newsics.com| ನ್ಯೂಸಿಕ್ಸ್
ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಶಪೂರ್ ಜದ್ರಾನ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾದರು. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಶಪೂರ್ ಜದ್ರಾನ್ ಅವರು ದೀರ್ಘಕಾಲದವರೆಗೆ ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (Hemophagocytic lymphohistiocytosis) ಎಂಬ ಗಂಭೀರ ಕಾಯಿಲೆಗೆ ಒಳಗಾಗಿದ್ದರು. ಕಾಯಿಲೆ ತೀವ್ರವಾಗಿದ್ದರಿಂದ ಶಪೂರ್ ಜದ್ರಾನ್ ಕೊನೆಯುಸಿರೆಳೆದಿದ್ದಾರೆ. ಅವರು ಸಾಯುವ ಮೊದಲು ಕೆಲವು ತಿಂಗಳುಗಳ ಕಾಲ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಫ್ಘಾನಿಸ್ತಾನದ ಕ್ರಿಕೆಟಿಗ ಶಪೂರ್ ಜದ್ರಾನ್ ಅವರು 2009 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಜದ್ರಾನ್ 44 ಏಕದಿನ ಮತ್ತು 36 ಟಿ20 ಪಂದ್ಯಗಳು ಸೇರಿದಂತೆ 80 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಜದ್ರಾನ್ 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಪ್ರದರ್ಶನ 24 ರನ್‌ಗೆ 4 ವಿಕೆಟ್ ಕಬಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅಮೋಘವಾದ ಪ್ರದರ್ಶನ ನೀಡಿರುವ ಶಪೂರ್ ಜದ್ರಾನ್ ಅವರು, 37 ವಿಕೆಟ್‌ಗಳನ್ನು ಕಬಳಿಸಿದ್ದು 40 ರನ್‌ಗೆ 3 ವಿಕೆಟ್ ಪಡೆದಿದ್ದರು. ಜದ್ರಾನ್ ಅವರು ಕಳೆದ ವರ್ಷ ಅಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.
ಶಪೂರ್ ತಮ್ಮ ವೃತ್ತಿಜೀವನದುದ್ದಕ್ಕೂ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಗೌರವ, ಧೈರ್ಯ ಮತ್ತು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದರು. ಅವರ ಕೊಡುಗೆಗಳು ಮತ್ತು ಸಾಧನೆಗಳು ಯಾವಾಗಲೂ ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದ ಭಾಗವಾಗಿರುತ್ತವೆ. ರಾಷ್ಟ್ರೀಯ ತಂಡಕ್ಕಾಗಿ ಅವರು ಮಾಡಿದ ಶ್ರಮವನ್ನು ಮರೆಯಲಾಗುವುದಿಲ್ಲ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
Mysore dasara ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ: ಆನೆಗಳ ಹೃದಯದ ಆರೋಗ್ಯ ಪರಿಶೀಲನೆಗಾಗಿ ನಡೆದ ಇಸಿಜಿ ಪರೀಕ್ಷೆ