newsics.com | ನ್ಯೂಸಿಕ್ಸ್
ಬೆಂಗಳೂರು: ತಾಂತ್ರಿಕ ನವೀಕರಣದ (ಅಪ್‌ಗ್ರೇಡ್) ಹಿನ್ನೆಲೆಯಲ್ಲಿ ಜೂನ್ 25ರ (ಇಂದು) ಮಧ್ಯರಾತ್ರಿಯಿಂದ ರಾಜ್ಯ ಸರ್ಕಾರದ ಪ್ರಮುಖ ಡಿಜಿಟಲ್ ಸೇವೆಗಳು ಸುಮಾರು 24 ಗಂಟೆಗಳ ಕಾಲ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸರ್ಕಾರದ ಇ-ಗವರ್ನೆನ್ಸ್ ಇಲಾಖೆಯು ಡೇಟಾ ಸೆಂಟರ್‌ನ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ಈ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಪೋರ್ಟಲ್‌ಗಳು, ಕಂದಾಯ ಇಲಾಖೆಯ ಸೇವೆಗಳು ಸೇರಿದಂತೆ ಸಾರ್ವಜನಿಕರು ದಿನನಿತ್ಯ ಬಳಸುವ ಪ್ರಮುಖ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರಿಗೆ ಮನವಿ:
ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತು ಭವಿಷ್ಯದಲ್ಲಿ ತಡೆರಹಿತ ಸೇವೆಗಳನ್ನು ನೀಡಲು ಈ ಅಪ್‌ಗ್ರೇಡ್ ಅನಿವಾರ್ಯವಾಗಿದೆ. ಸಾರ್ವಜನಿಕರು ಸಹಕರಿಸಬೇಕು ಹಾಗೂ ತುರ್ತು ಆನ್‌ಲೈನ್ ಕೆಲಸಗಳಿದ್ದರೆ ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು,” ಎಂದು ಸಚಿವರು ವಿನಂತಿಸಿದ್ದಾರೆ. ಜೂನ್ 26ರ ವೇಳೆಗೆ ಎಲ್ಲಾ ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇಂದು ಟಿಬಿ ಡ್ಯಾಂನ 33 ಹೊಸ ಕ್ರಸ್ಟ್ ಗೇಟ್ ಉದ್ಘಾಟನೆ, 3 ಸಿಎಂಗಳ ಸಮಾಗಮ
GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 25-06-2026, ಗುರುವಾರ, ಹೇಗಿದೆ ನಿಮ್ಮ ಇಂದಿನ ಗ್ರಹಗತಿ?
Kethan- Siya case ಕೇತನ್ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್: ಸಿಯಾ ಪರ ವಕೀಲರು ಹೇಳ್ತಿರೋದೇನು?