Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bigg Boss Kavya Shaiva ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ
ಕರ್ನಾಟಕಪ್ರಮುಖಮನರಂಜನೆ

Bigg Boss Kavya Shaiva ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ

Share
1 Min Read
SHARE

newsics.com/ನ್ಯೂಸಿಕ್ಸ್

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಮಾತಾಗಿದ್ದ ಕ್ಯೂಟ್ ಅಂಡ್ ಬೋಲ್ಡ್ ಬೆಡಗಿ ಕಾವ್ಯ ಶೈವ  ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ‘ಬಜಾರಿ’ ಸ್ಟೈಲ್ ಮೂಲಕ ಫೈನಲ್ ಹಂತದವರೆಗೆ ತಲುಪಿ ಜನರ ಮನಗೆದ್ದಿದ್ದ ಕಾವ್ಯ, ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾವ್ಯ ಶೈವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾವ್ಯ ಅವರನ್ನ ನೋಡಲು ಅಲ್ಲಿ ಅಭಿಮಾನಿಗಳು ಜೇನುಗೂಡಿನಂತೆ ಮುತ್ತಿಕೊಂಡಿದ್ದರು. ಯಾವಾಗ ಕಾವ್ಯ ವೇದಿಕೆ ಮೇಲೆ ಬಂದರೋ, ಅಭಿಮಾನಿಗಳಿಗೆ ಸೆಲ್ಫಿ ತಗೊಳ್ಳೋಕೆ ಅದೇನು ಆತುರವೋ ಗೊತ್ತಿಲ್ಲ! ಸೀದಾ ಸ್ಟೇಜ್ ಹತ್ತೋಕೆ ಶುರು ಮಾಡಿದರು. ಆಗ ಶುರುವಾಯ್ತು ನೋಡಿ ಅಸಲಿ ಕಿರಿಕ್. ಆಯೋಜಕರು ಅಭಿಮಾನಿಗಳನ್ನು ತಡೆಯಲು ಹೋಗಿ ಅಲ್ಲಿ ಗದ್ದಲ ಸೃಷ್ಟಿಯಾಯಿತು.

ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕಾವ್ಯ ಶೈವ ಅವರು ಮೈಕ್ ಹಿಡಿದು ಮಾತನಾಡಲು ಮುಂದಾದಾಗ, ಅಲ್ಲಿದ್ದ ಒಬ್ಬ ವ್ಯಕ್ತಿ (ಸ್ಥಳೀಯ ಸಿಬ್ಬಂದಿ ಅಥವಾ ಆಯೋಜಕ ಎನ್ನಲಾಗಿದೆ) ಏಕಾಏಕಿ ಕಾವ್ಯ ಅವರ ಬಳಿ ಬಂದು, ಅವರ ಕೈಯಲ್ಲಿದ್ದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದೆ. ಈ ಘಟನೆಯಿಂದಾಗಿ ಕಾವ್ಯ ಅವರಿಗೆ ವೇದಿಕೆ ಮೇಲೆಯೇ ಮುಜುಗರವಾಗಿದೆ.

ಈ ಘಟನೆಯ ನಂತರ ಅಭಿಮಾನಿಗಳು ಮತ್ತು ಆಯೋಜಕರ ನಡುವೆ ವಾಗ್ವಾದ ತೀವ್ರಗೊಂಡಿದ್ದು, ಪರಿಸ್ಥಿತಿ ಗದ್ದಲದ ಹಂತಕ್ಕೆ ತಲುಪಿತು. ಈ ಸಮಯದಲ್ಲಿ ಕಾವ್ಯ ಅವರು ಬೇಸರದಿಂದ ಕಾರ್ಯಕ್ರಮವನ್ನು ಮಧ್ಯದಲ್ಲಿ ಬಿಟ್ಟು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾವ್ಯ ಅಭಿಮಾನಿಗಳು ಆಯೋಜಕರ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಕೊರತೆಯೇ ಎಲ್ಲಾ ಗದ್ದಲಕ್ಕೆ ಕಾರಣವೆಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಈ ಘಟನೆಯ ಬಗ್ಗೆ ಕಾವ್ಯ ಶೈವ ಅವರು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮುಂದಿನ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬ ಅಭಿಮಾನಿಗಳ ಮತ್ತು ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.

https://www.instagram.com/reel/DYuIvKXJ_sh/?igsh=cnFrcTQ2OWhiNTA0

ಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

TAGGED:Bigg Boss contestant Kavya Shaiva gets humiliated on stage
Share This Article
Facebook Twitter Copy Link Print
Previous Article Today’s Horoscope ಇಂದಿನ ಪಂಚಾಂಗ/ರಾಶಿ ಭವಿಷ್ಯ, 26-05-2026, ಮಂಗಳವಾರ, ಈ ದಿನ ನಿಮಗೆ ಹೇಗಿದೆ?
Next Article Electricity Distribution ಕರ್ನಾಟಕ ವಿದ್ಯುತ್ ವಿತರಣೆ ಖಾಸಗಿ ಪಾಲಾಗುತ್ತಾ? ನೌಕರರ ವಿರೋಧವೇಕೆ?

Popular Posts

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಮಹತ್ವದ ಹೇಳಿಕೆ!

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

You Might Also Like

ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?