newsics.com/ನ್ಯೂಸಿಕ್ಸ್
ರಾಯಚೂರು: ಮಂತ್ರಾಲಯದ ಸಮೀಪ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರು ಪಾಲಾಗಿದ್ದಾರೆ.
ಹೈದರಾಬಾದ್ ಮೂಲದ ಸತೀಶ್(35), ಯುವನಚಂದ್ರ(5), ಮಂತ್ರಾಲಯ ಗ್ರಾಮದ ರಾಘವೇಂದ್ರ(25), ಧನುಷ್(23), ಉರವಕೊಂಡದ ಸಂಧ್ಯಾ(22) ನೀರು ಪಾಲಾದವರು.
ಮಂತ್ರಾಲಯದಲ್ಲಿನ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಸಂಬಂಧಿಕರೆಲ್ಲ ಸೇರಿದ್ದರು. ಪೂಜಾ ಕಾರ್ಯ ಮುಗಿದ ನಂತರ ತುಂಗಭದ್ರಾ ನದಿಗೆ ಈಜಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ನದಿಯ ನೀರಿನ ಆಳ ತಿಳಿಯದೆ ಈಜಲು ಹೋದವರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಶೋಧ ಕಾರ್ಯಾಚರಣೆ ನಡೆಸಿ ಧನುಷ್ ಮೃತದೇಹ ಹೊರ ತೆಗೆದಿದ್ದಾರೆ. ಉಳಿದವರಿಗಾಗಿ ನದಿಯಲ್ಲಿ ಹುಡುಕಾಟ ಮುಂದುವರೆದಿದೆ.