Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress Samanta Ruth Prabhu ಹೌದು, ನಾನು ತಾಯಿಯಾಗುತ್ತಿದ್ದೇನೆ: ಸತ್ಯ ಹೇಳಿದ ನಟಿ ಸಮಂತಾ
ದೇಶಪ್ರಮುಖಮನರಂಜನೆ

Actress Samanta Ruth Prabhu ಹೌದು, ನಾನು ತಾಯಿಯಾಗುತ್ತಿದ್ದೇನೆ: ಸತ್ಯ ಹೇಳಿದ ನಟಿ ಸಮಂತಾ

Share
2 Min Read
SHARE

newsics.com | ನ್ಯೂಸಿಕ್ಸ್

ತಾನು ಶೀಘ್ರದಲ್ಲೇ ತಾಯಿಯಾಗುತ್ತಿರುವುದಾಗಿ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ತಮ್ಮ ಹೊಸ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು, ವೈಯಕ್ತಿಕ ಜೀವನದ ಈ ಸುಂದರ ಬದಲಾವಣೆಗಾಗಿ ಸಿನಿಮಾಗಳಿಂದ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಜೂನ್ 19ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ‘ನನ್ನ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾ ಇಂಟಿ ಬಂಗಾರಂ ಚಿತ್ರದ ಬಳಿಕ ನಾನು ಸಣ್ಣ ವಿರಾಮ ತೆಗೆದುಕೊಳ್ಳಬೇಕಾಗಿದೆ. ನಾನು ಮೆಟರ್ನಿಟಿ ಲೀವ್ ಪಡೆಯುತ್ತಿದ್ದೇನೆ. ಆ ನಂತರ ಮತ್ತೆ ಹೊಸ ಸಿನಿಮಾದೊಂದಿಗೆ ನನ್ನ ಅಭಿಮಾನಿಗಳ ಮುಂದೆ ಬರುತ್ತೇನೆ’ ಎಂದು ಹೇಳಿದ್ದಾರೆ.

ವಿಡಿಯೋ ನೋಡಿಯೇ ಅಭಿಮಾನಿಗಳ ಲೆಕ್ಕಾಚಾರ!:

ಕಳೆದ ಕೆಲವು ದಿನಗಳಿಂದ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರದ ವೇಳೆ ಸಮಂತಾ ಅವರ ಬೇಬಿ ಬಂಪ್ ಕಂಡುಬಂದಿತ್ತು. ಇದನ್ನು ಗಮನಿಸಿದ್ದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಭಾರಿ ಚರ್ಚೆ ನಡೆಸುತ್ತಿದ್ದರು. ಈಗ ಸಮಂತಾ ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಈ ಬಗ್ಗೆ ಮಾತನಾಡಿ, ‘ನಮ್ಮ ಸಿನಿಮಾ ಸೂಪರ್ ಹಿಟ್ ಆಗಿರುವ ಈ ಸುಂದರ ಸಂದರ್ಭದಲ್ಲೇ ಸಮಂತಾ ಅವರ ಜೀವನದಲ್ಲಿ ಇಂತಹದೊಂದು ಖುಷಿಯ ವಿಷಯ ನಡೆದಿರುವುದು ಸಂತಸ ತಂದಿದೆ’ ಎಂದಿದ್ದಾರೆ.

ಸಮಂತಾ ಅವರು ಡಿಸೆಂಬರ್ 2025ರಲ್ಲಿ ಹೆಸರಾಂತ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇವರಿಬ್ಬರ ನಡುವೆ ಸ್ನೇಹ ಬೆಳೆದು ಅದು ಮದುವೆಯ ಹಂತಕ್ಕೆ ಬಂತು. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಸಮಂತಾ ಭರ್ಜರಿ ಕಮ್‌ಬ್ಯಾಕ್:

ಮಯೋಸೈಟಿಸ್ ಎಂಬ ಸ್ನಾಯು ಸಂಬಂಧಿ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಜಾಗತಿಕವಾಗಿ ಕೇವಲ ಕೆಲವೇ ದಿನಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದು ಸಮಂತಾ ಅವರ ಸ್ವಂತ ಬ್ಯಾನರ್ ‘ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್’ ಅಡಿಯಲ್ಲಿ ಮೂಡಿಬಂದ ಮೊದಲ ಚಿತ್ರ.

TAGGED:I am becoming a mother: Actress Samantha tells the truthYes
Share This Article
Facebook Twitter Copy Link Print
Previous Article Ethanol petrol safe ಎಥೆನಾಲ್‌ಮಿಶ್ರಿತ ಪೆಟ್ರೋಲ್‌ನಿಂದ ಯಾವುದೇ ಹಾನಿ ಇಲ್ಲ ಎಂದ ಕೇಂದ್ರ
Next Article Kethan- Siya case ಕೇತನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಸಿಯಾ ಪರ ವಕೀಲರು ಹೇಳ್ತಿರೋದೇನು?

Popular Posts

In-charge Ministers ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?

1 Min Read

Krushi- Vaishak ತಾಪಂಡ ಮನೆಯಲ್ಲೇ ವೈಶಾಕ್ ಆತ್ಮ*ಹ*ತ್ಯೆ ಮಾಡಿಕೊಂಡಿದ್ದೇಕೆ? ಸಾಯುವ ಮುನ್ನ ಗೆಳತಿಗೆ ಹೇಳಿದ್ದೇನು? ಕೃಷಿಗೀಗ ತನಿಖೆ ಭಯ!

3 Min Read

ವಾರಾಣಸಿ ವಿಶ್ವದ ಎರಡನೇ ಸಸ್ಯಾಹಾರಿ ನಗರವಾಗುತ್ತಿದೆಯೇ?

1 Min Read

ಜೈಪುರದ ರಾಜಮನೆತನದ ಮದುವೆಗೆ ಅನಿರೀಕ್ಷಿತ ಅತಿಥಿಯಾದ ಕೊರಿಯನ್ ಪ್ರವಾಸಿಗ; ವಿಡಿಯೋ ವೈರಲ್

1 Min Read

You Might Also Like

ಕರ್ನಾಟಕದೇಶಪ್ರಮುಖ

Kerala highcourt- CM DK ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಬೇಕಾಗುತ್ತಾ? ಕೇರಳ ಹೈಕೋರ್ಟ್ ತೀರ್ಪಿನಿಂದ ಶುರುವಾಯ್ತು ಹೊಸ ಚರ್ಚೆ!

2 Min Read
ಪ್ರಮುಖಕರ್ನಾಟಕದೇಶ

TB Dam Spillways ಟಿಬಿ ಡ್ಯಾಂ ಸ್ಪಿಲ್ ವೇಗಳಿಗೆ ಮೂರೂ ರಾಜ್ಯಗಳ ಸಿಎಂಗಳಿಂದ ಚಾಲನೆ

1 Min Read
ಪ್ರಮುಖಕರ್ನಾಟಕದೇಶ

NCERT- EMERGENCY ಇದೇ ಮೊದಲ ಬಾರಿ NCERT ಪಠ್ಯದಲ್ಲಿ ತುರ್ತುಪರಿಸ್ಥಿತಿ ಪಾಠ

3 Min Read
ಕರ್ನಾಟಕಪ್ರಮುಖಮನರಂಜನೆ

Krishi Thapanda ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲೇ ಜೀವ ಕಳೆದುಕೊಂಡ ಆಪ್ತ ಗೆಳೆಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?