Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Landslide ವಯನಾಡ್ ಭಾರಿ ಮಳೆಗೆ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ
ಪ್ರಮುಖದೇಶ

Landslide ವಯನಾಡ್ ಭಾರಿ ಮಳೆಗೆ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

Share
1 Min Read
SHARE

newsics.com| ನ್ಯೂಸಿಕ್ಸ್

ಕೇರಳದ ವಯನಾಡಿನ ಕಲ್ಲಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಸೇತುವೆ, ಬಸ್ ನಿಲ್ದಾಣ ಸೇರಿದಂತೆ ಹಲವು ಕಟ್ಟಡಗಳು ನೆಲಸಮವಾಗಿವೆ. ಸುರಂಗ ಮಾರ್ಗದ ಕಾಮಗಾರಿ ಸ್ಥಳದಲ್ಲಿ ನಡೆದ ಈ ದುರಂತದಲ್ಲಿ ಹಲವು ಕಾರ್ಮಿಕರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಮೀ ನಷ್ಟು ಭಾರಿ ಮಳೆಯಾಗಿದೆ. ಮಳೆಯ ತೀವ್ರತೆಗೆ ಮೀನಾಕ್ಷಿ ಸೇತುವೆಯ ಬಳಿ ಇರುವ ಗುಡ್ಡ ಕುಸಿದು ಬಿದ್ದಿದೆ. ಭಾರಿ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಸೋಮವಾರದಿಂದಲೇ ಸುರಂಗ ಯೋಜನೆಯ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತ ಸಂಭವಿಸಿದ ತಕ್ಷಣ, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವ ಮೊದಲೇ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರು ಸುರಂಗ ಯೋಜನೆಯ ಕಾರ್ಮಿಕರಾಗಿದ್ದು, ಅವರು ಅಲ್ಲೇ ಇದ್ದ ವಸತಿಗೃಹದಲ್ಲಿ ತಂಗಿದ್ದರು ಎನ್ನಲಾಗಿದೆ. ಇನ್ನೂ ಎಷ್ಟು ಜನ ಕಾರ್ಮಿಕರು ಅಥವಾ ಸ್ಥಳೀಯರು ಸಿಲುಕಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಗುಡ್ಡ ಕುಸಿದ ರಭಸಕ್ಕೆ ಆ ಪ್ರದೇಶದಲ್ಲಿದ್ದ ಕೆಲವು ವಸತಿ ಮನೆಗಳು, ಹೋಂಸ್ಟೇಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಸುರಂಗ ಯೋಜನೆಯ ಕೆಲಸಕ್ಕಾಗಿ ಬಳಸಲಾಗುತ್ತಿದ್ದ ಹಲವು ಜೆಸಿಬಿ, ಟ್ರಕ್ ಹಾಗೂ ಇತರೆ ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿವೆ. ಹಾನಿಯ ಸಂಪೂರ್ಣ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ.

ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಗ್ನಿಶಾಮಕ ದಳದ ಜೊತೆಗೆ ಕೇರಳ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಕೇರಳ ಸಚಿವ ಟಿ. ಸಿದ್ದಿಕ್ ಮತ್ತು ವಯನಾಡ್ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Gold Price ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: ಸತತ 4ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ

Share This Article
Facebook Twitter Copy Link Print
Previous Article Gold Price ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: ಸತತ 4ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ
Next Article Telangana ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸಿದ ಪತಿ

Popular Posts

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

Ballari ಡಬಲ್ ಮರ್ಡರ್: ಪತ್ನಿ ಮಾವನನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ

1 Min Read

Lorry Strike ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ

1 Min Read

Voter List Revision SIR ಪ್ರಕ್ರಿಯೆ​ ವೇಳೆ ಕರ್ನಾಟಕದಲ್ಲಿ ಭಾರಿ ಲೋಪ ಆರೋಪ : ಮೈತ್ರಿ ನಾಯಕರಿಂದ ದೂರು

2 Min Read

You Might Also Like

ಕರ್ನಾಟಕಪ್ರಮುಖವೈರಲ್

Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Water bottle ನೀತಾ ಅಂಬಾನಿಯ ಈ ವಾಟರ್ ಬಾಟಲ್ ಬೆಲೆ ಎಷ್ಟು?

1 Min Read
Sportsದೇಶಪ್ರಮುಖ

Sports news ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಶಪೂರ್ ಜದ್ರಾನ್ ನಿಧನ

1 Min Read
filmಕರ್ನಾಟಕಪ್ರಮುಖ

Actress Radha ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳಿತೀಯಾ… ನಟಿ ರಾಧಾ ಭಗವತಿಗೆ ಹೀಗೊಂದು ಸಲಹೆ ಕೊಟ್ಟ ಭೂಪ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?