newsics.com/ನ್ಯೂಸಿಕ್ಸ್
ಎಐ ಅಳವಡಿಕೆಯ ಕಾರಣಕ್ಕೆ ತಂತ್ರಜ್ಞಾನ ಕಂಪನಿಗಳು ಸಾಕಷ್ಟು ಲೇ ಆಫ್ ಮಾಡುತ್ತಿವೆ. ಜಾಗತಿಕವಾಗಿ ಜನವರಿಯಿಂದ ಮಾರ್ಚ್ವರೆಗೆ 80,000 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಎಐ ಮತ್ತು ಆಟೊಮೇಶನ್ ಕಾರಣದಿಂದಲೇ ಅರ್ಧದಷ್ಟು ಉದ್ಯೋಗನಷ್ಟ ಆಗಿದೆ.
ಕುತೂಹಲದ ಸಂಗತಿ ಎಂದರೆ ಈ ಹತ್ತಿರಹತ್ತಿರ 80,000 ಲೇಆಫ್ ಪ್ರಕರಣಗಳಲ್ಲಿ ಅರ್ಧದಷ್ಟು ಉದ್ಯೋಗಗಳು ಎಐ ಮತ್ತು ಆಟೊಮೇಶನ್ ಅಳವಡಿಕೆಯ ಪರಿಣಾಮದಿಂದ ಆಗಿರುವಂಥದ್ದು. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಎಐನ ನಿಜವಾದ ಪರಿಣಾಮ ಇನ್ನೂ ಹೆಚ್ಚಿನ ಮಟ್ಟದಲ್ಲಿರುತ್ತದಂತೆ.
ಈಗ ಲೇ ಆಫ್ ಆಗಿರುವುದು ಒಂದು ಸಣ್ಣ ಸ್ಯಾಂಪಲ್ ಮಾತ್ರ. ಮುಂಬರುವ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಬಹುದು ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ.
ಲೇ ಆಫ್ ಟ್ರೆಂಡ್ ಕೋವಿಡ್ ಕಾಲಘಟ್ಟದಿಂದ ಹೆಚ್ಚಾಗಿದೆ. ಟೆಕ್ ಕಂಪನಿಗಳು ನಿಯಮಿತವಾಗಿ ಉದ್ಯೋಗಿಗಳ ಸಂಖ್ಯೆ ಇಳಿಸುತ್ತಿದೆ. ಈಗ ಎಐ ನೆಪವೊಡ್ಡಿ ಲೇ ಆಫ್ ಮಾಡಲಾಗುತ್ತಿದೆಯಾ? ಕಾಗ್ನೈಸೆಂಟ್ನಲ್ಲಿ ಮುಖ್ಯ ಎಐ ಆಫೀಸರ್ ಆಗಿರುವ ಬಾಬಕ್ ಹಾಡ್ಜಾಟ್ ಅವರು ಹೀಗೊಂದು ಅನುಮಾನಪಟ್ಟಿದ್ದಾರೆ.
ಕಾಗ್ನೈಸೆಂಟ್ ಕಂಪನಿಯ ಶೇ. 70ರಷ್ಟು ಉದ್ಯೋಗಿಗಳು ಭಾರತದಲ್ಲಿದ್ದಾರೆ. ಬೆಮಗಳೂರಿನಲ್ಲಿ ಇದರ ಎಐ ಲ್ಯಾಬೊರೇಟರಿಗಳನ್ನು ತೆರೆಯಲಾಗಿದೆ. ಇಲ್ಲಿ ಎಐ ಏಜೆಂಟ್ಗಳು ಸೇರಿದಂತೆ ಹೊಸ ಅಡ್ವಾನ್ಸ್ಡ್ ಟೂಲ್ಗಳನ್ನು ತಯಾರಿಸುವ ಕಾರ್ಯವಾಗುತ್ತಿದೆ. ವಿವಿಧ ಉದ್ದಿಮೆಗಳಿಗೆ ಉತ್ಪನ್ನಶೀಲತೆ ಹೆಚ್ಚಿಸಲು ಈ ಎಐ ಪರಿಕರಗಳು ನೆರವಾಗಲಿವೆ.
Madikeri palace ಮಡಿಕೇರಿ ಅರಮನೆ ಇನ್ಮುಂದೆ ಸಂರಕ್ಷಿತ ಸ್ಮಾರಕ: ಕೇಂದ್ರ ಸರ್ಕಾರ ಘೋಷಣೆ