newsics.com | ನ್ಯೂಸಿಕ್ಸ್
ಬೆಂಗಳೂರು: ಇಂದಿನ ಡಿಜಿಟಲ್ ಕಾಲದಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಬದುಕು ಅಸಾಧ್ಯ ಎನ್ನುವಂತಾಗಿದೆ. ಆದರೆ, ಇದೇ ಫೋನ್ ನಮ್ಮ ಖಾಸಗಿ ಜೀವನಕ್ಕೆ ಕಂಟಕವಾಗುವ ಅಪಾಯವೂ ಅಷ್ಟೇ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ದಂಪತಿಗಳು ಅಥವಾ ಸಂಗಾತಿಗಳು ಒಟ್ಟಿಗೆ ಸಮಯ ಕಳೆಯಲು ಹೊರಗಡೆ ಹೋಟೆಲ್ ರೂಮ್‌ಗಳನ್ನು ಬುಕ್ ಮಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಹೋಟೆಲ್‌ನಲ್ಲಿರುವ ಹಿಡನ್ ಕ್ಯಾಮೆರಾಗಳ ಬಗ್ಗೆ ಮಾತ್ರವಲ್ಲ, ನಿಮ್ಮ ಕೈಯಲ್ಲಿರುವ ಮೊಬೈಲ್ ಬಗ್ಗೆಯೂ ಎಚ್ಚರದಿಂದ ಇರಬೇಕು. ಸ್ಮಾರ್ಟ್‌ಫೋನ್‌ನ ಕೆಲವು ಆನ್ ಲೈನ್ ಫೀಚರ್‌ಗಳಿಂದಾಗಿ ನಿಮ್ಮ ಅತ್ಯಂತ ಆಪ್ತ ಕ್ಷಣಗಳು ಬೇರೆಯವರ ಕೈಸೇರಬಾರದು ಎಂದರೆ ತಕ್ಷಣವೇ ಈ ಕೆಳಗಿನ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸಿಕೊಳ್ಳಿ.
1. ವಾಯ್ಸ್ ಅಸಿಸ್ಟೆಂಟ್ ತಕ್ಷಣವೇ ಬಂದ್ ಮಾಡಿ
ಆಂಡ್ರಾಯ್ಡ್ ಫೋನ್‌ಗಳಲ್ಲಿರುವ ‘ಗೂಗಲ್ ಅಸಿಸ್ಟೆಂಟ್’ (Google Assistant) ಮತ್ತು ಐಫೋನ್‌ಗಳಲ್ಲಿನ ‘ಸಿರಿ’ (Siri) ಸಾಫ್ಟ್‌ವೇರ್‌ಗಳು ನಿಮ್ಮ ಧ್ವನಿಯ ಕಮಾಂಡ್‌ಗಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ ಸದಾ ಮೈಕ್ರೋಫೋನ್ ಆನ್ ಇಟ್ಟುಕೊಂಡಿರುತ್ತವೆ. ಇದರಿಂದಾಗಿ ರೂಮ್ ಒಳಗಿನ ನಿಮ್ಮ ಖಾಸಗಿ ಮಾತುಕತೆಗಳು ರೆಕಾರ್ಡ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಾರ್ಟ್‌ನರ್ ಜೊತೆ ಇರುವಾಗ ವಾಯ್ಸ್ ಅಸಿಸ್ಟೆಂಟ್ ಸೇವೆಯನ್ನು ತಾತ್ಕಾಲಿಕವಾಗಿ ಆಫ್ ಮಾಡುವುದು ಸೂಕ್ತ.
2. ಅನಗತ್ಯ ಆ್ಯಪ್‌ಗಳ ಕ್ಯಾಮೆರಾ, ಮೈಕ್ರೋಫೋನ್ ಪರ್ಮಿಷನ್ ಬ್ಲಾಕ್ ಮಾಡಿ
ನಾವು ಬಳಸುವ ಫೋಟೋ ಎಡಿಟಿಂಗ್ ಅಥವಾ ಗೇಮಿಂಗ್ ಆ್ಯಪ್‌ಗಳು ಇನ್‌ಸ್ಟಾಲ್ ಮಾಡುವಾಗ ಕ್ಯಾಮೆರಾ ಮತ್ತು ಆಡಿಯೋ ಬಳಸಲು ಅನುಮತಿ ಕೇಳುತ್ತವೆ. ಕೆಲವು ಮಾಲಿಶಿಯಸ್ ಆ್ಯಪ್‌ಗಳು ನಿಮ್ಮ ಗಮನಕ್ಕೆ ಬಾರದೆ ಬ್ಯಾಕ್‌ಗ್ರೌಂಡ್‌ನಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್ ಆನ್ ಮಾಡುವ ಅಪಾಯವಿರುತ್ತದೆ. ತಕ್ಷಣವೇ ಫೋನ್‌ನ ‘ಪರ್ಮಿಷನ್ ಮ್ಯಾನೇಜರ್’ (Permission Manager) ಗೆ ಹೋಗಿ ಇವುಗಳನ್ನು ಡಿಸೇಬಲ್ ಮಾಡಿ.
3. ಸದಾ ಲೊಕೇಶನ್ ಆನ್ ಇಡಬೇಡಿ
ನೀವು ಎಲ್ಲಿದ್ದೀರಿ ಎಂಬುದನ್ನು ಹಲವು ಆ್ಯಪ್‌ಗಳು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿರುತ್ತವೆ. ನಿಮ್ಮ ಖಾಸಗಿ ಪ್ರವಾಸದ ಮಾಹಿತಿ ರಹಸ್ಯವಾಗಿರಲು, ಲೊಕೇಶನ್ ಸೆಟ್ಟಿಂಗ್ಸ್‌ನಲ್ಲಿ ಸದಾ ಆನ್ ಇಡುವ ಬದಲು “While using the app” (ಆ್ಯಪ್ ಬಳಸುವಾಗ ಮಾತ್ರ) ಅಥವಾ “Ask every time” (ಪ್ರತಿ ಬಾರಿ ಕೇಳು) ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ.
ಉಚಿತ ವೈ-ಫೈ (Free Wi-Fi) ಆಸೆಗೆ ಬೀಳಬೇಡಿ: ಹೋಟೆಲ್‌ಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಓಪನ್ ವೈ-ಫೈ ನೆಟ್‌ವರ್ಕ್‌ಗಳಿಗೆ ನಿಮ್ಮ ಫೋನ್ ಕನೆಕ್ಟ್ ಮಾಡಬೇಡಿ. ಹ್ಯಾಕರ್‌ಗಳು ಇಂತಹ ಮುಕ್ತ ನೆಟ್‌ವರ್ಕ್‌ಗಳ ಮೂಲಕ ನಿಮ್ಮ ಫೋನ್ ಒಳಗಡೆ ನುಗ್ಗಿ ವೈಯಕ್ತಿಕ ಫೋಟೋಗಳು ಅಥವಾ ಬ್ಯಾಂಕಿಂಗ್ ಡೇಟಾವನ್ನು ಕದಿಯುವ ಸೈಬರ್ ಅಪಾಯ ಹೆಚ್ಚಿರುತ್ತದೆ. ಸದಾ ನಿಮ್ಮ ಸ್ವಂತ ಮೊಬೈಲ್ ಡೇಟಾ ಬಳಸುವುದೇ ಸುರಕ್ಷಿತ.
ನಿಮ್ಮ ಆಪ್ತ ಕ್ಷಣಗಳು ಎಂದಿಗೂ ಸಾರ್ವಜನಿಕವಾಗದಂತೆ ತಡೆಯಲು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಈ ಸಣ್ಣ ತಾಂತ್ರಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಂತ ಕಡ್ಡಾಯವಾಗಿದೆ.
Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು