Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Automobile ಹೀರೋ, ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಜಾಗತಿಕ ರೇಸ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಟಿವಿಎಸ್ ಮೋಟಾರ್ಸ್’
ಪ್ರಮುಖದೇಶ

Automobile ಹೀರೋ, ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಜಾಗತಿಕ ರೇಸ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಟಿವಿಎಸ್ ಮೋಟಾರ್ಸ್’

Share
2 Min Read
SHARE

newsics.com | ನ್ಯೂಸಿಕ್ಸ್

ಮುಂಬೈ: ಭಾರತದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ‘ಟಿವಿಎಸ್ ಮೋಟಾರ್ಸ್’, ದೇಶಿ ಆಟೋಮೊಬೈಲ್ ಇತಿಹಾಸ ಸೃಷ್ಟಿಸಿದೆ. ಜೂನ್ 2026 ರ ಜಾಗತಿಕ ಮಾರಾಟದ ಇತ್ತೀಚಿನ ವರದಿಗಳ ಪ್ರಕಾರ, ಇದುವರೆಗೆ ದೇಶದ ಮಾರುಕಟ್ಟೆಯನ್ನು ಆಳುತ್ತಿದ್ದ ಹೀರೋ ಮೋಟೋಕಾರ್ಪ್ ಹಾಗೂ ಹೋಂಡಾ ಸಂಸ್ಥೆಗಳನ್ನು ಹಿಂದಿಕ್ಕಿರುವ ಟಿವಿಎಸ್, ಭಾರತದ ಅತ್ಯಂತ ದೊಡ್ಡ ಟೂ-ವ್ಹೀಲರ್ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿದೆ.

ಕಳೆದ ಜೂನ್ ತಿಂಗಳ ಅವಧಿಯಲ್ಲಿ ಟಿವಿಎಸ್ ಸಂಸ್ಥೆಯು ಬರೋಬ್ಬರಿ 5,65,417 ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕವಾಗಿ ಶೇ. 47 ರಷ್ಟು ಪ್ರಗತಿ ಕಂಡಿದೆ. ಇದೇ ತಿಂಗಳಲ್ಲಿ ಹೀರೋ ಮೋಟೋಕಾರ್ಪ್ 5,41,159 ವಾಹನಗಳನ್ನು ಹಾಗೂ ಹೋಂಡಾ ಕಂಪನಿಯು 5,28,281 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಇವೆರಡನ್ನೂ ಮೀರಿಸಿ ಟಿವಿಎಸ್ ಮೊದಲ ಸ್ಥಾನವನ್ನು ಮುಟ್ಟಿದೆ. ವಿಶೇಷವೆಂದರೆ, ಈ ಲೆಕ್ಕಾಚಾರದಲ್ಲಿ ಮೊಪೆಡ್‌ಗಳ ಮಾರಾಟವನ್ನು ಪರಿಗಣಿಸಿಲ್ಲ. ಕೇವಲ ಪ್ರಮುಖ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳ ಮಾರಾಟದ ಬಲದಿಂದಲೇ ಟಿವಿಎಸ್ ಈ ಐತಿಹಾಸಿಕ ಮೈಲಿಗಲ್ಲು ತಲುಪಿದೆ.

ದೇಶದ ಒಳಗಿನ ವ್ಯಾಪಾರಕ್ಕಿಂತಲೂ ಹೆಚ್ಚಾಗಿ ವಿದೇಶಿ ಮಾರುಕಟ್ಟೆಯಲ್ಲಿ ಟಿವಿಎಸ್ ಸೃಷ್ಟಿಸಿರುವ ಭದ್ರ ಬುನಾದಿಯೇ ಈ ಮಹತ್ವದ ಬದಲಾವಣೆಗೆ ಕಾರಣ. ಜೂನ್ ತಿಂಗಳೊಂದರಲ್ಲೇ ಸಂಸ್ಥೆಯು 1,72,355 ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ. ಗಮನಿಸಬೇಕಾದ ಅಂಶವೆಂದರೆ, ಈ ರಫ್ತಿನ ಪ್ರಮಾಣವು ಹೀರೋ (38,269 ಯುನಿಟ್) ಮತ್ತು ಹೋಂಡಾ (59,325 ಯುನಿಟ್) ಎರಡೂ ಕಂಪನಿಗಳ ಒಟ್ಟು ರಫ್ತಿಗಿಂತಲೂ (97,594 ಯುನಿಟ್) ಹಿರಿದಾಗಿದೆ. ಆದಾಗ್ಯೂ, ಕೇವಲ ರಫ್ತು ವ್ಯವಹಾರವನ್ನಷ್ಟೇ ಗಮನಿಸಿದರೆ ಬಜಾಜ್ ಆಟೋ ಸಂಸ್ಥೆಯು 2,22,439 ವಾಹನಗಳನ್ನು ವಿದೇಶಕ್ಕೆ ಕಳುಹಿಸಿ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಸದ್ಯ ಜಾಗತಿಕ ಮಟ್ಟದಲ್ಲಿ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾಗಿ ಟಿವಿಎಸ್ ಬೆಳೆದು ನಿಂತಿದೆ. ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಖಂಡಗಳ ಒಟ್ಟು 90ಕ್ಕೂ ಹೆಚ್ಚು ದೇಶಗಳಲ್ಲಿ ಟಿವಿಎಸ್ ಬ್ರ್ಯಾಂಡ್ ವಿಸ್ತರಿಸಿದೆ. ಪ್ರಸಕ್ತ ಸಾಲಿನ ಕಂಪನಿಯ ಒಟ್ಟು ಆದಾಯದಲ್ಲಿ ಶೇಕಡಾ 25 ರಷ್ಟು ಹಣ ಕೇವಲ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದಲೇ ಹರಿದುಬರುತ್ತಿದೆ.

ಭಾರತದ ಆಂತರಿಕ ಮಾರಾಟವನ್ನು ಮಾತ್ರ ಲೆಕ್ಕ ಹಾಕಿದಾಗ ಹೀರೋ ಮೋಟೋಕಾರ್ಪ್ 5,02,890 ವಾಹನಗಳ ಮಾರಾಟದೊಂದಿಗೆ ಇಂದಿಗೂ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿರುವ ಹೋಂಡಾ 4,68,956 ವಾಹನಗಳನ್ನು ದೇಶದೊಳಗೆ ಮಾರಾಟ ಮಾಡಿದೆ. ಟಿವಿಎಸ್ ಕಂಪನಿಯು 4,11,014 ವಾಹನಗಳೊಂದಿಗೆ ಭಾರತದಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ಶೇ. 46 ರಷ್ಟು ಭಾರಿ ಪ್ರಗತಿ ಸಾಧಿಸಿದೆ. ದೇಶದ ಗಡಿಯೊಳಗೆ ಮೂರನೇ ಸ್ಥಾನದಲ್ಲಿದ್ದರೂ, ವಿದೇಶಿ ಮಾರುಕಟ್ಟೆಯ ರಫ್ತು ಬಲದಿಂದಾಗಿ ಒಟ್ಟಾರೆ ‘ಜಾಗತಿಕ ಮಾರಾಟ’ದಲ್ಲಿ ಟಿವಿಎಸ್ ಪ್ರಥಮ ಬಾರಿಗೆ ನಂ.1 ಕಿರೀಟ ಮುಡಿಗೇರಿಸಿಕೊಂಡಿದೆ.

 

Road Mishap ಭೀಕರ ಅಪಘಾತ: ಲಾರಿಗೆ ಡಿಕ್ಕಿ ಹೊಡೆದ ಬಸ್, ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾ*ವು

TAGGED:#automobile #Tvs #honda #heromotocorp #sals
Share This Article
Facebook Twitter Copy Link Print
Previous Article Road Mishap ಭೀಕರ ಅಪಘಾತ: ಲಾರಿಗೆ ಡಿಕ್ಕಿ ಹೊಡೆದ ಬಸ್, ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾ*ವು
Next Article Crime ರ‍್ಯಾಲಿಯಲ್ಲಿ ಭೀಕರ ಬಾಂಬ್ ಸ್ಫೋಟ: ಮೂವರಿಗೆ ಗಂಭೀರ ಗಾಯ- ವೀಡಿಯೊ ನೋಡಿ

Popular Posts

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

Ballari ಡಬಲ್ ಮರ್ಡರ್: ಪತ್ನಿ ಮಾವನನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ

1 Min Read

Lorry Strike ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ

1 Min Read

Voter List Revision SIR ಪ್ರಕ್ರಿಯೆ​ ವೇಳೆ ಕರ್ನಾಟಕದಲ್ಲಿ ಭಾರಿ ಲೋಪ ಆರೋಪ : ಮೈತ್ರಿ ನಾಯಕರಿಂದ ದೂರು

2 Min Read

You Might Also Like

ಕರ್ನಾಟಕಪ್ರಮುಖವೈರಲ್

Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Water bottle ನೀತಾ ಅಂಬಾನಿಯ ಈ ವಾಟರ್ ಬಾಟಲ್ ಬೆಲೆ ಎಷ್ಟು?

1 Min Read
Sportsದೇಶಪ್ರಮುಖ

Sports news ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಶಪೂರ್ ಜದ್ರಾನ್ ನಿಧನ

1 Min Read
filmಕರ್ನಾಟಕಪ್ರಮುಖ

Actress Radha ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳಿತೀಯಾ… ನಟಿ ರಾಧಾ ಭಗವತಿಗೆ ಹೀಗೊಂದು ಸಲಹೆ ಕೊಟ್ಟ ಭೂಪ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?