newsics.com | ನ್ಯೂಸಿಕ್ಸ್
BSNL ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಫೋನ್ ಲಾಂಚ್ ಮಾಡಿದೆ. ಇದರ ಬೆಲೆ ಬರೋಬ್ಬರಿ 1.34 ಲಕ್ಷ ರೂಪಾಯಿ ಆಗಿದೆ. ಹಾಗಂತ ಈ ಫೋನ್ ಎಲ್ಲರೂ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದ್ರೂ ಅದಕ್ಕೆ ಅದರದ್ದೇ ಆದ ನೀತಿ, ನಿಯಮಗಳು ಇವೆ.
ನೀವು ಕಾಡು, ಬೆಟ್ಟ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದ ಕುಗ್ರಾಮದಲ್ಲಿದ್ದೀರಾ? ಅಲ್ಲಿ ಯಾರಿಗಾದರೂ ತುರ್ತು ಕರೆ ಮಾಡಬೇಕೆಂದರೆ ಸಾಧ್ಯವಿಲ್ಲವೇ?
ಈ ಸಮಸ್ಯೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಪರಿಹಾರ ಕಂಡುಕೊಂಡಿದೆ.
ಭಾರತದಲ್ಲಿ ಬಿಎಸ್‌ಎನ್‌ಎಲ್ ಹೊಸ ಸ್ಯಾಟಲೈಟ್ ಫೋನ್ (Satellite Phone) ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್‌ಗಳು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿವೆ.

ಬೆಲೆ ಎಷ್ಟು?
ಈ ಸ್ಯಾಟಲೈಟ್ ಫೋನ್ ಬೆಲೆಯನ್ನು ಬಿಎಸ್‌ಎನ್‌ಎಲ್ 1,34,166 ರೂಪಾಯಿ (ತೆರಿಗೆ ಸೇರಿದಂತೆ) ಎಂದು ನಿಗದಿಪಡಿಸಿದೆ. ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತೆ ಅಗ್ಗವಾಗಿಲ್ಲ, ಏಕೆಂದರೆ ಇದು ವಿಶೇಷ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯ ಫೋನ್‌ಗಳು ನಮ್ಮ ಹತ್ತಿರದ ಮೊಬೈಲ್ ಟವರ್‌ಗಳಿಂದ ಸಿಗ್ನಲ್ ಪಡೆಯುತ್ತವೆ. ಈ ಸ್ಯಾಟಲೈಟ್ ಫೋನ್ ಯಾವುದೇ ಟವರ್‌ಗಳ ಮೇಲೆ ಅವಲಂಬಿತವಾಗಿಲ್ಲ.
ಇದು ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹಗಳ (Satellites) ಮೂಲಕ ನೇರವಾಗಿ ಸಂಪರ್ಕ ಸಾಧಿಸುತ್ತದೆ. ಇನ್ಮಾರ್ಸಾಟ್ (Inmarsat) ನಂತಹ ಜಾಗತಿಕ ಸ್ಯಾಟಲೈಟ್ ನೆಟ್‌ವರ್ಕ್ ಕಂಪನಿಗಳ ಸಹಯೋಗದೊಂದಿಗೆ ಈ ಸೇವೆಯನ್ನು ನೀಡಲಾಗುತ್ತಿದೆ.
- ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ವಾಯ್ಸ್ ಕರೆ ಮಾಡಬಹುದು.
- ಸಂಕಷ್ಟದ ಸಮಯದಲ್ಲಿ ತುರ್ತು ನೆರವು ಪಡೆಯಲು ಎಸ್‌ಒಎಸ್ ಬಟನ್ ನೀಡಲಾಗಿದೆ
- ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಡೆಗಳಲ್ಲೂ ದೀರ್ಘಕಾಲ ಬಳಸಲು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ
- ಕಠಿಣ ವಾತಾವರಣ, ಮಳೆ ಅಥವಾ ಧೂಳಿನಲ್ಲೂ ಕೆಲಸ ಮಾಡುವಂತೆ ವಿನ್ಯಾಸ
- ಬಿಎಸ್‌ಎನ್‌ಎಲ್ ಈ ಫೋನ್ ಅನ್ನು ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚಾಗಿ ಗಂಭೀರ ಕೆಲಸಗಳಲ್ಲಿ ತೊಡಗಿರುವವರಿಗಾಗಿ ಬಿಡುಗಡೆ ಮಾಡಿದೆ.
- ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಸೈನಿಕರು
- ಪ್ರವಾಹ ಅಥವಾ ಭೂಕಂಪದ ಸಮಯದಲ್ಲಿ ನೆಟ್‌ವರ್ಕ್ ಕಡಿತಗೊಂಡಾಗ
- ಕಾಡು ಅಥವಾ ಸಮುದ್ರದ ಮಧ್ಯೆ ಕೆಲಸ ಮಾಡುವವರು
- ಹಿಮಾಲಯದಂತಹ ದುರ್ಗಮ ಪ್ರದೇಶಗಳಿಗೆ ಹೋಗುವ ಪ್ರವಾಸಿಗರು.
ಯಾರು ಬೇಕಾದರೂ ಸುಮ್ಮನೆ ಇದನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ಖರೀದಿಸುವ ಮೊದಲು ಕೇಂದ್ರ ದೂರಸಂಪರ್ಕ ಇಲಾಖೆಯಿಂದ (DoT) ಕಡ್ಡಾಯವಾಗಿ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿಯಿಲ್ಲದೆ ಸ್ಯಾಟಲೈಟ್ ಫೋನ್ ಹೊಂದುವುದು ಅಥವಾ ಬಳಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.
Fake Teachers ನಕಲಿ ಅಂಕಪಟ್ಟಿ ಜಾಲಕ್ಕೆ ಸರ್ಕಾರ ಬ್ರೇಕ್: 3,035 ಶಿಕ್ಷಕರು ಉದ್ಯೋಗದಿಂದ ವಜಾ