್ಚುಗೆ ಪಡೆದಿದ್ದರು. ಟಾಲಿವುಡ್ ಮತ್ತು ಕಾಲಿವುಡ್ ಎರಡರಲ್ಲೂ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಸ್ವಾತಿ, ಅಭಿನಯದ ಜೊತೆಗೆ ಸರಳ ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ.

Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ

BSNL ಕ್ರಾಂತಿಕಾರಕ ಮೊಬೈಲ್ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್! ಇದು ಅಂತಿಂಥ ಪೋನ್ ಅಲ್ಲ, ಬೆಲೆಯೂ ಕಡಿಮೆಯಿಲ್ಲ

Female student dies ಶಿಕ್ಷಕಿ ಬೈದಿದ್ದಕ್ಕೆ ಜೀವ ಕಳೆದುಕೊಂಡ ಎಂಟನೇ ತರಗತಿ ವಿದ್ಯಾರ್ಥಿನಿ

Fake Teachers ನಕಲಿ ಅಂಕಪಟ್ಟಿ ಜಾಲಕ್ಕೆ ಸರ್ಕಾರ ಬ್ರೇಕ್: 3,035 ಶಿಕ್ಷಕರು ಉದ್ಯೋಗದಿಂದ ವಜಾ

TAGGED:Actress Swathi Reddy got married for the second time
Share This Article
Facebook Twitter Copy Link Print
Previous Article Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ
Next Article TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

Popular Posts

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

You Might Also Like

ಕರ್ನಾಟಕಪ್ರಮುಖ

Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!

1 Min Read
ಕರ್ನಾಟಕದೇಶಪ್ರಮುಖ

Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್‌.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

1 Min Read
ದೇಶಪ್ರಮುಖ

TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

1 Min Read
ಕರ್ನಾಟಕಆರೋಗ್ಯದೇಶಪ್ರಮುಖ

Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ‌ ಬದಲಾವಣೆ ನಿರೀಕ್ಷೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?