newsics.com | ನ್ಯೂಸಿಕ್ಸ್
ಬೆಂಗಳೂರು: ಮನೆಯಲ್ಲಿ ನಾಯಿ ಸಾಕುವವರಿಗೆ ಕರ್ನಾಟಕ ಹೈಕೋರ್ಟ್ ಒಂದು ಮುಖ್ಯ ಎಚ್ಚರಿಕೆ ನೀಡಿದೆ. ಮಾಲೀಕರ ನಿರ್ಲಕ್ಷ್ಯದಿಂದಾಗಿ ಸಾಕುನಾಯಿ ಬೇರೆಯವರಿಗೆ ಕಚ್ಚಿದರೆ, ಅದಕ್ಕೆ ನೇರವಾಗಿ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನಾಯಿ ಕಡಿತದ ಪ್ರಕರಣ ಒಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ. “ನಾಯಿಗಳನ್ನು ಜಾಗ್ರತೆಯಿಂದ ಸಾಕುವುದು ಮಾಲೀಕರ ಕರ್ತವ್ಯ. ಇದರಲ್ಲಿ ಬೇಜವಾಬ್ದಾರಿತನ ತೋರಿ ಇತರರಿಗೆ ತೊಂದರೆ ಉಂಟುಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿ ವಜಾಗೊಳಿಸಿದ ನ್ಯಾಯಪೀಠ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಾಡಿ, “ಘಟನೆ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ಮಾಲೀಕರ ತಪ್ಪು ಇದೆ ಎನ್ನಲು ಯಾವುದೇ ಪುರಾವೆ ಇಲ್ಲ. ಅಲ್ಲದೆ, ನಾಯಿ ಕಚ್ಚಿದ ವ್ಯಕ್ತಿಯ ಆಸ್ಪತ್ರೆ ಖರ್ಚನ್ನು ಮಾನವೀಯತೆಯ ದೃಷ್ಟಿಯಿಂದ ಮಾಲೀಕರೇ ಕೊಟ್ಟಿದ್ದಾರೆ” ಎಂದು ಕೋರ್ಟ್‌ಗೆ ತಿಳಿಸಿದರು.
ಆದರೆ, ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. “ಖರ್ಚು ಕೊಟ್ಟ ತಕ್ಷಣ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬರಲ್ಲ, ಮಾಲೀಕರು ತಮ್ಮ ಸಾಕುಪ್ರಾಣಿಗಳ ಬಗ್ಗೆ ಕಡ್ಡಾಯವಾಗಿ ಎಚ್ಚರಿಕೆ ವಹಿಸಲೇಬೇಕು” ಎಂದು ಹೇಳಿದ ಹೈಕೋರ್ಟ್, ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
Shiva Rajkumar 64ನೇ ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಹ್ಯಾಟ್ರಿಕ್ ಹೀರೋ