newsics.com | ನ್ಯೂಸಿಕ್ಸ್
ನವದೆಹಲಿ: ಏರ್ ಇಂಡಿಯಾ ವಿಮಾನವು ಪಾಕಿಸ್ತಾನ ವಾಯುಪ್ರದೇಶಕ್ಕೆ ಕ್ಷಣಿಕವಾಗಿ ಪ್ರವೇಶಿಸಿದ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, DGCA ತನಿಖೆ ತೀವ್ರಗೊಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೈಲಟ್‌ಗಳು ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಪ್ರಾಥಮಿಕ ವರದಿಯನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ಜೂನ್ 22ರಂದು ದೆಹಲಿ–ಅಮೃತಸರ ಮಾರ್ಗದ AI-479 ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದ ವೇಳೆ go-around ಸೂಚನೆ ಹಿನ್ನೆಲೆಯಲ್ಲಿ ಮಾರ್ಗ ಬದಲಾಯಿಸಿತ್ತು. ಈ ವೇಳೆ ವಿಮಾನವು ಅಲ್ಪಾವಧಿಗೆ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿತ್ತು. ಬಳಿಕ ವಿಮಾನ ಸುರಕ್ಷಿತವಾಗಿ ಭಾರತೀಯ ವಾಯುಪ್ರದೇಶಕ್ಕೆ ಮರಳಿ ಯಾವುದೇ ತೊಂದರೆಯಿಲ್ಲದೆ ಲ್ಯಾಂಡ್ ಆಗಿತ್ತು.
ಈ ಘಟನೆ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ನಿಯಮ ಉಲ್ಲಂಘನೆ ಅಥವಾ ತಾಂತ್ರಿಕ ಲೋಪ ಸಂಭವಿಸಿತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ
Actress Samanta Ruth Prabhu ಹೌದು, ನಾನು ತಾಯಿಯಾಗುತ್ತಿದ್ದೇನೆ: ಸತ್ಯ ಹೇಳಿದ ನಟಿ ಸಮಂತಾ
Kethan- Siya case ಕೇತನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಸಿಯಾ ಪರ ವಕೀಲರು ಹೇಳ್ತಿರೋದೇನು?