Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Girish Bharadwaj ‘ಬ್ರಿಡ್ಜ್ ಮ್ಯಾನ್’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ
ಪ್ರಮುಖಕರ್ನಾಟಕ

Girish Bharadwaj ‘ಬ್ರಿಡ್ಜ್ ಮ್ಯಾನ್’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಸುಳ್ಯದ ಅರಂಬೂರಿನಿಂದ ದೇಶದ ಮೂಲೆ ಮೂಲೆಗೆ ಹಬ್ಬಿದ ಖ್ಯಾತಿಹಳ್ಳಿಗಳ ಪಾಲಿಗೆ ಸಂಜೀವಿನಿಯಾದ 120 ಸೇತುವೆಗಳು:ರಾಷ್ಟ್ರಮಟ್ಟದ ಮನ್ನಣೆ

ಮಂಗಳೂರು: ನೂರಾರು ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಜನರಿಗೆ ದಾರಿದೀಪವಾಗಿದ್ದ, ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಜನಪ್ರಿಯರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಹಲೋಕ ತ್ಯಜಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಒಳಗೊಂಡ ಅಪಾರ ಬಂಧು-ಬಳಗವನ್ನು ತೊರೆದಿದ್ದಾರೆ.

ಸುಳ್ಯದ ಅರಂಬೂರಿನಿಂದ ದೇಶದ ಮೂಲೆ ಮೂಲೆಗೆ ಹಬ್ಬಿದ ಖ್ಯಾತಿ

1950 ಮೇ 2 ರಂದು ಸುಳ್ಯದಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರು, 1973 ರಲ್ಲಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ ಯಾಂತ್ರಿಕ ಇಂಜಿನಿಯರಿಂಗ್ (ಮೆಕ್ಯಾನಿಕಲ್) ಪದವಿ ಮುಗಿಸಿದ್ದರು. ಗ್ರಾಮೀಣ ಭಾಗದ ನಾಗರಿಕರ ಸಂಕಷ್ಟಗಳಿಗೆ ತಾಂತ್ರಿಕತೆಯ ಮೂಲಕ ಪರಿಹಾರ ಹುಡುಕ ಹೊರಟ ಇವರು, 1989ರಲ್ಲಿ ತಮ್ಮದೇ ಆದ ಸುಳ್ಯದ ಅರಂಬೂರು ಗ್ರಾಮದ ಪಯಸ್ವಿನಿ ನದಿಗೆ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ವೆಚ್ಚದ ತೂಗು ಸೇತುವೆ ನಿರ್ಮಿಸಿಕೊಟ್ಟರು. ಅಲ್ಲಿಂದ ಆರಂಭವಾದ ಇವರ ಯಶೋಗಾಥೆ ಭಾರತದ ಇತಿಹಾಸದ ಪುಟ ಸೇರಿತು.

ಹಳ್ಳಿಗಳ ಪಾಲಿಗೆ ಸಂಜೀವಿನಿಯಾದ 120 ಸೇತುವೆಗಳು:

ದಟ್ಟ ಅರಣ್ಯಗಳು, ಹರಿಯುವ ನದಿಗಳನ್ನು ದಾಟಲು ಸೂಕ್ತ ವ್ಯವಸ್ಥೆಯಿಲ್ಲದೆ ಕೇವಲ ದೋಣಿಗಳನ್ನೇ ನಂಬಿ ಬದುಕುತ್ತಿದ್ದ ನೂರಾರು ಹಳ್ಳಿಗಳಿಗೆ ಇವರ ತೂಗು ಸೇತುವೆಗಳು ಹೊಸ ಆಶಾಕಿರಣ ಮೂಡಿಸಿದವು. ಕರ್ನಾಟಕ ಮಾತ್ರವಲ್ಲದೆ ಕೇರಳ, ತೆಲಂಗಾಣ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಗ್ರಾಮಾಂತರ ಪ್ರದೇಶಗಳಲ್ಲಿ ಇವರು ಬರೋಬ್ಬರಿ 120 ಕ್ಕೂ ಹೆಚ್ಚು ಪರಿಸರ ಪೂರಕ ತೂಗು ಸೇತುವೆಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದರು.

ರಾಷ್ಟ್ರಮಟ್ಟದ ಮನ್ನಣೆ

ಗ್ರಾಮೀಣ ಭಾರತಕ್ಕೆ ಇವರು ನೀಡಿದ ಈ ಅನನ್ಯ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರವು 2017 ರಲ್ಲಿ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ನೀಡಿ ಸತ್ಕರಿಸಿತ್ತು. ಇದರ ಜೊತೆಗೆ ಟಿವಿ9 ಸಂಸ್ಥೆಯು ‘ನವನಕ್ಷತ್ರ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಾಂತ್ರಿಕ ಲೋಕದ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅವರು ನಿರ್ಮಿಸಿದ ಸೇತುವೆಗಳ ಫಲಾನುಭವಿಗಳಾದ ಸಹಸ್ರಾರು ಗ್ರಾಮೀಣ ಜನತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳನ್ನು ನಗರದೊಂದಿಗೆ ಬೆಸೆದಿದ್ದ ಅಪರೂಪದ ತಾಂತ್ರಿಕ ದ್ರಷ್ಟಾರನೊಬ್ಬನನ್ನು ದೇಶ ಇಂದು ಕಳೆದುಕೊಂಡಿದೆ.

Crime ರ‍್ಯಾಲಿಯಲ್ಲಿ ಭೀಕರ ಬಾಂಬ್ ಸ್ಫೋಟ: ಮೂವರಿಗೆ ಗಂಭೀರ ಗಾಯ- ವೀಡಿಯೊ ನೋಡಿ https://www.newsics.com/2026/07/07/bangladesh-dhaka-rally-bomb-blast-factory-fire/

TAGGED:#girish bharadwaj #Sullia #karnataka #bridge man #pasess away
Share This Article
Facebook Twitter Copy Link Print
Previous Article Crime ರ‍್ಯಾಲಿಯಲ್ಲಿ ಭೀಕರ ಬಾಂಬ್ ಸ್ಫೋಟ: ಮೂವರಿಗೆ ಗಂಭೀರ ಗಾಯ- ವೀಡಿಯೊ ನೋಡಿ
Next Article Shiva Rajkumar 64ನೇ ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಹ್ಯಾಟ್ರಿಕ್ ಹೀರೋ

Popular Posts

Tiger family captured ಮೈಸೂರಲ್ಲಿ ಐದು ಮರಿಗಳ ಜತೆ ರಾಣಿ ಹುಲಿ ಸೆರೆ

1 Min Read

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

Ballari ಡಬಲ್ ಮರ್ಡರ್: ಪತ್ನಿ ಮಾವನನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ

1 Min Read

Lorry Strike ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ

1 Min Read

You Might Also Like

ಕರ್ನಾಟಕದೇಶಪ್ರಮುಖ

Voter List Revision SIR ಪ್ರಕ್ರಿಯೆ​ ವೇಳೆ ಕರ್ನಾಟಕದಲ್ಲಿ ಭಾರಿ ಲೋಪ ಆರೋಪ : ಮೈತ್ರಿ ನಾಯಕರಿಂದ ದೂರು

2 Min Read
ಕರ್ನಾಟಕಪ್ರಮುಖವೈರಲ್

Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Water bottle ನೀತಾ ಅಂಬಾನಿಯ ಈ ವಾಟರ್ ಬಾಟಲ್ ಬೆಲೆ ಎಷ್ಟು?

1 Min Read
filmಕರ್ನಾಟಕಪ್ರಮುಖ

Actress Radha ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳಿತೀಯಾ… ನಟಿ ರಾಧಾ ಭಗವತಿಗೆ ಹೀಗೊಂದು ಸಲಹೆ ಕೊಟ್ಟ ಭೂಪ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?