newsics.com/ನ್ಯೂಸಿಕ್ಸ್
ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬರುತ್ತಲೇ ಇದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನ್ನರ್ ಡೇಟ್ ಎಂಜಾಯ್ ಮಾಡುತ್ತಿದ್ದರಂತೆ, ಇದೀಗ ಇಬ್ಬರ ಸಂಬಂಧಕ್ಕೆ ಕುಟುಂಬದವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗ್ತಿದೆ.
ಈ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಮತ್ತು ಸಿನಿಮಾ ಎರಡರಲ್ಲೂ ಉನ್ನತ ಸ್ಥಾನಕ್ಕೆ ಏರುತ್ತಿರುವ ಈ ಇಬ್ಬರು ಸೆಲೆಬ್ರಿಟಿಗಳ ಆಸ್ತಿ ಮತ್ತು ಗಳಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಸನ್ ಟಿವಿ ನೆಟ್‌ವರ್ಕ್‌ನ ಬೋರ್ಡ್ನಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿರುವ ಕಾವ್ಯ ಮಾರನ್ ಅವರ ವೈಯಕ್ತಿಕ ನಿವ್ವಳ ಮೌಲ್ಯ ಸುಮಾರು 400 ಕೋಟಿ ರೂ. ನಿಂದ 500 ಕೋಟಿ ರೂ. ವರೆಗೆ ಇದೆ. ಈ ಆದಾಯವು ಅವರ ವಾರ್ಷಿಕ ಸಂಬಳ, ಲಾಭಾಂಶ ಮತ್ತು ಸನ್ ಗ್ರೂಪ್‌ನಿಂದ ಬರುವ ಐಪಿಎಲ್ ಫ್ರಾಂಚೈಸ್ ಷೇರುಗಳಿಂದಲೇ ಬರುತ್ತದೆ. ಅವರ ಕುಟುಂಬದ ಒಟ್ಟು ನಿವ್ವಳ ಮೌಲ್ಯ ಸುಮಾರು 19,000 ಕೋಟಿ ರೂ. ಅವರು ಚೆನ್ನೈನಲ್ಲಿ 100 ಕೋಟಿ ರೂ. ಮೌಲ್ಯದ ಐಷಾರಾಮಿ ಮಹಲು ಮತ್ತು ರೇಂಜ್ ರೋವರ್ ಮತ್ತು ಮರ್ಸಿಡಿಸ್ ಜಿ-ವ್ಯಾಗನ್‌ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಮತ್ತೊಂದೆಡೆ, ಅನಿರುದ್ಧ್ ರವಿಚಂದರ್ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎಂಬ ದಾಖಲೆಯನ್ನು ಸೃಷ್ಟಿಸುತ್ತಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಮತ್ತು ಜೂನಿಯರ್ ಎನ್‌ಟಿಆರ್‌ನಂತಹ ಸ್ಟಾರ್ ಹೀರೋಗಳ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಅವರು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ, ಅವರು ಒಂದೇ ಚಿತ್ರಕ್ಕೆ 25 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಚಿತ್ರರಂಗದಲ್ಲಿ ಕೇಳಿಬರುತ್ತಿದೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ.
ಪ್ರಸ್ತುತ, ಅನಿರುದ್ಧ್ ಅವರ ವೈಯಕ್ತಿಕ ಆಸ್ತಿ ಸುಮಾರು 50 ಕೋಟಿ ರೂ. ಮೌಲ್ಯದ್ದಾಗಿದೆ. ಅವರು ಚಲನಚಿತ್ರಗಳು, ಲೈವ್ ಸಂಗೀತ ಕಾನ್ಸರ್ಟ್ಸ್, ಯೂಟ್ಯೂಬ್, ಆಡಿಯೋ ಸ್ಟ್ರೀಮಿಂಗ್ ಮತ್ತು ಫೇಮಸ್ ಬ್ರ್ಯಾಂಡ್‌ಗಳ ಅನುಮೋದನೆಗಳ ಮೂಲಕ ಭಾರೀ ಆದಾಯವನ್ನು ಗಳಿಸುತ್ತಾರೆ. ಸಂಭಾವನೆಯ ವಿಷಯದಲ್ಲಿ ದೇಶದ ಅಗ್ರ ಲೀಗ್‌ನಲ್ಲಿದ್ದರೂ, ಕಾವ್ಯಾ ಮಾರನ್ ಅವರ ಉನ್ನತ ಮಟ್ಟದ ಕಾರ್ಪೊರೇಟ್ ಹಿನ್ನೆಲೆ ಮತ್ತು ಬ್ಯುಸಿನೆಸ್ಗೆ ಹೋಲಿಸಿದರೆ ಅನಿರುದ್ಧ್ ಅವರ ಆಸ್ತಿ ಚಿಕ್ಕದಾಗಿದೆ.
ಕಪ್ಪೆ ಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ ಮೂವರು ನೀರುಪಾಲು : ಹಲವರ ಸ್ಥಿತಿ ಗಂಭೀರ