Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

Share
3 Min Read
SHARE

newsics.com | ನ್ಯೂಸಿಕ್ಸ್

ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳಿಗೆ ಅಷ್ಟು ಒತ್ತಡ ಕೊಡುತ್ತವೋ ಅಥವಾ ಉದ್ಯೋಗಿಗಳಿಗೆ ಅದನ್ನು ನಿಭಾಯಿಸುವ ಜಾಣ್ಮೆ ಇರುವುದಿಲ್ಲವೋ ಗೊತ್ತಿಲ್ಲ. ಈ ಸ್ಟ್ರೆಸ್‌ನಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಒಂದೆರಡಲ್ಲ.

ಸ್ಟ್ರೆಸ್ ಮ್ಯಾನೇಜ್ ಮಾಡಲು ಫೇಲ್ ಆಗುವ ಅನೇಕರು ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದರೂ ಕೆಲಸ ಬಿಟ್ಟು ತಮ್ಮಿಷ್ಟದಂತೆ ಬದುಕಲು ಯತ್ನಿಸುತ್ತಾರೆ. ಅದರಿಂದ ದುಡ್ಡಿಲ್ಲವೆಂದಾದರೂ ಮಾನಸಿಕ ನೆಮ್ಮದಿ ಸಿಕ್ಕು, ಆರೋಗ್ಯವಾಗಿದ್ದೇವೆ ಎನ್ನುತ್ತಾರೆ. ಆದರೆ, ಭಾರತ ಸೇರಿ ಏಷ್ಯಾದ ಜನರು ಅದೆಷ್ಟೇ ಕಷ್ಟವಾದರೂ ಕೈ ತುಂಬಾ ವೇತನ ತರೋ ಕೆಲಸ ಬಿಡೋದು ಅಪರೂಪ. ಈಗಿನ ಜೆನ್ ಜೀ ತಮ್ಮಿಚ್ಛೆಯಂತೆ ಬದುಕೋದು ಹೆಚ್ಚುತ್ತಿದೆ. ಆದರೆ, ವಿದೇಶದಲ್ಲಿ ಕೆಲವು ರಾಷ್ಟ್ರಗಳಲ್ಲಿ ಆರೋಗ್ಯಕ್ಕಾಗಿ ಕೆಲಸ ಬಿಡೋದು ಸಾಮಾನ್ಯ. ಅಂಥದ್ದೊಂದು ಸುದ್ದಿಯನ್ನು ಮಹಿಳೆಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಆರಂಕಿ ವೇತನ ಬರೋ ಕಾರ್ಪೋರೇಟ್ ಉದ್ಯೋಗ ಬಿಟ್ಟು ರೆಸ್ಟೋರೆಂಟ್‌ವೊಂದರಲ್ಲಿ ವೇಟ್ರಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಜೀವನದ ಈ ನಿರ್ಧಾರದಿಂದ ಏನಾಯಿತೋ, ಏನೋ ಗೊತ್ತಿಲ್ಲ. ನನ್ನ ಆರೋಗ್ಯವಂತೂ ಸುಧಾರಿಸಿದೆ. ಬಹಳ ದಿನಗಳಿಂದ ಅನುಭವಿಸುತ್ತಿದ್ದ ಅನಾರೋಗ್ಯಕ್ಕೆ ತಿಲಾಂಜಲಿ ಇಟ್ಟು, ನೆಮ್ಮದಿಯಾಗಿದ್ದೇನೆ ಎಂದು ಬರೆದು ಕೊಂಡಿದ್ದಾಳೆ. ಈ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಲ್‌ಚಲ್ ಸೃಷ್ಟಿಸಿದ್ದು, ವೃತ್ತಿ ಜೀವನದ ಬದಲಾವಣೆ ಹಾಗೂ ಬದುಕಿನ ಬಗ್ಗೆ ಚರ್ಚೆಗಳಾಗುತ್ತಿವೆ. ಆರೋಗ್ಯಕ್ಕೆ ಆದ್ಯತೆ ಕೊಡಬೇಕೋ, ಕೈ ತುಂಬಾ ಸಂಬಳ ಕೊಟ್ಟು, ಲೈಫ್‌ಸ್ಟೈಲ್ ಅನ್ನು ಚಂದವಾಗಿಸಿ, ಸ್ಟ್ರೆಸ್ ಹೆಚ್ಚಿಸೋ ಉದ್ಯೋಗ ಮುಖ್ಯವೋ ಎಂಬ ಚರ್ಚೆಯಾಗುತ್ತಿದೆ. ಈ ಬಗ್ಗೆ ತರಹೇವಾರಿ ಕಮೆಂಟ್ಸ್ ಸಹ ಬಂದಿದೆ.

ಸರೆಮ್ ಕಾರ್ನಿಶ್ (Sarame Cornish) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು, ಕಳೆದ ಆರು ತಿಂಗಳಿಂದ ವಿಚಿತ್ರ ಯಾತನೆ ಅನುಭವಿಸುತ್ತಿದ್ದೆ. ಅದಕ್ಕೆ ಹಲವು ವೈದ್ಯರನ್ನು ಸಂಪರ್ಕಿಸಿದರೂ ಕಾಯಿಲೆಗೆ ಮೂಲ ಯಾವುದೆಂದು ಅರ್ಥವಾಗಲಿಲ್ಲ. ಆದರೆ, ಸ್ಟ್ರೆಸ್ ಅನ್ನೋದು ಅರಿವಿಗೆ ಬಂದ ಕೂಡಲೇ ನಾನು ಆರಂಕಿ ಸಂಬಳ ಪಡೆಯುವ ಕೆಲಸವನ್ನು ಬಿಡಲು ನಿರ್ಧರಿಸಿದೆ. ಸೇರಿಕೊಂಡಿದ್ದು ವೇಟರ್ ಆಗಿ. ಸಮಾಜದಲ್ಲಿ ಅಷ್ಟೇನೂ ಗೌರವವಿಲ್ಲದ, ಕೈ ತುಂಬಾ ಸಂಬಳ ಬಾರದೇ ಹೋದರೂ ಈ ಕೆಲಸ ಮನಸ್ಸಿಗೆ ಖುಷಿ ಕೊಡುತ್ತಿದೆ. ಸುದೀರ್ಘ ಕಾಲ ಅನುಭವಿಸಿದ ಮಾನಸಿಕ ಯಾತನೆಗೆ, ನೋವಿಗೆ ಫುಲ್ ಸ್ಟಾಪ್ ಇಟ್ಟಿದ್ದೇನೆ. ಈಗ ಆರೋಗ್ಯವಾಗಿದ್ದೇನೆ, ಎಂದಿದ್ದಾರೆ.

ಆರು ತಿಂಗಳ ಕಾಲ ಈ ಮಹಿಳೆ ಬದುಕಿದ್ದು ಕೇವಲ ಗಾಳಿ ಮತ್ತು ಹಸಿರು ತರಕಾರಿಗಳನ್ನು. ಅವಳನ್ನು ಕಾಡುತ್ತಿದ್ದ ರೋಗದ ಹೆಸರು ಐಬಿಎಸ್ (IBS – ಇರಿಟೇಬಲ್ ಬೋವಲ್ ಸಿಂಡ್ರೋಮ್). ಈ ಕಿರಿಕಿರಿ ಅನಿಸುವ ಸಮಸ್ಯೆ ಕಾರಣ ತಿಳಿದುಕೊಳ್ಳಲು ಕಾರ್ನಿಶ್ ಎಡತಾಕಿದ ಆಸ್ಪತ್ರೆಗಳಿಗೆ ಲೆಕ್ಕವೇ ಇಲ್ಲ. ಸಂಪರ್ಕಿಸಿದ ಎಲ್ಲ ಗ್ಯಾಸ್ಟ್ರೋಇಂಟೆಸ್ಟೈನಲ್ ತಜ್ಞರು ಹೇಳಿದ ಎಲ್ಲ ಚಿಕಿತ್ಸೆ, ಪರೀಕ್ಷೆಗಳನ್ನೂ ಮಾಡಿಸಿಕೊಂಡರೂ ಸಮಸ್ಯೆಯಿಂದ ಮುಕ್ತಳಾಗಲಿಲ್ಲ. ಕಾರಣವೇ ಗೊತ್ತಾಗಲಿಲ್ಲ. ಒಂದು ಫೈನ್ ಡೇ ಇದು ಕಾರ್ಪೋರೇಟ್ ಸ್ಟ್ರೆಸ್‌ನಿಂದ ಅನುಭವಿಸುತ್ತಿರುವ ಯಾತನೆ ಎಂಬುವುದು ಅರ್ಥವಾಯಿತು. ಹಿಂದೂ ಮುಂದು ಯೋಚಿಸದೇ ಕೆಲಸ ಬಿಟ್ಟೆ. ಕೆಲವೇ ದಿನಗಳಲ್ಲಿ ರೋಗ ಲಕ್ಷಣಗಳೂ ಮಾಯವಾದವು. ನಾನು ಹಿಂದೆಂದೂ ಇಷ್ಟು ಆರೋಗ್ಯವಾಗಿರಲಿಲ್ಲ. ಈ ಆರೋಗ್ಯ ನೀಡುತ್ತಿರುವ ಖುಷಿಗೆ ನಾನು ಜೀವಮಾನ ಪೂರ್ತಿ ನೆಲ ಒರೆಸಲು ರೆಡಿ, ಆರೋಗ್ಯವೇ ಭಾಗ್ಯವೆಂದು ನಗ್ ನಗ್ತಾ ನೆಲ ಓರೆಸುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದುರ ಜನರು ವಿಭಿನ್ನವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.

ಕಾರ್ನಿಶ್ ಪೋಸ್ಟಿಗೆ ಕಮೆಂಟ್ಸ್ ಏನಿವೆ?

ಆರೋಗ್ಯವೇ ಭಾಗ್ಯವೆಂದು ಕಾರ್ನಿಶ್ ಮಾಡಿರುವ ಪೋಸ್ಟಿಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾರ್ಪೋರೇಟ್ ಸಂಸ್ಕೃತಿ ನಮ್ಮನ್ನು ಪೂರ್ತಿ ಬದಲಾಯಿಸಿದೆ. ಆರೋಗ್ಯವಲ್ಲ, ದುಡ್ಡೇ ಮುಖ್ಯ ಎಂಬುದನ್ನು ಕಲಿಸಿದೆ. ಇದು ನಮಗೇ ಆಶ್ಚರ್ಯ ತರುತ್ತೆ ಎಂದರೆ, ಮತ್ತೊಬ್ಬರು, ನಿನಗೆ ಯಾವುದು ಇಷ್ಟವೋ ಅದನ್ನೇ ಮಾಡು! ನೀನು ಸಂತೋಷವಾಗಿ ಮತ್ತು ಆರೋಗ್ಯವಾಗಿ ಇರುವವರೆಗೆ ಯಾವುದೇ ಜಾಬ್ ಟೈಟಲ್ಸ್ (ಹುದ್ಗೆ)ಗೂ ಅರ್ಥವಿರುವುದಿಲ್ಲ, ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯ ನೀಡಿರುವ ಕಾರ್ನಿಶ್, ಈ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದಾಳೆ.

https://www.instagram.com/reel/DaKa85BTMHE/?igsh=MW9nbTdmMGQ5ZnYwYQ==

https://www.instagram.com/reel/DaKa85BTMHE/?igsh=MW9nbTdmMGQ5ZnYwYQ==

 

https://www.newsics.com/2026/07/02/youtuber-famous-youtuber-drives-car-under-the-influence-of-alcohol-case

Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!

TAGGED:#stress #corporatecompany #karnish #bigjob #quit #news #newsics
Share This Article
Facebook Twitter Copy Link Print
Previous Article Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ
Next Article Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read
filmದೇಶಪ್ರಮುಖ

Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?