newsics.com| ನ್ಯೂಸಿಕ್ಸ್
‘ಮಂಗಳೂರಿನಲ್ಲೇ ಇದ್ದಿದ್ದರೆ, ನಾನು ಇಲ್ಲಿನ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಇಲ್ಲಿಯೇ ಶಿಕ್ಷಕನಾಗುತ್ತಿದ್ದೆ’ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದ ರೋಹನ್ ಕಾರ್ಪೊರೇಷನ್ ಸಂಸ್ಥೆಯು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಆಯೋಜಿಸಿದ್ದ ‘ಆಯನ್ ಈವ್ನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ‘ನಮಸ್ಕಾರ ಕುಡ್ಲ, ಎಂಚ ಉಲ್ಲರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಶಾರುಖ್ ಖಾನ್, ‘ನನ್ನ ಅಜ್ಜ ಎನ್ಎಂಪಿಟಿಯಲ್ಲಿ ಎಂಜಿನಿಯರ್ ಆಗಿದ್ದರು. ಆ ವೇಳೆ ಅಂದರೆ, 1965-67ರವರೆಗೆ ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದು ಪಣಂಬೂರಿನ ಕಡಲತೀರದಲ್ಲಿ. ಆಗ ಹಸುಳೆಯಾಗಿದ್ದ ನನಗೆ, ಆ ದಿನಗಳು ನೆನಪಿನಿಂದ ಮರೆಯಾಗಿದ್ದರೂ, ಹಿರಿಯರು ಹೇಳಿದ ಕಥೆಗಳು ಹಸಿರಾಗಿವೆ’ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ತಮ್ಮ ಜೇಬಿನಿಂದ ಬಾಲ್ಯದ ಫೋಟೊ ಒಂದನ್ನು ತೆಗೆದು ತೋರಿಸುತ್ತಾರೆ. ‘ಕರಾವಳಿಯ ಭಾಷೆ, ಸಂಸ್ಕೃತಿ, ಆತಿಥ್ಯ ನನ್ನನ್ನು ಸದಾ ಬರಸೆಳೆಯುತ್ತದೆ. ಮತ್ತೊಮ್ಮೆ ಈ ಮಣ್ಣಿನಲ್ಲಿ ಅಡಿಯಿಡಲು ಅವಕಾಶ ಒದಗಿಸಿದ್ದು ರೋಹನ್ ಕಾರ್ಪೊರೇಷನ್, ಕುಡ್ಲದ ನೀರು ದೋಸೆ ನನಗೆ ಅಚ್ಚುಮೆಚ್ಚು. ನೀರು ದೋಸೆ ತಿನ್ನಲು ಇನ್ನೊಮ್ಮೆ ಬರುತ್ತೇನೆ. ಮುಂಬೈ ಮತ್ತು ಕರಾವಳಿಯ ನಂಟು ಹಳೆಯದು. ಬಹುಸಂಖ್ಯೆಯ ಕರಾವಳಿಗರು ಮುಂಬೈನಲ್ಲಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್, ತಮ್ಮ ವೃತ್ತಿ ಜೀವನದಲ್ಲಿ 34 ವರ್ಷಗಳನ್ನು ಪೂರೈಸಿದ್ದಾರೆ. ಇದೇ ವೇಳೆ ಅವರು ‘ಚಮ್ಮಕ್ ಚಲ್ಲೋ ಮತ್ತು ಜೂಮ್ ಜೋ ಪಠಾಣ್ನಂತಹ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.
King Shah Rukh Khan energetic performance in Jhoome Jo Pathan at Rohan Corporation event in Mangalore 😍 @iamsrk#ShahRukhKhan #SRK #TeamShahRukhKhan #Pathaan #King pic.twitter.com/w3xebadyho
— Team Shah Rukh Khan Fan Club (@teamsrkfc) June 25, 2026
King Shah Rukh Khan performing in Tujhe Dekha Toh Ye Jana Sanam at Rohan Corporation event in Mangalore 😍 @iamsrk#ShahRukhKhan #SRK #DDLJ #Mangalore #TeamShahRukhKhan pic.twitter.com/QoxZpdSnBP
— Team Shah Rukh Khan Fan Club (@teamsrkfc) June 25, 2026
LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ