newsics.com
ಆಹಾರ ತಿಂದ ನಂತರ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಸಹಜವಾಗಿ ಇರುತ್ತದೆ. ಇನ್ನು ಕೆಲವರು ಊಟ ಮಾಡಿದ ತಕ್ಷಣವೇ ಮಲಗುವ ಅಭ್ಯಾಸವನ್ನೂ ರೂಢಿಸಿಕೊಂಡಿರುತ್ತಾರೆ. ಹಾಗೇನಾದರೂ ಇಂಥ ಅಭ್ಯಾಸವೇನಾದರೂ ಇದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ.
ಏನಾದರೂ ತಿಂದ ಬಳಿಕ ತಣ್ಣೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ ಮತ್ತು ಆಹಾರವು ಜೀರ್ಣವಾಗದೆ ಉಳಿಯುತ್ತದೆ. ನೀರು ಕುಡಿಯಬೇಕಾದರೂ ಒಂದು ಅಥವಾ ಎರಡು ಗುಟುಕು ಮಾತ್ರ ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸಿದ ಅರ್ಧ ಗಂಟೆಯ ನಂತರ ಮಾತ್ರ ನೀರನ್ನು ಕುಡಿಯಬೇಕಂತೆ.
ತಿಂದ ತಕ್ಷಣ ಮಲಗುವುದರಿಂದಲೂ ಜೀರ್ಣಕ್ರಿಯೆಯ ವೇಗವನ್ನು ನಿಧಾನಗೊಳಿಸುತ್ತದೆ. ಆಹಾರ ಸೇವಿಸಿದ ನಂತರ ಎರಡು-ಮೂರು ಗುಟುಕು ನೀರು ಕುಡಿದು ಸ್ವಲ್ಪ ಹೊತ್ತು ನಡೆದು ಅರ್ಧ ಗಂಟೆಯ ನಂತರ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯು ಸಮರ್ಪಕವಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗುವುದಿಲ್ಲ.
ತಿನ್ನುವ ಅರ್ಧ ಗಂಟೆ ಮೊದಲು ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ತಿನ್ನುವ ಮೊದಲು ನೀರು ಕುಡಿಯುವುದರಿಂದ ಹೊಟ್ಟೆಯು ಊದಿಕೊಳ್ಳುತ್ತದೆ ಮತ್ತು ಹೊಟ್ಟೆಯು ತುಂಬಿರುತ್ತದೆ. ಇದು ಅಗತ್ಯಕ್ಕಿಂತ ಕಡಿಮೆ ಹಸಿವನ್ನು ಉಂಟುಮಾಡುತ್ತದೆ. ಆದ್ದರಿಂದ, ತಿನ್ನುವ ಮೊದಲು ಅಥವಾ ನಂತರ ತಕ್ಷಣವೇ ನೀರು ಕುಡಿಯುವುದನ್ನು ತಪ್ಪಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.