Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Golden MP ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಬಂಗಾರ, ರಾಶಿ ರಾಶಿ ಹಣ! ಚಿನ್ನದ ಒಳ ಉಡುಪೂ ಸಿಕ್ತಾ?
ದೇಶಪ್ರಮುಖವಿದೇಶವೈರಲ್

Golden MP ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಬಂಗಾರ, ರಾಶಿ ರಾಶಿ ಹಣ! ಚಿನ್ನದ ಒಳ ಉಡುಪೂ ಸಿಕ್ತಾ?

Share
2 Min Read
SHARE

newsics.com | ನ್ಯೂಸಿಕ್ಸ್

ಇರಾಕ್​: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇರಾಕ್ ದೇಶದ ಭ್ರಷ್ಟಾಚಾರದ ಕುರಿತಾದ ಸುದ್ದಿಯೊಂದು ಭಾರೀ ಸಂಚಲನ ಸೃಷ್ಟಿಸಿದೆ.

ಅಲ್ಲಿನ ಮಹಿಳಾ ಸಂಸದರೊಬ್ಬರ ಮನೆಯಲ್ಲಿ ಬೆಟ್ಟದಷ್ಟು ನಗದು ಮತ್ತು ಬಂಗಾರ ಪತ್ತೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇನು?

ಕೆಲವು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳ ಪ್ರಕಾರ, ಇರಾಕ್ ಸಂಸದ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಬರೋಬ್ಬರಿ 57 ಮಿಲಿಯನ್ ಡಾಲರ್ ನಗದು ಮತ್ತು 27 ಕಿಲೋಗ್ರಾಂಗಳಷ್ಟು ಶುದ್ಧ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಜತೆಗೆ ಚಿನ್ನದ ಒಳ ಉಡುಪುಗಳ (Gold Plated Innerwear) ಫೋಟೋವನ್ನು ಲಗತ್ತಿಸಿ, ಇದು ಸಂಸದರ ಮನೆಯಲ್ಲಿ ಸಿಕ್ಕಿದ್ದು ಎಂದು ಜಗತ್ತಿನಾದ್ಯಂತ ಶೇರ್ ಮಾಡಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಸಿಕ್ಕಿದ್ದೇನು?

ಇರಾಕ್‌ನಲ್ಲಿ ಪ್ರಧಾನಿ ಅಲಿ ಅಲ್-ಜೈದಿ ಅವರ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಬೃಹತ್ ಬೇಟೆಯನ್ನಂತೂ ಶುರು ಮಾಡಿರುವುದು ನಿಜವಾಗಿದೆ. ಬಾಗ್ದಾದ್ ಸೇರಿದಂತೆ ಹಲವು ಕಡೆ ಮುಂಜಾನೆಯೇ ಭದ್ರತಾ ಪಡೆಗಳು ಮಿಂಚಿನ ದಾಳಿ ನಡೆಸಿವೆ. ಆದರೆ ವೈರಲ್ ಪೋಸ್ಟ್‌ನಲ್ಲಿರುವ ಹೆಸರು ಮತ್ತು ಚಿನ್ನದ ಒಳ ಉಡುಪಿನ ಕಥೆಯ ಹಿಂದೆ ಬೇರೆಯದೇ ಟ್ವಿಸ್ಟ್ ಇದೆ.

ಈ ಬೃಹತ್ ಆಪರೇಷನ್‌ನಲ್ಲಿ ಕನಿಷ್ಠ 7 ಸಂಸತ್ ಸದಸ್ಯರು ಮತ್ತು ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಬರೋಬ್ಬರಿ 47 ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿವೆ. ಇವರೆಲ್ಲರ ಮೇಲೆ ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ.

ವಶಪಡಿಸಿಕೊಂಡ ಆಸ್ತಿ ಎಷ್ಟು?

ಇರಾಕಿ ಹೈ ಜುಡಿಷಿಯಲ್ ಕೌನ್ಸಿಲ್ ನೀಡಿರುವ ಮಾಹಿತಿ ಪ್ರಕಾರ, ಮಾಜಿ ಉಪ ತೈಲ ಸಚಿವರಿಗೆ ಸಂಬಂಧಿಸಿದ ತನಿಖೆಯಲ್ಲಿ ಸುಮಾರು 10 ಮಿಲಿಯನ್ ಡಾಲರ್​​ ನಗದು, 3 ಬಿಲಿಯನ್ ಇರಾಕಿ ದಿನಾರ್‌ಗಳು, ಚಿನ್ನದ ಆಭರಣಗಳು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸುಮಾರು 40 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚಿನ್ನದ ಒಳ ಉಡುಪಿನ ಕಥೆ ಏನು?

ಸಂಸತ್ ಸದಸ್ಯೆ ಹಿಂದ್ ಅಲ್-ಅಬ್ಬಾಸಿ ಅವರ ಹೆಸರು ಇರಾಕಿ ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿದ್ದರೂ, ಅವರ ಮನೆಯಿಂದಲೇ 57 ಮಿಲಿಯನ್ ಡಾಲರ್​ ನಗದು ಮತ್ತು ಚಿನ್ನದ ಒಳ ಉಡುಪು ಸಿಕ್ಕಿದೆ ಎಂಬ ಗಾಸಿಪ್‌ಗೆ ಇರಾಕ್ ಸರ್ಕಾರವಾಗಲಿ ಅಥವಾ ಅಧಿಕೃತ ತನಿಖಾ ಸಂಸ್ಥೆಗಳಾಗಲಿ ಯಾವುದೇ ದೃಢೀಕರಣ ನೀಡಿಲ್ಲ.

ಪ್ರಧಾನಿ ಅಲಿ ಅಲ್-ಜೈದಿ ಖಡಕ್ ವಾರ್ನಿಂಗ್!

ಇರಾಕ್‌ನಲ್ಲಿ ಇತ್ತೀಚಿನ ವರ್ಷಗಳಲ್ಲೇ ನಡೆದ ಅತ್ಯಂತ ಮಹತ್ವದ ಭ್ರಷ್ಟಾಚಾರ ತನಿಖೆ ಇದಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಿ ಅಲಿ ಅಲ್-ಜೈದಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ತನಿಖೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಪ್ರಭಾವಿ ವ್ಯಕ್ತಿಗಳು ಕಂಬಿ ಎಣಿಸುವುದು ಗ್ಯಾರಂಟಿ ಎಂಬ ಮುನ್ಸೂಚನೆ ನೀಡಿದ್ದಾರೆ.

Old video ಡೇಟ್‌ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್‌ಲೈನ್‌ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

TAGGED:#iraq #womanMP #gold #cash #ride #news #newsicsA woman MP has a mountain of gold and heaps of money at home! Can she even wear gold underwear?
Share This Article
Facebook Twitter Copy Link Print
Previous Article Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್
Next Article Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?