newsics.com | ನ್ಯೂಸಿಕ್ಸ್
ಬೆಂಗಳೂರು: ಬಂಗಾರ ಖರೀದಿಸುವವರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ದೇಶದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 15,000 ರೂಪಾಯಿಗಿಂತಲೂ ಹೆಚ್ಚು ಕಮ್ಮಿಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲೂ 12 ಸಾವಿರ ರೂಪಾಯಿಗೂ ಹೆಚ್ಚು ಕುಸಿತ ಕಂಡುಬಂದಿದೆ. ಆದರೆ, ಬೆಳ್ಳಿ ದರ ಮಾತ್ರ ನಿನ್ನೆಯಷ್ಟೇ ಇದ್ದು, ಯಾವುದೇ ಬದಲಾವಣೆ ಆಗಿಲ್ಲ.
ಇಂದಿನ ಚಿನ್ನದ ಬೆಲೆ (10 ಗ್ರಾಂ)
- 22 ಕ್ಯಾರಟ್ ಚಿನ್ನ: 1,33,150 ರೂಪಾಯಿ
- 24 ಕ್ಯಾರಟ್ ಚಿನ್ನ: 1,45,260 ರೂಪಾಯಿ
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ (10 ಗ್ರಾಂ) ಚಿನ್ನದ ದರ
- ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್: 1,33,150 ರೂಪಾಯಿ
- ಚೆನ್ನೈ: 1,34,000 ರೂಪಾಯಿ
ಇಂದಿನ ಬೆಳ್ಳಿ ದರ
- 10 ಗ್ರಾಂ ಬೆಳ್ಳಿ: 2,450 ರೂಪಾಯಿ
- 100 ಗ್ರಾಂ ಬೆಳ್ಳಿ: 24,500 ರೂಪಾಯಿ
- 1 ಕೆಜಿ ಬೆಳ್ಳಿ: 2,45,000 ರೂಪಾಯಿ ಇದೆ.
Shiva Rajkumar 64ನೇ ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಹ್ಯಾಟ್ರಿಕ್ ಹೀರೋ