Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!
filmದೇಶಪ್ರಮುಖ

Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!

Share
2 Min Read
SHARE

newsics.com| ನ್ಯೂಸಿಕ್ಸ್

ಇತ್ತೀಚೆಗೆ 35 ವರ್ಷದ ಹಾಲಿವುಡ್ ನಟಿ ಡೇವಿಗ್ ಎಲಿಜಬೆತ್ ಚೇಸ್ ಅವರ ನಿಧನದ ಸುದ್ದಿ ಮನರಂಜನಾ ಲೋಕವನ್ನು ಬೆಚ್ಚಿಬೀಳಿಸಿದೆ. ಬಾಲನಟಿಯಾಗಿ ಆರಂಭವಾದ ಅವರ ಸಿನಿ ಪಯಣ ಯಶಸ್ಸಿನಿಂದ ಕೂಡಿದ್ದರೂ, ಜೀವನದ ಕೊನೆಯ ದಿನಗಳಲ್ಲಿ ಅವರು ಎದುರಿಸಿದ ಆರೋಗ್ಯ ಸಮಸ್ಯೆಗಳು ಮತ್ತು ವೈಯಕ್ತಿಕ ಸಂಕಷ್ಟಗಳು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ನಟಿ ಡೇವಿಗ್ ಎಲಿಜಬೆತ್ ಚೇಸ್ ಬಾಲ್ಯದಲ್ಲೇ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಕೇವಲ ನಾಲ್ಕನೇ ವಯಸ್ಸಿನಲ್ಲೇ ಅಭಿನಯ ಆರಂಭಿಸಿದ ನಟಿ ತಮ್ಮ ಪ್ರತಿಭೆಯಿಂದ ಗಮನ ಸೆಳೆದರು. ಬಳಿಕ ನಟಿ ಏಳನೇ ವಯಸ್ಸಿನಲ್ಲಿ ಪ್ರಸಾರವಾದ ಸಬ್ರಿನಾ ದಿ ಟೀನೇಜ್ ವಿಚ್ ಟಿವಿ ಸರಣಿಯಲ್ಲಿ ಅಭಿನಯಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಬಾಲನಟಿಯಾಗಿ ಆರಂಭವಾದ ಅವರ ಪಯಣ, ಹಾಲಿವುಡ್‌ನಲ್ಲಿ ಭರವಸೆಯ ಕಲಾವಿದೆಯಾಗಿ ಬೆಳೆಯುವ ಅವಕಾಶವನ್ನು ನೀಡಿತು.

ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿದ್ದರೂ, ಡೇವಿಗ್ ಎಲಿಜಬೆತ್ ಚೇಸ್ 2016ರಲ್ಲಿ ಇದ್ದಕ್ಕಿದ್ದಂತೆ ನಟನೆಯಿಂದ ದೂರ ಸರಿದರು. ಅವರ ಈ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಬಳಿಕ ಅವರು ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದೇ ಅವಧಿಯಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳು ಆರಂಭವಾದವು ಎಂದು ವರದಿಗಳು ತಿಳಿಸಿವೆ.

ನಟನೆಯಿಂದ ದೂರವಾದ ನಂತರ ಡೇವಿಗ್ ಎಲಿಜಬೆತ್ ಚೇಸ್ ಅವರ ಜೀವನ ಹಲವು ಏರಿಳಿತಗಳನ್ನು ಕಂಡಿತು. ಮಾದಕವಸ್ತು ಪ್ರಕರಣಗಳು, ಕಾನೂನು ಸಂಬಂಧಿತ ತೊಂದರೆಗಳು ಮತ್ತು ವೈಯಕ್ತಿಕ ಸಮಸ್ಯೆಗಳು ಅವರನ್ನು ನಿರಂತರವಾಗಿ ಕಾಡಿದವು ಎನ್ನಲಾಗಿದೆ. ಜೀವನದ ಕೊನೆಯ ಹಂತದಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದರು. ತಮ್ಮ ಮನೆ ಸೇರಿದಂತೆ ಹಲವು ಆಸ್ತಿಗಳನ್ನು ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.

ವರದಿಗಳ ಪ್ರಕಾರ, 13ನೇ ವಯಸ್ಸಿನಿಂದಲೇ ಡೇವಿಗ್ ಎಲಿಜಬೆತ್ ಚೇಸ್ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿದ್ದರು. ದೀರ್ಘಕಾಲದ ಈ ವ್ಯಸನವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಬಹು ಮಾದಕ ದ್ರವ್ಯಗಳ ಮಿತಿಮೀರಿದ ಸೇವನೆಯಿಂದ ಆರೋಗ್ಯ ಹದಗೆಟ್ಟಿದೆ ಎಂಬ ಮಾಹಿತಿ ಹರಿದಾಡಿತ್ತು.

ಡೇವಿ ಎಲಿಜಬೆತ್ ಚೇಸ್ ಅವರ ಮರಣದ ನಂತರ ಅವರ ಮ್ಯಾನೇಜರ್ ನೀಡಿದ ಮಾಹಿತಿಯ ಪ್ರಕಾರ, ಅವರು ಮೊದಲು ಮೆನಿಂಜೈಟಿಸ್‌ಗೆ ಒಳಗಾಗಿದ್ದರು. ಬಳಿಕ ಅದು ಸೆಪ್ಸಿಸ್ ಆಗಿ ಬೆಳೆಯಿತು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಈ ಮಾಹಿತಿ ಸಾರ್ವಜನಿಕವಾಗಿ ವ್ಯಾಪಕವಾಗಿ ಹರಡಿತ್ತು.

ಆದರೆ ಅವರ ನಿಧನದ ಸುಮಾರು 15 ದಿನಗಳ ಬಳಿಕ ಲಾಸ್ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರ ಅಧಿಕೃತ ವರದಿ ಬಿಡುಗಡೆಯಾಯಿತು. ಆ ವರದಿಯಲ್ಲಿ ಅವರ ಸಾವಿಗೆ ಪ್ರಮುಖ ಕಾರಣ ಏಡ್ಸ್‌ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಮಾಹಿತಿ ಹೊರಬಿದ್ದ ನಂತರ ಹಾಲಿವುಡ್ ಸೇರಿದಂತೆ ಮನರಂಜನಾ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

 

Share This Article
Facebook Twitter Copy Link Print
Previous Article High court styas 52 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
Next Article Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

Popular Posts

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read

You Might Also Like

ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read
ದೇಶಪ್ರಮುಖರಿಲೇಷನ್‌ಶಿಪ್ವೈರಲ್

Insta Love Story: 3 ವರ್ಷ ಲವ್ ಮಾಡಿ ಮದುವೆ, ಫಸ್ಟ್​ ನೈಟ್ ಮುನ್ನ ಗೊತ್ತಾಯ್ತು ಅವಳಲ್ಲ ಅವನು’!

2 Min Read
ಕರ್ನಾಟಕದೇಶಪ್ರಮುಖ

Ayodhye scam ರಾಮಮಂದಿರದ ಹುಂಡಿ ಮೇಲೆ ಕ್ಯುಆರ್ ಕೋಡ್! ದಾನಿಗಳ ದುಡ್ಡಿಂದ ಪತ್ನಿ ಹೆಸರಲ್ಲಿ ಮನೆ ಕಟ್ಟಿದ್ನಾ ಆರೋಪಿ?

2 Min Read
ಕರ್ನಾಟಕದೇಶಪ್ರಮುಖ

8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ – ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?