Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇಂದು ಟಿಬಿ ಡ್ಯಾಂನ 33 ಹೊಸ ಕ್ರಸ್ಟ್ ಗೇಟ್ ಉದ್ಘಾಟನೆ, 3 ಸಿಎಂಗಳ ಸಮಾಗಮ
ಕರ್ನಾಟಕದೇಶಪ್ರಮುಖ

ಇಂದು ಟಿಬಿ ಡ್ಯಾಂನ 33 ಹೊಸ ಕ್ರಸ್ಟ್ ಗೇಟ್ ಉದ್ಘಾಟನೆ, 3 ಸಿಎಂಗಳ ಸಮಾಗಮ

Share
1 Min Read
SHARE

newsics.com | ನ್ಯೂಸಿಕ್ಸ್

ಮುನಿರಾಬಾದ್ (ಕೊಪ್ಪಳ): ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದ್ದು, ಜಲಾಶಯದ ಎಲ್ಲಾ 33 ಹೊಸ ಕ್ರಸ್ಟ್‌ ಗೇಟ್‌ಗಳ ಉದ್ಘಾಟನಾ ಸಮಾರಂಭ ಗುರುವಾರ (ಜೂನ್ 25) ನೆರವೇರಲಿದೆ.

​https://youtube.com/shorts/ZXP7pcy0C9I?si=9ojqm_IFx-BsqqfM

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಮೂರು ರಾಜ್ಯಗಳ ಪ್ರಮುಖ ನಾಯಕರು ಮತ್ತು ಗಣ್ಯರು ಮುನಿರಾಬಾದ್‌ನ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಬೃಹತ್ ಜಂಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

​2024ರ ಆಗಸ್ಟ್‌ನಲ್ಲಿ ಸಂಭವಿಸಿದ ಭಾರಿ ಪ್ರವಾಹದ ವೇಳೆ ಜಲಾಶಯದ 19ನೇ ಕ್ರಸ್ಟ್‌ ಗೇಟ್ ಕೊಚ್ಚಿಹೋಗಿ ಆತಂಕ ಸೃಷ್ಟಿಸಿತ್ತು. ಆಗ ಹೈಡ್ರಾಲಿಕ್ ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿತ್ತು. ತದನಂತರ, ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರದ (NDSA) ಶಿಫಾರಸಿನ ಮೇರೆಗೆ ಸುರಕ್ಷತೆಯ ದೃಷ್ಟಿಯಿಂದ ಜಲಾಶಯದ ಎಲ್ಲಾ 33 ಹಳೆಯ ಸ್ಪಿಲ್‌ವೇ ಗೇಟ್‌ಗಳನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿತ್ತು.

​ದಾಖಲೆಯ ಅವಧಿಯಲ್ಲಿ ಕಾಮಗಾರಿ ಪೂರ್ಣ: ಸುಮಾರು 51 ಕೋಟಿ ರೂಪಾಯಿ ವೆಚ್ಚದಲ್ಲಿ ಹಳೆಯ ಗೇಟ್‌ಗಳು ಮತ್ತು ಚೈನ್ ಲಿಂಕ್‌ಗಳನ್ನು ತೆಗೆದು, ಅತ್ಯಾಧುನಿಕ ತಂತ್ರಜ್ಞಾನದ ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯವನ್ನು ಕೇವಲ 6 ತಿಂಗಳ ದಾಖಲೆಯ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಅಣೆಕಟ್ಟಿನ ಆಯುಷ್ಯ ಮುಂದಿನ 50 ವರ್ಷಗಳ ಕಾಲ ಹೆಚ್ಚಾಗಿದ್ದು, ಮುಂಬರುವ ಮುಂಗಾರು ಹಂಗಾಮಿನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹಿಸಲು ಜಲಾಶಯ ಸಜ್ಜಾಗಿದೆ.

​ಬಿಗಿ ಬಂದೋಬಸ್ತ್: ವಿಐಪಿಗಳ ಭೇಟಿ ಹಾಗೂ ಬೃಹತ್ ಸಮಾರಂಭದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಮುನಿರಾಬಾದ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಈ ಯೋಜನೆಯಿಂದಾಗಿ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದ ಲಕ್ಷಾಂತರ ರೈತರು ನಿರಾಳರಾಗಿದ್ದಾರೆ.

Kethan- Siya case ಕೇತನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಸಿಯಾ ಪರ ವಕೀಲರು ಹೇಳ್ತಿರೋದೇನು?

Air India flight ಏರ್ ಇಂಡಿಯಾ ವಿಮಾನ ಪಾಕ್ ವಾಯುಪ್ರದೇಶ ಪ್ರವೇಶಿಸಿದ್ದೇಕೆ? ತೀವ್ರಗೊಂಡ DGCA ತನಿಖೆ

Actress Samanta Ruth Prabhu ಹೌದು, ನಾನು ತಾಯಿಯಾಗುತ್ತಿದ್ದೇನೆ: ಸತ್ಯ ಹೇಳಿದ ನಟಿ ಸಮಂತಾ

TAGGED:3 CMs present33 new crest gates of TB Dam inaugurated today
Share This Article
Facebook Twitter Copy Link Print
Previous Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 25-06-2026, ಗುರುವಾರ, ಹೇಗಿದೆ ನಿಮ್ಮ ಇಂದಿನ ಗ್ರಹಗತಿ?
Next Article Digital service ಇಂದಿನಿಂದ ನಾಳೆ ಬೆಳಗ್ಗೆವರೆಗೆ ರಾಜ್ಯಾದ್ಯಂತ ಸರ್ಕಾರಿ ಡಿಜಿಟಲ್ ಸೇವೆ ಸ್ಥಗಿತ

Popular Posts

Krushi- Vaishak ಆತ್ಮ*ಹ*ತ್ಯೆ ಮಾಡಿಕೊಳ್ಳುವ ಮುನ್ನ ನಟಿ‌ ಕೃಷಿಗೆ ವೈಶಾಕ್ ಹೇಳಿದ್ದೇನು? ತಾಪಂಡಗೂ ಈಗ ತನಿಖೆ ಭಯ!

3 Min Read

ವಾರಾಣಸಿ ವಿಶ್ವದ ಎರಡನೇ ಸಸ್ಯಾಹಾರಿ ನಗರವಾಗುತ್ತಿದೆಯೇ?

1 Min Read

ಜೈಪುರದ ರಾಜಮನೆತನದ ಮದುವೆಗೆ ಅನಿರೀಕ್ಷಿತ ಅತಿಥಿಯಾದ ಕೊರಿಯನ್ ಪ್ರವಾಸಿಗ; ವಿಡಿಯೋ ವೈರಲ್

1 Min Read

Kerala highcourt- CM DK ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಬೇಕಾಗುತ್ತಾ? ಕೇರಳ ಹೈಕೋರ್ಟ್ ತೀರ್ಪಿನಿಂದ ಶುರುವಾಯ್ತು ಹೊಸ ಚರ್ಚೆ!

2 Min Read

You Might Also Like

ಪ್ರಮುಖಕರ್ನಾಟಕದೇಶ

TB Dam Spillways ಟಿಬಿ ಡ್ಯಾಂ ಸ್ಪಿಲ್ ವೇಗಳಿಗೆ ಮೂರೂ ರಾಜ್ಯಗಳ ಸಿಎಂಗಳಿಂದ ಚಾಲನೆ

1 Min Read
ಪ್ರಮುಖಕರ್ನಾಟಕದೇಶ

NCERT- EMERGENCY ಇದೇ ಮೊದಲ ಬಾರಿ NCERT ಪಠ್ಯದಲ್ಲಿ ತುರ್ತುಪರಿಸ್ಥಿತಿ ಪಾಠ

3 Min Read
ಕರ್ನಾಟಕಪ್ರಮುಖಮನರಂಜನೆ

Krishi Thapanda ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲೇ ಜೀವ ಕಳೆದುಕೊಂಡ ಆಪ್ತ ಗೆಳೆಯ!

1 Min Read
ದೇಶಪ್ರಮುಖ

Airplane confrontation ರನ್‌ವೇನಲ್ಲಿ ಏರ್ ಇಂಡಿಯಾ- ಇಂಡಿಗೋ ವಿಮಾನ ಮುಖಾಮುಖಿ: ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?