Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Landslide ನಿರಂತರ ಮಳೆಗೆ ಭೀಕರ ಭೂಕುಸಿತ, ಇಬ್ಬರು ಕಾರ್ಮಿಕರು ಸಾ*ವು, ಹಲವರು ನಾಪತ್ತೆ
ಪ್ರಮುಖCrimeದೇಶ

Landslide ನಿರಂತರ ಮಳೆಗೆ ಭೀಕರ ಭೂಕುಸಿತ, ಇಬ್ಬರು ಕಾರ್ಮಿಕರು ಸಾ*ವು, ಹಲವರು ನಾಪತ್ತೆ

Share
1 Min Read
SHARE

newsics.com | ನ್ಯೂಸಿಕ್ಸ್

ಇಟಾನಗರ್‌: ಅರುಣಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಇಬ್ಬರು ವಲಸೆ ಕಾರ್ಮಿಕರು ಬಲಿಯಾಗಿದ್ದಾರೆ. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಮಣ್ಣು ಕುಸಿದು ಬಿದ್ದ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಇನ್ನು ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ಎದುರಾಗಿದೆ.

ದುರಂತಕ್ಕೆ ಈಡಾದವರೆಲ್ಲರೂ ಸ್ಥಳೀಯ ನಿರ್ಮಾಣ ಕಾಮಗಾರಿಯೊಂದರಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಅರುಣಾಚಲ ಪ್ರದೇಶ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದಾರೆ. ಅವಶೇಷಗಳ ಅಡಿಯಿಂದ ಈಗಾಗಲೇ ಇಬ್ಬರ ಶವಗಳನ್ನು ಹೊರತೆಗೆಯಲಾಗಿದ್ದು, ಮಣ್ಣಿನ ಅಡಿ ಸಿಲುಕಿರುವ ಉಳಿದವರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲಿನ ನಿವಾಸಿಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

110 ಮೀಟರ್ ರಸ್ತೆ ಕುಸಿತ: ಹಳ್ಳಿಗಳ ಸಂಪರ್ಕ ಕಡಿತ

ಮತ್ತೊಂದೆಡೆ, ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಖೋನ್ಸಾ-ಲಾಜು ರಸ್ತೆಯ ಸುಮಾರು 110 ಮೀಟರ್ ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದರಿಂದಾಗಿ ತಿರಪ್ ಜಿಲ್ಲೆಯ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದು, ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ.

ರಾಜ್ಯದ ಹಲವು ಭಾಗಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದು, ಗುಡುಗು ಸಹಿತ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.

Crime Case ಚಾಕ್ಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಯುವತಿ ಮೇಲೆ ನಿರಂತರ ಅತ್ಯಾಚಾ*ರ

TAGGED:#landslide #arunachala pradesh #laborers #two dead
Share This Article
Facebook Twitter Copy Link Print
Previous Article Crime Case ಚಾಕ್ಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಯುವತಿ ಮೇಲೆ ನಿರಂತರ ಅತ್ಯಾಚಾ*ರ
Next Article Rajesh Sharma ಶೂಟಿಂಗ್ ವೇಳೆ ನಟನಿಗೆ ಕಚ್ಚಿದ ವಿಷಕಾರಿ ಕೀಟ; ಐಸಿಯುನಲ್ಲಿ ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ

Popular Posts

Ceremonial Code ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಗಾಯನಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಕಡ್ಡಾಯ ಪಾಲನೆಗೆ ಸೂಚನೆ

2 Min Read

Accident ಕಾರು‌ ಟ್ಯಾಂಕರ್ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು

1 Min Read

Air Quality ಇತಿಹಾಸದಲ್ಲೇ ಅಪರೂಪದ ದಾಖಲೆ: 3 ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿದ ವಾಯುಮಾಲಿನ್ಯ

1 Min Read

Tragedy ಮೀಟರ್ ಬಡ್ಡಿ ದಂಧೆಗೆ ಬಲಿಯಾದ ಆಟೋ ಚಾಲಕ

1 Min Read

You Might Also Like

ಪ್ರಮುಖದೇಶ

LPG Gas ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರೇ ಗಮನಿಸಿ: ಜಾರಿಗೆ ಬಂತು ಹೊಸ ನಿಯಮ; ಈ ಕೆಲಸ ಮಾಡದಿದ್ರೆ ಸಿಗಲ್ಲ ಎಲ್‌ಪಿಜಿ

2 Min Read
ಪ್ರಮುಖರಿಲೇಷನ್‌ಶಿಪ್

Smartphone Privacy ಹೋಟೆಲ್ ರೂಮ್‌ಗೆ ಹೋಗುವ ಮುನ್ನ ಮೊಬೈಲ್‌ನಲ್ಲಿ ಈ 4 ಸೆಟ್ಟಿಂಗ್ಸ್ ಆಫ್ ಮಾಡಿ; ಇಲ್ಲದಿದ್ದರೆ ಲೀಕ್ ಆಗಬಹುದು ನಿಮ್ಮ ಪರ್ಸನಲ್ ಲೈಫ್

2 Min Read
ಪ್ರಮುಖಕರ್ನಾಟಕ

Gruha Jyothi ಗೃಹ ಜ್ಯೋತಿ ಆ್ಯಪ್ ಓಪನ್ ಆಗ್ತಿಲ್ಲವೇ? ಚಿಂತೆ ಬೇಡ, ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಪರ್ಯಾಯ ದಾರಿ

2 Min Read
ಪ್ರಮುಖದೇಶ

Gold Price 10 ಗ್ರಾಂ ಚಿನ್ನದ ಉಂಗುರಕ್ಕೆ ಮೇಕಿಂಗ್ ಚಾರ್ಜ್ ಸೇರಿ ಬಿಲ್ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?