newsics.com | ನ್ಯೂಸಿಕ್ಸ್
ಅಂಕಾರ (ಟರ್ಕಿ): ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹತ್ಯೆಗೆ ಇರಾನ್ ಸಂಚು ರೂಪಿಸುತ್ತಿದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ. ತಾವೇ ಇರಾನ್‌ನ ಹಿಟ್‌ಲಿಸ್ಟ್‌ನಲ್ಲಿ ನಂಬರ್ ಒನ್ ವ್ಯಕ್ತಿ ಎಂದು ಹೇಳಿಕೊಂಡಿರುವ ಟ್ರಂಪ್, ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ತಾವು ಪ್ರಯಾಣಿಸಬೇಕಿದ್ದ ಅಧಿಕೃತ ‘ಏರ್ ಫೋರ್ಸ್ ಒನ್’ ವಿಮಾನವನ್ನೇ ಬದಲಾಯಿಸಿರುವ ಅಚ್ಚರಿಯ ಬೆಳವಣಿಗೆ ನಡೆದಿದೆ.
ಹೌದು, ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಿ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಈ ಹೈಡ್ರಾಮಾ ನಡೆದಿದೆ.
ಕೊನೆ ಕ್ಷಣದಲ್ಲಿ ಪ್ಲಾನ್ ಚೇಂಜ್: ಕತಾರ್ ಗಿಫ್ಟ್ ವಿಮಾನ ನಿರಾಕರಣೆ
ಶೃಂಗಸಭೆಗೆ ಬರಲು ಟ್ರಂಪ್ ಅವರು ಕತಾರ್ ದೇಶವು ಉಡುಗೊರೆಯಾಗಿ ನೀಡಿದ್ದ ಅತ್ಯಾಧುನಿಕ ಬೋಯಿಂಗ್ 747 ವಿಮಾನವನ್ನು ಬಳಸಿದ್ದರು. ಆದರೆ ಇರಾನ್ ದಾಳಿ ಮಾಡಬಹುದು ಎಂಬ ಗುಪ್ತಚರ ಮಾಹಿತಿ ಹಾಗೂ ಕಳವಳದ ಹಿನ್ನೆಲೆಯಲ್ಲಿ, ವಾಪಸ್ ತೆರಳುವಾಗ ಆ ವಿಮಾನವನ್ನು ಹತ್ತಲು ಟ್ರಂಪ್ ನಿರಾಕರಿಸಿದ್ದಾರೆ. ಬದಲಿಗೆ, ಯುಕೆ (UK) ಯಲ್ಲಿರುವ ಆರ್‌ಎಎಫ್ ಮಿಲ್ಡೆನ್‌ಹಾಲ್‌ನಲ್ಲಿ ಸಿದ್ಧವಾಗಿಡಲಾಗಿದ್ದ ಹಳೆಯ ಲೆಗಸಿ ಬೇಬಿ ಬ್ಲೂ ಏರ್ ಫೋರ್ಸ್ ಒನ್ ವಿಮಾನದಲ್ಲಿ ಪ್ರಯಾಣಿಸಲು ಕೊನೆ ಕ್ಷಣದಲ್ಲಿ ನಿರ್ಧರಿಸಿದ್ದಾರೆ.
“ನೀವು ಅಪಾಯಕಾರಿ ವಿಮಾನದಲ್ಲಿದ್ದೀರಿ…” ಪತ್ರಕರ್ತರಿಗೆ ಟ್ರಂಪ್ ವಾರ್ನಿಂಗ್
ವಿಮಾನದಲ್ಲಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, ಮೇಲ್ನೋಟಕ್ಕೆ ಯಾವುದೇ ಸೆಕ್ಯೂರಿಟಿ ಆತಂಕವಿಲ್ಲ ಎನ್ನುತ್ತಲೇ ಗಂಭೀರ ಎಚ್ಚರಿಕೆ ನೀಡಿದ್ದಾರೆ. “ನೀವು ಬಹುಶಃ ಅಪಾಯಕಾರಿ ವಿಮಾನದಲ್ಲಿದ್ದೀರಿ. ಇರಾನಿಯನ್ನರು ಭ್ರಷ್ಟರು, ನನಗೆ ಯಾವಾಗಲೂ ಅವರ ಕಡೆಯಿಂದ ಬೆದರಿಕೆ ಇರುತ್ತದೆ. ನಾನು ಅವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇನೆ. ಹಾಗಾಗಿ ನನಗೆ ಏನಾದರೂ ಆದರೆ, ನೀವು ಹೋಗುತ್ತೀರಿ. ಬಹುಶಃ ಒಂದು ದಿನ ನೀವು ನಿಮ್ಮ ವೃತ್ತಿಯನ್ನೇ ಬದಲಾಯಿಸಲು ಬಯಸಬಹುದು” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಲಕ್ ಹೆಚ್ಚು ದಿನ ಇರಲ್ಲ ಅನಿಸುತ್ತಿದೆ
ಇರಾನ್‌ನ ಹಿಟ್‌ಲಿಸ್ಟ್ ಕುರಿತು ಮಾತನಾಡಿದ ಟ್ರಂಪ್, “ಈಗಾಗಲೇ ಇರಾನ್‌ನ ಹಳೆಯ ನಾಯಕರು ಇಲ್ಲವಾಗಿದ್ದಾರೆ, ಈಗಿರುವವರೂ ಇರುವುದಿಲ್ಲ. ಮುಂದೆ ಬರುವವರೂ ಬೇಗನೆ ಹೋಗುತ್ತಾರೆ. ಅಷ್ಟೇ ಯಾಕೆ, ನಾನು ಕೂಡ ಇಲ್ಲವಾಗಬಹುದು. ಏಕೆಂದರೆ ಅವರ ಪ್ರತಿಯೊಂದು ಹಿಟ್‌ಲಿಸ್ಟ್‌ನಲ್ಲೂ ನಾನೇ ಮೊದಲ ಟಾರ್ಗೆಟ್. ಕಳೆದ 47 ವರ್ಷಗಳಿಂದ ಅವರು ಹೀಗೆಯೇ ವಿಕೃತಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಹತ್ಯೆಯ ಸಂಚಿನಿಂದ ತಪ್ಪಿಸಿಕೊಳ್ಳಲು ನನಗೆ ಅದೃಷ್ಟ (Luck) ಸಾinternal ನೀಡಿದೆ. ಆದರೆ ಆ ಲಕ್ ಹೆಚ್ಚು ಕಾಲ ಉಳಿಯುತ್ತದೆ ಎನಿಸುವುದಿಲ್ಲ” ಎಂದು ಆತಂಕ ಹೊರಹಾಕಿದ್ದಾರೆ. ಸದ್ಯ ಟ್ರಂಪ್ ಅವರ ಈ ದಿಢೀರ್ ನಡೆ ಮತ್ತು ಹೇಳಿಕೆಗಳು ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿವೆ.
Rajesh Sharma ಶೂಟಿಂಗ್ ವೇಳೆ ನಟನಿಗೆ ಕಚ್ಚಿದ ವಿಷಕಾರಿ ಕೀಟ; ಐಸಿಯುನಲ್ಲಿ ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ