Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > CM Salary per month ಕರ್ನಾಟಕದ ಸಿಎಂಗೆ ಭತ್ಯೆ ಸೇರಿ ಸಿಗೋ ಸಂಬಳ ಎಷ್ಟು? ಏನೇನು ಸೌಲಭ್ಯ?
ಕರ್ನಾಟಕಪ್ರಮುಖ

CM Salary per month ಕರ್ನಾಟಕದ ಸಿಎಂಗೆ ಭತ್ಯೆ ಸೇರಿ ಸಿಗೋ ಸಂಬಳ ಎಷ್ಟು? ಏನೇನು ಸೌಲಭ್ಯ?

Share
3 Min Read
SHARE

newsics.com/ನ್ಯೂಸಿಕ್ಸ್

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಪಟ್ಟದರಸ ಯಾರು ಎಂಬ ಪ್ರಶ್ನೆಯ ಉತ್ತರವೂ ಕುತೂಹಲಕಾರಿಯಾಗಿದೆ. ಸದ್ಯ  ಡಿ.ಕೆ.ಶಿವಕುಮಾರ್‌ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿದೆ. ಈ ಎಲ್ಲ ರಾಜಕೀಯ ಚದುರಂಗದಾಟದ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಪ್ರತಿ ತಿಂಗಳ ಸಂಬಳ ಎಷ್ಟು? ಡಿ.ಕೆ ಶಿವಕುಮಾರ್‌ ಸಿಎಂ ಆದ್ರೆ ಯಾವೆಲ್ಲ ಸೌಲಭ್ಯಗಳು ಸಿಗಲಿವೆ?

ಮುಖ್ಯಮಂತ್ರಿ ಹುದ್ದೆಯ ರಾಜ್ಯದಲ್ಲಿ ಪ್ರಮುಖ ಹುದ್ದೆಯಾಗಿದ್ದು, ರಾಜ್ಯ ಸರ್ಕಾರದ ಚುನಾಯಿತ ಮುಖ್ಯಸ್ಥರಾಗಿರುತ್ತಾರೆ. ರಾಜ್ಯಪಾಲರು ಮತ್ತು ಮಂತ್ರಿಗಳ ಮಂಡಳಿಯ ನಡುವಿನ ಕೊಂಡಿಯಾಗಿ ಮುಖ್ಯಮಂತ್ರಿ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದ 163-164 ನೇ ವಿಧಿಯಲ್ಲಿ ಮುಖ್ಯಮಂತ್ರಿಯ ಬಗ್ಗೆ ಉಲ್ಲೇಖಿಸಲಾಗಿದೆ. 163 ನೇ ವಿಧಿಯ ಪ್ರಕಾರ, ರಾಜ್ಯಪಾಲರಿಗೆ ಸಹಾಯ ಮಾಡಲು ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದ ಮಂತ್ರಿಮಂಡಲವನ್ನು ಹೊಂದಿರಬೇಕು ಎಂದು ಸೂಚಿಸುತ್ತದೆ.

ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಪುರುಷ ಅಥವಾ ಸ್ತ್ರೀ ಯಾರಾದರೂ ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿ ಭಾರತದ ಪ್ರಜೆಯಾಗಿದ್ದು, 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಅವರು ಸಿಎಂ ಆಗಬಹುದು. ಸಿಎಂ ಆಗಲು ರಾಜ್ಯ ವಿಧಾನಮಂಡಲದ ಎರಡೂ ಸದನಗಳ ಪೈಕಿ ಒಂದರ ಸದಸ್ಯರಾಗಿರಬೇಕು. ಒಂದು ವೇಳೆ ಎಂಎಲ್‌ಎ ಅಥವಾ ಎಂಎಲ್‌ಸಿ ಆಗದಿದ್ದರೂ ಆ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬಹುದು. ಆದರೆ ಅವರು ನೇಮಕಗೊಂಡ ದಿನಾಂಕದಿಂದ 6 ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಬೇಕು.

ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸದ್ಯ ತಿಂಗಳಿಗೆ 75 ಸಾವಿರ ರೂ. ವೇತನ ಸಿಗುತ್ತದೆ. 2022ಕ್ಕೂ ಮೊದಲು ಕರ್ನಾಟಕದ ಸಿಎಂ ವೇತನ 50 ಸಾವಿರ ರೂ. ಇತ್ತು. ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮಕ್ಕೆ 2022ರಲ್ಲಿ ತಿದ್ದುಪಡಿ ತಂದು ಮುಖ್ಯಮಂತ್ರಿ ಹಾಗೂ ಶಾಸಕರು, ಪರಿಷತ್‌ ಸದಸ್ಯರು, ಸ್ಪೀಕರ್‌ ಹಾಗೂ ವಿರೋಧ ಪಕ್ಷದ ನಾಯಕರ ವೇತನವನ್ನು ಹೆಚ್ಚಿಸಲಾಗಿತ್ತು.

ಸಂಬಳದ ಜೊತೆ ಇನ್ನು ಅನೇಕ ಭತ್ಯೆಗಳನ್ನು ಸಿಎಂ ಪಡೆಯುತ್ತಾರೆ. ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ., ಮನೆ ನಿರ್ವಹಣೆ ಭತ್ಯೆ 30,000 ರೂ., ಪ್ರತಿ ದಿನದ ಪ್ರಯಾಣ ಭತ್ಯೆ 2,500 ರೂ., ವೈಯಕ್ತಿಕ ಆಹಾರ, ವಸ್ತುಗಳ ಖರೀದಿ, ಇತರೆ ಭತ್ಯೆಗಳು ಎಂದು 4.5 ಲಕ್ಷ ರೂ. ಅನ್ನು ನೀಡಲಾಗುತ್ತದೆ. ರೋಡ್‌ ಮೈಲೇಜ್‌ ಭತ್ಯೆ ಎಂದು ಕಿಮೀಗೆ 30 ರೂ. ಅನ್ನು ನೀಡಲಾಗುತ್ತದೆ.

ಅದರ ಜೊತೆಗೆ 1,500 ಲೀಟರ್‌ ಇಂಧನ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುತ್ತದೆ. ಪ್ರಯಾಣ, ರೋಡ್‌ ಮೈಲೇಜ್‌ ಭತ್ಯೆ ಹೊರತುಪಡಿಸಿದರೆ ಮುಖ್ಯಮಂತ್ರಿಗಳಿಗೆ ವೇತನ ಹಾಗೂ ಎಲ್ಲ ಭತ್ಯೆ ಸೇರಿ 6,75,000 ರೂ. ಬರುತ್ತದೆ. ಇನ್ನು 1500 ಲೀಟರ್‌ ಪೆಟ್ರೋಲ್‌ ಎಂದರೆ 1,50,000 ಲಕ್ಷ ರೂ. ಕೂಡ ಕರ್ನಾಟಕ ಸಿಎಂಗೆ ಸಿಗುತ್ತದೆ. ಒಟ್ಟು ಎಲ್ಲ ಸೇರಿ ಪ್ರತಿ ತಿಂಗಳು ಸುಮಾರು 10 ಲಕ್ಷ ರೂ.ವರೆಗೂ ಕರ್ನಾಟಕ ಮುಖ್ಯಮಂತ್ರಿಗೆ ವೇತನ ಮತ್ತು ಭತ್ಯೆ ಸಿಗುತ್ತದೆ.

 

ಕರ್ನಾಟಕದ ಮುಖ್ಯಮಂತ್ರಿಗೆ ಸಿಗುವ ಅಧಿಕೃತ ಸೌಲಭ್ಯಗಳು

ವಾಹನ ಸೌಲಭ್ಯ: ಸರ್ಕಾರಿ ವಾಹನ ಮತ್ತು ಚಾಲಕರ ಸೌಲಭ್ಯ.

ಭದ್ರತೆ: ರಾಜ್ಯ ಪೊಲೀಸ್ ಇಲಾಖೆಯಿಂದ Z+ (ಝೆಡ್ ಪ್ಲಸ್) ಶ್ರೇಣಿಯ ಅತ್ಯುನ್ನತ ಭದ್ರತೆ ಮತ್ತು ಸಿಬ್ಬಂದಿ.

ಪ್ರಯಾಣ ಸೌಲಭ್ಯ: ಉಚಿತ ವಿಮಾನ ಮತ್ತು ರೈಲು ಪ್ರಯಾಣದ ಸೌಲಭ್ಯ (ವಿಮಾನಯಾನದಲ್ಲಿ ನಿರ್ದಿಷ್ಟ ವಾರ್ಷಿಕ ಮಿತಿ ಇರುತ್ತದೆ).

ವೈದ್ಯಕೀಯ ಚಿಕಿತ್ಸೆ: ಸಿಎಂ ಹಾಗೂ ಅವರ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ.

ನಿವೃತ್ತಿ ವೇತನ: ಅಧಿಕಾರಾವಧಿ ಮುಗಿದ ನಂತರ ಮಾಸಿಕ ಪಿಂಚಣಿ ಮತ್ತು ಜೀವಿತಾವಧಿಯವರೆಗೆ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ.

ಪ್ರತಿದಿನ 2 ಬಾಳೆಹಣ್ಣು ತಿನ್ನಿ, ಆಮೇಲೆ ನೋಡಿ ಮ್ಯಾಜಿಕ್‌!

TAGGED:What is the salary of the Karnataka CM including allowance? What are the benefits?
Share This Article
Facebook Twitter Copy Link Print
Previous Article ಪ್ರತಿದಿನ 2 ಬಾಳೆಹಣ್ಣು ತಿನ್ನಿ, ಆಮೇಲೆ ನೋಡಿ ಮ್ಯಾಜಿಕ್‌!
Next Article ಸಿದ್ದರಾಮಯ್ಯ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?