newsics.com | ನ್ಯೂಸಿಕ್ಸ್
ಲೋಹಗಡ್ ಕೋಟೆಯಲ್ಲಿ 400 ಅಡಿ ಆಳದಲ್ಲಿ ಕೇತನ್ ಅಗರ್ವಾಲ್ ಅವರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಫೋಟೋಗೆ ಪೋಸ್ ನೀಡುವಾಗ ಕೇತನ್ ಅಗರ್ವಾಲ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕಥೆ ಕಟ್ಟಲಾಗಿದ್ದ ಕೇಸ್, ಇದೀಗ ಬಿಗ್ ಟ್ವಿಸ್ಟ್ ಕೊಟ್ಟಿದೆ.
ಆರೋಪಿಗಳ ಬಂಧನದ ಬೆನ್ನಲ್ಲೇ ಹತ್ಯೆ ಕೇಸ್ ಕುರಿತ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಿಯಾ ಮತ್ತು ಆಕೆಯ ಗೆಳೆಯ ಚೇತನ್ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿ, ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ. ಸಿಯಾ ಗೋಯಲ್‌ನ ಸ್ನೇಹಿತ ಚೇತನ್ ಚೌಧರಿಯ ವಕೀಲರು ಪೊಲೀಸರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ, ಆರೋಪಿ ಚೇತನ್ ಚೌಧರಿಯ ವಕೀಲ ರಾಮ್ ಶಹಾನೆ ನ್ಯಾಯಾಲಯದಲ್ಲಿ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಪ್ರಕಾರ, ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಅಲ್ಲದೇ ಇಬ್ಬರ ನಡುವೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಲೋಹಗಡ್ ಕೋಟೆಯ ಸುತ್ತಲೂ ನಡೆಯುವಾಗ, ಕೇತನ್ ಜಾರಿ ಕಣಿವೆಗೆ ಬಿದ್ದಿದ್ದಾನೆ. ಆದ್ದರಿಂದ ಇದೊಂದು ಆಕಸ್ಮಿಕ ಘಟನೆ ಎಂದ ವಕೀಲರು ಹೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ ಕೇತನ್ ಕುಟುಂಬದ ಒತ್ತಡದಿಂದಾಗಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವಕೀಲರು ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ವಕೀಲರ ಈ ಹೇಳಿಕೆ, ಪ್ರಕರಣದ ಮೇಲೆ ಮತ್ತಷ್ಟು ಅನುಮಾನ ಮೂಡಿಸಿದೆ.
7 ದಿನ ಆರೋಪಿಗಳು ಕಸ್ಟಡಿಗೆ
ಈ ಮಧ್ಯೆ, ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಕೋರಿದ್ದ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯವು ಒಪ್ಪಿಗೆ ನೀಡಿದೆ. ಇನ್ನು ತನಿಖಾ ಸಂಸ್ಥೆ ಈಗ ಪ್ರಕರಣದ ಎಲ್ಲಾ ಅಂಶಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಲಿದೆ.
ಅಂತೂ ಹುಟ್ಟುಹಬ್ಬ ಆಚರಣೆ, ಟ್ರಕ್ಕಿಂಗ್, ಫೋಟೋ ಶೂಟ್ ಎಂದು ಹೋಗಿದ್ದ ಕೇತನ್ ಇದೀಗ ಮದುವೆಯಾಗಬೇಕಿದ್ದ ಸಿಯಾಳಿಂದಲೇ ದುರಂತವಾಗಿ ಸಾವನ್ನಪ್ಪಿದ್ದಾನೆ. ಇನ್ನು ಸಿಯಾ ಗೋಯೆಲ್ ಪ್ರಿಯಕರ ಚೇತನ್ ಚೌಧರಿಯ ಕೈವಾಡವೂ ಇದರಲ್ಲಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಆತನೇ ಮೂಲ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗುತ್ತಿದೆ.
ಹಂತಕರು ಅಂದರ್, ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಕೇತನ್ ಅಗರವಾಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಿಯಾ ಮತ್ತು ಆಕೆಯ ಗೆಳೆಯ ಚೇತನ್ ಚೌಧರಿಯನ್ನು ವಶಕ್ಕೆ ಪಡೆದಿದ್ದಾರೆ. ಕೇತನ್ ಸಾವಿನ ಪ್ರಕರಣದಲ್ಲಿ ಇದೀಗ ಅತ್ಯಂತ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಸಿಯಾ ಘಟನಾ ಸ್ಥಳದಲ್ಲಿ ಪೊಲೀಸರ ಬಳಿ ಕೇಳುತ್ತಿದ್ದ ಆ ಒಂದು ಪ್ರಶ್ನೆ, ಪ್ರಕರಣದ ಸತ್ಯವನ್ನೆಲ್ಲಾ ಬಯಲು ಮಾಡಿದೆ.
ಹತ್ಯೆ ನಂತರ ಹಂತಕಿ ಸಿಯಾಳ ವರ್ತನೆ, ಪೊಲೀಸರಲ್ಲಿ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತನ್ನ ಮುಖದ ಮೇಲೆ ಆಘಾತ, ಭಯವನ್ನೂ ತೋರಿಸದಿದ್ದರೂ, ಕೇತನ್ ದೇಹವನ್ನು ನೋಡಿಯೂ ಕ್ಯಾರೇ ಮಾಡುತ್ತಿರಲಿಲ್ಲ ಎಂದು ವರದಿಯಾಗಿದೆ. ಇನ್ನು ಪೊಲೀಸ್ ಅಧಿಕಾರಿಯನ್ನು ಆಕೆ “ಅವರು ಎಲ್ಲಿದ್ದಾರೆ? ಅವರು ಸುರಕ್ಷಿತವಾಗಿದ್ದಾರೆಯೇ? ಎಂದು ಪ್ರಶ್ನೆ ಮಾಡುತ್ತಲೇ ಇದ್ದಳು ಎನ್ನಲಾಗಿದೆ.
ಅದೊಂದೇ ಅಲ್ಲದೇ ಸಿಸಿಟಿವಿ ಫೂಟೇಜ್‌ಗಳು, ಕರೆ ವಿವರಗಳು ಪೊಲೀಸರ ತನಿಖೆಗೆ ಮತ್ತಷ್ಟು ಬಲ ಕೊಟ್ಟಿದೆ. ಸದ್ಯ ಪ್ರಕರಣ ಸಂಬಂಧಿಸಿದ ಆರೋಪಿಗಳನ್ನು 7 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
Actress Samanta Ruth Prabhu ಹೌದು, ನಾನು ತಾಯಿಯಾಗುತ್ತಿದ್ದೇನೆ: ಸತ್ಯ ಹೇಳಿದ ನಟಿ ಸಮಂತಾ
Ethanol petrol safe ಎಥೆನಾಲ್‌ಮಿಶ್ರಿತ ಪೆಟ್ರೋಲ್‌ನಿಂದ ಯಾವುದೇ ಹಾನಿ ಇಲ್ಲ ಎಂದ ಕೇಂದ್ರ